ಬೆಂಗಳೂರು :ರಾಜ್ಯದಲ್ಲಿಂದು 1,29,337 ಮಂದಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ 8,425 ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಇಳಿಕೆಯತ್ತ ಸಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 38,96,158 ಏರಿಕೆ ಆಗಿದೆ.
ಇತ್ತ 19,800 ಸೋಂಕಿತರು ಗುಣಮುಖರಾಗಿದ್ದು, ಈತನಕ 37,58,997 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 97,781ರಷ್ಟಿವೆ. ಸೋಂಕಿಗೆ 47 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,347 ಏರಿಕೆ ಕಂಡಿದೆ.
ಇವತ್ತಿನ ಪಾಸಿಟಿವ್ ರೇಟು 6.51%ರಷ್ಟಿದ್ದರೆ, ಡೆತ್ ರೇಟ್ 0.55% ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 1,406ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 318ವಿದೇಶಿಗರು ಹೈರಿಸ್ಕ್ ದೇಶದಿಂದ ಆಗಮಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 3,822 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,57,458ಕ್ಕೆ ಏರಿದೆ. 9,893 ಜನರು ಡಿಸ್ಜಾರ್ಜ್ ಆಗಿದ್ದು,17,01,127 ಗುಣಮುಖರಾಗಿದ್ದಾರೆ. 17 ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 16,676 ರಷ್ಟಿದ್ದು, ಸದ್ಯ ಲಕ್ಷದಲ್ಲಿದ್ದ ಸಕ್ರಿಯ ಪ್ರಕರಣಗಳು 39,654 ಇಳಿಕೆ ಕಂಡಿದೆ.