ಬೆಂಗಳೂರು : ರಾಜ್ಯದಲ್ಲಿಂದು 1,837 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿತರು ಸಾವಿಗೀಡಾಗಿದ್ದಾರೆ. ರಾಜ್ಯಾದ್ಯಂತ ಇಂದು 29,027 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 1,017 ಜನರು ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ 10,922 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿಂದು 1,837 ಮಂದಿಗೆ ಕೋವಿಡ್ ಸೋಂಕು : ಮೂವರು ಸಾವು - ಬೆಂಗಳೂರು
ಬೆಂಗಳೂರಿನಲ್ಲಿಂದು 1,017 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಈಗ 7,279 ಕೊರೊನಾ ಸಕ್ರಿಯ ಪ್ರಕರಣಗಳಿದೆ.
ಕೋವಿಡ್ ಸೋಂಕು
ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.6.32, ವಾರದ ಸೋಂಕಿತರ ಪ್ರಮಾಣ ಶೇ.6.08 ಹಾಗೂ ವಾರದ ಸಾವಿನ ಪ್ರಮಾಣ ಶೇ.0.26 ಇದೆ. ಬೆಂಗಳೂರಿನಲ್ಲಿ ಇಂದು 1,108 ಮಂದಿಗೆ ಕೋವಿಡ್ ಸೋಂಕು ತಗುಲಿದೆ. 610 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಲ್ಲಿ ಈವರೆಗೂ ಕೋವಿಡ್ ಸಾವಿನ ಸಂಖ್ಯೆ 16,978 ಇದ್ದು, 7,279 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ :ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಂಸದೆ ಸುಮಲತಾ