ಬೆಂಗಳೂರು: ರಾಜ್ಯದಲ್ಲಿಂದು 99,516 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು ಅದರಲ್ಲಿ 1,894 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,31,536 ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರವೂ 1.90% ರಷ್ಟಿದೆ.
ಇತ್ತ 5,418 ಸೋಂಕಿತರು ಗುಣಮುಖರಾಗಿದ್ದು ಈ ತನಕ 38,68,501 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 23,284 ಸಕ್ರಿಯ ಪ್ರಕರಣಗಳಿವೆ. ಇಂದು ಸೋಂಕಿಗೆ 24 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 39,715 ಏರಿಕೆ ಕಂಡಿದೆ. ಡೆತ್ ರೇಟ್ 1.26 ರಷ್ಟಿದೆ. ವಿಮಾನನಿಲ್ದಾಣ ದಿಂದ 1,575 ಪ್ರಯಾಣಿಕರು ಆಗಮಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ 835 ಮಂದಿಗೆ ಸೋಂಕು ದೃಢಪಟ್ಟಿದ್ದು, 17,73,222ಕ್ಕೆ ಏರಿಕೆ ಆಗಿದೆ. 1,979 ಮಂದಿ ಡಿಸ್ಜಾರ್ಜ್ ಆಗಿದ್ದು ಈ ತನಕ 17,46,482 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ನಾಲ್ವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,784 ಏರಿಕೆ ಕಂಡಿದೆ. ಸದ್ಯ 9,955 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ವೈರಸ್ ಅಪಡೇಟ್ಸ್ :
ಅಲ್ಪಾ- 156
ಬೇಟಾ-08