ಬೆಂಗಳೂರು :ರಾಜ್ಯದಲ್ಲಿ ಇಂದು 1,10,556 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಇದರಲ್ಲಿ 456 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಕರ್ನಾಟಕದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ 29,98,099ಕ್ಕೆ ತಲುಪಿದೆ.
ಇಂದು 330 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ 29,52,708 ಮಂದಿ ಗುಣಮುಖರಾಗಿದ್ದಾರೆ. 6 ಜನರು ವೈರಸ್ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 38,230 ಏರಿದೆ. 6 ಮಂದಿ ಸೋಂಕಿತರು ಇಂದು ಮೃತಪಟ್ಟಿದ್ದಾರೆ.
ಸದ್ಯ 7,132 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣವು ಶೇ.0.41 ಹಾಗೂ ಸಾವಿನ ಪ್ರಮಾಣ ಶೇ.1.31 ಇದೆ. ವಿಮಾನ ನಿಲ್ದಾಣದಲ್ಲಿ 3,634 ಪ್ರಯಾಣಿಕರು ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಕೋವಿಡ್ ಅಬ್ಬರ ಹೆಚ್ಚಾಗಿರುವ ದೇಶಗಳಿಂದ 1,218 ಪ್ರಯಾಣಿಕರು ಆಗಮಿಸಿದ್ದಾರೆ.