ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 89 ಮಂದಿಗೆ ಕೋವಿಡ್ ಸೋಂಕು, ನಾಲ್ವರು ಸಾವು - ರಾಜ್ಯದ ಕೋವಿಡ್​​ ವರದಿ

ರಾಜ್ಯದಲ್ಲಿಂದು 89 ಮಂದಿಗೆ ಕೋವಿಡ್​ ಸೋಂಕು ತಗುಲಿದೆ. ಪಾಸಿಟಿವ್ ದರ ಶೇ. 0.28 ರಷ್ಟಿದ್ದು, 1792 ಸಕ್ರಿಯ ಪ್ರಕರಣಗಳಿವೆ.

Karnataka  Covid report
ರಾಜ್ಯದ ಕೋವಿಡ್​​ ವರದಿ

By

Published : Mar 25, 2022, 7:17 PM IST

ಬೆಂಗಳೂರು:ರಾಜ್ಯದಲ್ಲಿ ಇಂದು 30,833 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 89 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,45,168ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರ ಶೇ. 0.28 ರಷ್ಟಿದೆ.

85 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 39,03,286 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1792 ಸಕ್ರಿಯ ಪ್ರಕರಣಗಳಿವೆ.

ಸೋಂಕಿಗೆ ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,048 ಏರಿಕೆ ಕಂಡಿದೆ. ಮರಣ ಪ್ರಮಾಣ ಶೇ. 4.49 ರಷ್ಟಿದೆ. ವಿಮಾನ ನಿಲ್ದಾಣದಿಂದ 2,492 ಪ್ರಯಾಣಿಕರು ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿ 73 ಮಂದಿಗೆ ಸೋಂಕು ತಗುಲಿದ್ದು ಒಟ್ಟು ಸೋಂಕಿತರ ಸಂಖ್ಯೆ 17,81,363ಕ್ಕೆ ಏರಿಕೆ ಆಗಿದೆ. 57 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 17,62,795 ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 16,957ಕ್ಕೆ ಏರಿದೆ. ಉಳಿದಂತೆ 1,610 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪ್ಡೇಟ್​​:ಅಲ್ಪಾ- 156, ಬೀಟಾ-08, ಡೆಲ್ಟಾ ಸಬ್ ಲೈನ್ ಏಜ್- 4620, ಇತರೆ- 311, ಒಮಿಕ್ರಾನ್- 3081, BAI.1.529- 828, BA1- 98, BA2- 2155, ಒಟ್ಟು- 8176

ಇದನ್ನೂ ಓದಿ:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ

ABOUT THE AUTHOR

...view details