ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 14,950 ಕೋವಿಡ್ ಕೇಸ್​.. 53 ಜನರು ಸೋಂಕಿಗೆ ಬಲಿ - ಇಂದಿನ ಕೊರೊನಾ ಪ್ರಕರಣ

Karnataka COVID report today : ರಾಜ್ಯದಲ್ಲಿ ಇಂದು ಹೊಸದಾಗಿ 14,950 ಜನರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಅಲ್ಲದೆ ವೈರಸ್​ನಿಂದ 40,599 ಸೋಂಕಿತರು ಗುಣಮುಖರಾಗಿದ್ದಾರೆ..

karnataka covid report today
ಕೊರೊನಾ ಪಾಸಿಟಿವ್​

By

Published : Feb 4, 2022, 7:43 PM IST

Updated : Feb 4, 2022, 9:22 PM IST

ಬೆಂಗಳೂರು :ರಾಜ್ಯದಲ್ಲಿಂದು 14,950 ಕೋವಿಡ್ ಪಾಸಿಟಿವ್​ ಪ್ರಕರಣ ಪತ್ತೆಯಾಗಿದ್ದು, 53 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

1,36,777 ಜನರಿಗೆ ಕೋವಿಡ್​ ಪರೀಕ್ಷೆ ನಡೆಸಲಾಗಿದ್ದು, ಸಕ್ರಿಯ ಪ್ರಕರಣಗಳು 1,23,098 ಇವೆ. ಇತ್ತ 40,599 ಸೋಂಕಿತರು ಗುಣಮುಖರಾಗಿದ್ದು, ಈತನಕ 37,13,343 ಮಂದಿ ಚೇತರಿಸಿಕೊಂಡಂತಾಗಿದೆ. ಇದುವರೆಗೆ ರಾಜ್ಯದಲ್ಲಿ 39,250 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಸದ್ಯ 1,23,098 ಸಕ್ರಿಯ ಪ್ರಕರಣಗಳು ಇದ್ದು, ‌ಇವತ್ತಿನ ಪಾಸಿಟಿವ್ ದರ ಶೇ. 10.93 ಹಾಗೂ ಸಾವಿನ ದರ ಶೇ. 0.35ರಷ್ಟಿದೆ. ಇಂದು ವಿಮಾನ ನಿಲ್ದಾಣದಿಂದ 720 ಮಂದಿ ಆಗಮಿಸಿದ್ದು, ಎಲ್ಲರೂ ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದಾರೆ. 105 ಜನರು ಹೈರಿಸ್ಕ್​ ದೇಶಗಳಿಂದ ಬಂದಿಳಿದಿದ್ದಾರೆ.

ಬೆಂಗಳೂರು ಕೋವಿಡ್​:ರಾಜಧಾನಿಯಲ್ಲಿ ಇಂದು 6,039 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,49,104ಕ್ಕೆ ಏರಿಕೆ ಆಗಿದೆ. 25,904 ಮಂದಿ ಇಂದು ಬಿಡುಗಡೆಯಾಗಿದ್ದು, ಇದುವರೆಗೂ 16,80,814 ಮಂದಿ ಚೇತರಿಸಿಕೊಂಡಿದ್ದಾರೆ. ಇಂದು 15 ಸೋಂಕಿತರು ಮೃತಪಟ್ಟಿದ್ದಾರೆ. ಸದ್ಯ 51,645 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೋವಿಡ್​ ಪ್ರಕರಣಗಳ ವಿವರ

ಇದನ್ನೂ ಓದಿ:ಧರ್ಮದ ಹೆಸರಿನಲ್ಲಿ ಮನಸ್ಸಿಗೆ ನೋವು ಮಾಡಿಕೊಳ್ಳುವುದಕ್ಕಿಂತ.. ಹೀಗೆ ಮಾಡಿ ಅಂದರು ಡಿಕೆಶಿ..

Last Updated : Feb 4, 2022, 9:22 PM IST

ABOUT THE AUTHOR

...view details