ಬೆಂಗಳೂರು:ರಾಜ್ಯದಲ್ಲಿ ಇಂದು ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದೆ. ಹೊಸದಾಗಿ 27,156 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ
ಇಂದು 2,17,998 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಸಕ್ರಿಯ ಪ್ರಕರಣಗಳು 2 ಲಕ್ಷ ದಾಟಿದೆ. ಒಟ್ಟೂ ಈವರೆಗಿನ ಸೋಂಕಿತರ ಸಂಖ್ಯೆಯು 32,47,243ಕ್ಕೆ ತಲುಪಿದೆ.
7,827 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈ ತನಕ 29,91,472 ಮಂದಿ ಚೇತರಿಕೆ ಕಂಡಿದ್ದಾರೆ. ಇಂದು 14 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,445 ಏರಿದೆ. ಸದ್ಯ 2,17, 297 ಸಕ್ರಿಯ ಪ್ರಕರಣಗಳಿವೆ.
ಇವತ್ತಿನ ಪಾಸಿಟಿವಿಟಿ ಪ್ರಮಾಣವು ಶೇ. 12.55ಕ್ಕೆ ಇಳಿದಿದ್ದು, ಸಾವಿನ ಪ್ರಮಾಣ ಶೇ. 0.05ರಷ್ಟಿದೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ 1,081 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈ ರಿಸ್ಕ್ ದೇಶಗಳಿಂದ 565 ಪ್ರಯಾಣಿಕರು ಬಂದಿಳಿದಿದ್ದಾರೆ.
ಬೆಂಗಳೂರು ಕೋವಿಡ್:
ರಾಜಧಾನಿ ಬೆಂಗಳೂರಿನಲ್ಲಿ 15,947 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 14,32,754ಕ್ಕೆ ತಲುಪಿದೆ. ಇಂದು 4,888 ಜನರು ಗುಣಮುಖರಾಗಿದ್ದು, ಇಲ್ಲಿಯವವರೆಗೆ 12,59,041 ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ. ಐವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,458 ಆಗಿದೆ. ನಗರದಲ್ಲಿ 1,57,254 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಮಾಹಿತಿ:
ಅಲ್ಪಾ - 156