ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು ಕೋವಿಡ್​ನಿಂದ ಶೂನ್ಯ ಸಾವು; ಬೆಂಗಳೂರಿನಲ್ಲಿ ಪ್ರಕರಣಗಳ ಕೊಂಚ ಏರಿಕೆ

ಬೆಂಗಳೂರಿನಲ್ಲಿ 127 ಮಂದಿಗೆ ಸೋಂಕು ತಗುಲಿದ್ದು 17,83,464ಕ್ಕೆ ಏರಿಕೆ ಆಗಿದೆ. 141 ಮಂದಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 17,64,834 ಜನರು ಚೇತರಿಸಿಕೊಂಡಿದ್ದಾರೆ.

karnataka-covid-report-today
ಕರ್ನಾಟಕ ಕೋವಿಡ್ ಕೇಸ್​

By

Published : Apr 29, 2022, 9:22 PM IST

ಬೆಂಗಳೂರು:ರಾಜ್ಯದಲ್ಲಿಂದು 11,415 ಮಂದಿಗೆ ಕೋವಿಡ್​ ಪರೀಕ್ಷೆ ನಡೆಸಿದ್ದು, 133 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,47,496ಕ್ಕೆ ಏರಿಕೆ ತಲುಪಿದೆ.‌ ಪಾಸಿಟಿವ್ ದರ 1.16%ಕ್ಕೆ ಏರಿಕೆ ಕಂಡಿದೆ.

ಇತ್ತ 147 ಸೋಂಕಿತರು ಗುಣಮುಖರಾಗಿದ್ದು, ಈತನಕ 39,05,660 ಮಂದಿ ಚೇತರಿಸಿಕೊಂಡಿದ್ದಾರೆ. ಇಂದು ಸೋಂಕಿನಿಂದ ಸಾವು ಸಂಭವಿಸಿಲ್ಲ, ಇದುವರೆಗೆ 40,057 ಮೃತಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ 1,713 ಸಕ್ರಿಯ ಪ್ರಕರಣಗಳಿವೆ. ವಿಮಾನ ನಿಲ್ದಾಣದಿಂದ 3,447 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 127 ಮಂದಿಗೆ ಸೋಂಕು ತಗುಲಿದ್ದು, 17,83,464ಕ್ಕೆ ಏರಿಕೆ ಆಗಿದೆ. 141 ಮಂದಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 17,64,834 ಜನರು ಚೇತರಿಸಿಕೊಂಡಿದ್ದಾರೆ. ರಾಜಧಾನಿಯಲ್ಲಿ ಸದ್ಯ 1,667 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಮಾಹಿತಿ:ಅಲ್ಪಾ - 156, ಬೇಟಾ - 08, ಡೆಲ್ಟಾ ಸಬ್ ಲೈನೇಜ್ - 4623, ಇತರೆ - 331, ಒಮಿಕ್ರಾನ್ - 5422, BAI.1.529 - 1005, BA1 - 100, BA2 - 4317, ಒಟ್ಟು - 10,540

ABOUT THE AUTHOR

...view details