ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 12,009 ಮಂದಿಗೆ ಕೋವಿಡ್.. ​ಸೋಂಕಿನಿಂದ 50 ಮಂದಿ ಸಾವು - ಇಂದಿನ ಕೊರೊನಾ ಪ್ರಕರಣ

ರಾಜ್ಯದಲ್ಲಿ ಕೋವಿಡ್​ ‌ಸೋಂಕಿಗೆ ಇಂದು 50 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,300 ಏರಿಕೆ ಕಂಡಿದೆ. ಇವತ್ತಿನ ಪಾಸಿಟಿವ್ ದರ ಶೇ. 09.04 ಹಾಗೂ ಸಾವಿನ ದರ ಶೇ. 0.41ರಷ್ಟಿದೆ..

karnataka covid report today
ರಾಜ್ಯದಲ್ಲಿಂದು 12,009 ಮಂದಿಗೆ ಕೋವಿಡ್.. ​ಸೋಂಕಿನಿಂದ 50 ಮಂದಿ ಸಾವು

By

Published : Feb 5, 2022, 8:07 PM IST

ಬೆಂಗಳೂರು:ರಾಜ್ಯದಲ್ಲಿ ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಇಳಿಕೆಯತ್ತ ಸಾಗಿದೆ.‌ ಇಂದು 1,32,796 ಮಂದಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ 12,009 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮೂಲಕ ಸೋಂಕಿತರ ಸಂಖ್ಯೆ 38,87,733 ಏರಿಕೆ ಆಗಿದೆ. ಇತ್ತ 25,854 ಸೋಂಕಿತರು ಗುಣಮುಖರಾಗಿದ್ದು, ಈ ತನಕ 37,39,197 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 1,09,203 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ಕೋವಿಡ್​ ‌ಸೋಂಕಿಗೆ ಇಂದು 50 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,300 ಏರಿಕೆ ಕಂಡಿದೆ. ಇವತ್ತಿನ ಪಾಸಿಟಿವ್ ದರ ಶೇ. 09.04 ಹಾಗೂ ಸಾವಿನ ದರ ಶೇ. 0.41ರಷ್ಟಿದೆ. ವಿಮಾನ‌ ನಿಲ್ದಾಣದಲ್ಲಿ 1086 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 447 ಮಂದಿ ಹೈರಿಸ್ಕ್ ದೇಶಗಳಿಂದ ಬಂದಿಳಿದಿದ್ದಾರೆ.

ಬೆಂಗಳೂರು ಕೋವಿಡ್​:ರಾಜಧಾನಿಯಲ್ಲಿ 4,532 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,53,636ಕ್ಕೆ ಏರಿದೆ. 10,420 ಜನರು ಚೇತರಿಸಿಕೊಂಡಿದ್ದು, ಇದುವರೆಗೆ 16,91,234 ಗುಣಮುಖರಾಗಿದ್ದಾರೆ. 15 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,659 ತಲುಪಿದೆ. ಸದ್ಯ 45,742 ಸಕ್ರಿಯ ಪ್ರಕರಣಗಳು ಇವೆ.

ರೂಪಾಂತರಿ ಮಾಹಿತಿ:

  • ಅಲ್ಪಾ - 156
  • ಬೇಟಾ - 08
  • ಡೆಲ್ಟಾ ಸಬ್ ಲೈನೇಜ್​​ - 4,431
  • ಇತರೆ- 286
  • ಒಮಿಕ್ರಾನ್ - 1,115

ಇದನ್ನೂ ಓದಿ:ಅಕ್ರಮ ಸ್ಪಾಗಳ ಮೇಲೆ ಸಿಸಿಬಿ ದಾಳಿ : ಇಬ್ಬರ ಬಂಧನ, 13 ಮಹಿಳೆಯರ ರಕ್ಷಣೆ, 9 ಮಂದಿಯ ವಿರುದ್ಧ FIR

ABOUT THE AUTHOR

...view details