ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 767 ಮಂದಿಗೆ ಕೋವಿಡ್ ದೃಢ : 29 ಸೋಂಕಿತರು ಬಲಿ

Karnataka COVID report.. ರಾಜ್ಯದಲ್ಲಿ ಇಂದು ಕೇವಲ 767 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಪಾಸಿಟಿವಿಟಿ ದರವು ಶೇ.1.31 ಆಗಿದ್ದು, ಮೃತರ ಪ್ರಮಾಣ ಶೇ.3.77 ರಷ್ಟಿದೆ.

ಕೋವಿಡ್ ವರದಿ
ಕೋವಿಡ್ ವರದಿ

By

Published : Feb 22, 2022, 8:35 PM IST

ಬೆಂಗಳೂರು:ರಾಜ್ಯದಲ್ಲಿಂದು 58,459 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 767 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,38,032 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವಿಟಿ ದರವೂ 1.31% ರಷ್ಟಿದೆ.

ಇತ್ತ 1,692 ಸೋಂಕಿತರು ಗುಣಮುಖರಾಗಿದ್ದು, ಈತನಕ 38,87,744 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 10,406 ಸಕ್ರಿಯ ಪ್ರಕರಣಗಳಿದ್ದು, ಇಂದು ಸೋಂಕಿಗೆ 29 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 39,845 ಏರಿಕೆ ಕಂಡಿದೆ. ಡೆತ್ ರೇಟ್​​ 3.77% ರಷ್ಟಿದೆ. ವಿಮಾನ ನಿಲ್ದಾಣದಿಂದ 3,076 ಪ್ರಯಾಣಿಕರು ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿ 552 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ 17,76,725ಕ್ಕೆ ಏರಿದೆ. 916 ಮಂದಿ ಡಿಸ್ಚಾರ್ಜ್ ಆಗಿದ್ದರೆ, ಈವರೆಗೆ 17,54,627 ಜನರು ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಇಂದು 14 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,842ಕ್ಕೆ ತಲುಪಿದೆ. ಸದ್ಯ ನಗರದಲ್ಲಿ 5,255 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪಡೇಟ್ಸ್..

ಅಲ್ಪಾ- 156

ಬೀಟಾ-08

ಡೆಲ್ಟಾ ಸಬ್ ಲೈನೇಜ್- 4,431

ಇತರೆ- 286

ಒಮಿಕ್ರಾನ್-1,115

BAI.1.529- 807

BA1- 89

BA2-219

ಒಟ್ಟು- 5,996

ABOUT THE AUTHOR

...view details