ಕರ್ನಾಟಕ

karnataka

ETV Bharat / state

Karnataka Covid: 397 ಮಂದಿಗೆ ಕೋವಿಡ್ ದೃಢ,​ ನಾಲ್ವರು ಸೋಂಕಿತರ ಸಾವು - ಇಂದಿನ ಕೋವಿಡ್​ ವರದಿ

ಕರ್ನಾಟಕದಲ್ಲಿ ಇಂದು ನಾಲ್ವರು ಕೋವಿಡ್​​ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,224ಕ್ಕೆ ಏರಿದೆ. 277 ಜನರು ಚೇತರಿಸಿಕೊಂಡಿದ್ದು, ಇದುವರೆಗೆ 29,52,378 ಮಂದಿ ಗುಣಮುಖರಾದಂತಾಗಿದೆ.

Karnataka Covid
ಕರ್ನಾಟಕ ಕೋವಿಡ್​

By

Published : Dec 4, 2021, 7:57 PM IST

ಬೆಂಗಳೂರು:ರಾಜ್ಯದಲ್ಲಿಂದು 1,12,937 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 397 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,97,643ಕ್ಕೆ ಏರಿಕೆಯಾಗಿದೆ.

ಇಂದು 277 ಜನರು ಚೇತರಿಸಿಕೊಂಡಿದ್ದು, ಇದುವರೆಗೆ 29,52,378 ಮಂದಿ ಗುಣಮುಖರಾದಂತಾಗಿದೆ. ಅಲ್ಲದೇ ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,224ಕ್ಕೆ ಏರಿದೆ. ಸದ್ಯ 7,012 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ.0.35 ಹಾಗೂ ಸಾವಿನ ಪ್ರಮಾಣ ಶೇ. 1.00ರಷ್ಟಿದೆ.

ಬೆಂಗಳೂರು ವರದಿ:

ರಾಜಧಾನಿ ಬೆಂಗಳೂರಿನಲ್ಲಿ 207 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,57,242 ಆಗಿದೆ. ನಗರದಲ್ಲಿ ಇಂದು 159 ಜನರು ಗುಣಮುಖರಾಗಿದ್ದು, 12,35,802 ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,343ಕ್ಕೆ ತಲುಪಿದೆ. ಸದ್ಯ 5096 ಕೋವಿಡ್​​ ಸಕ್ರಿಯ ಪ್ರಕರಣಗಳು ಇವೆ.

ರೂಪಾಂತರಿ ಮಾಹಿತಿ:
ಅಲ್ಫಾ - 155
ಬೇಟಾ - 08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ಏಜ್ - 558
ಕಪ್ಪಾ - 160
ಈಟಾ - 01
ಒಮಿಕ್ರಾನ್ - 02

ಇದನ್ನೂ ಓದಿ:ಕೊರೊನಾ ಪ್ರಸರಣ ಕಡಿಮೆ ಮಾಡುವ ಚ್ಯುಯಿಂಗ್ ಗಮ್ ಅಭಿವೃದ್ಧಿಪಡಿಸುತ್ತಿರುವ ವಿಜ್ಞಾನಿಗಳು..!

ABOUT THE AUTHOR

...view details