ಬೆಂಗಳೂರು:ರಾಜ್ಯದಲ್ಲಿಂದು 90,688 ಜನರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, 1,579 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,33,115 ಕ್ಕೆ ಏರಿದೆ.
ಪಾಸಿಟಿವ್ ದರ ಶೇ. 1.74 ಹಾಗೂ ಡೆತ್ ರೇಟ್ ಶೇ. 1.45ರಷ್ಟಿದೆ. ಇತ್ತ 5,079 ಸೋಂಕಿತರು ಗುಣಮುಖರಾಗಿದ್ದು, ಈತನಕ 38,73,580 ಮಂದಿ ಚೇತರಿಕೆ ಆಗಿದ್ದಾರೆ.
ಸದ್ಯ 19,761 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ 23 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,738 ಏರಿಕೆ ಕಂಡಿದೆ. ವಿಮಾನ ನಿಲ್ದಾಣದಿಂದ 1,325 ಪ್ರಯಾಣಿಕರು ಆಗಮಿಸಿದ್ದಾರೆ.
ಇದನ್ನೂ ಓದಿ:ಧರಣಿ ನಿರತ ಡಿಕೆಶಿ ಭೇಟಿಯಾದ ಸ್ಪೀಕರ್ ಕಾಗೇರಿ.. ಹಳೆ ಘಟನೆ ಮೆಲಕು ಹಾಕಿದ ನಾಯಕರು
ಬೆಂಗಳೂರು ಕೋವಿಡ್:ರಾಜಧಾನಿಯಲ್ಲಿ 769 ಮಂದಿಗೆ ಸೋಂಕು ದೃಢಪಟ್ಟಿದ್ದು, 17,73,991ಕ್ಕೆ ಏರಿಕೆ ಆಗಿದೆ. 1889 ಮಂದಿ ಗುಣಮುಖರಾಗಿದ್ದು, ಈವರೆಗೆ 17,48,371 ಜನರು ಚೇತರಿಸಿಕೊಂಡಂತಾಗಿದೆ. ಇಂದು 7 ಸೋಂಕಿತರು ಮೃತರಾಗುವ ಮೂಲಕ ಸಾವಿನ ಸಂಖ್ಯೆ 16,791 ತಲುಪಿದೆ. ಸದ್ಯ 8,828 ಸಕ್ರಿಯ ಪ್ರಕರಣಗಳು ಇವೆ.
- ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೇಟಾ - 08
- ಡೆಲ್ಟಾ ಸಬ್ ಲೈನ್ ಏಜ್ - 4,431
- ಇತರೆ - 286
- ಒಮಿಕ್ರಾನ್ - 1,115
- BAI.1.529 - 807
- BA1 - 89
- BA2 - 219
- ಒಟ್ಟು - 5,996