ಬೆಂಗಳೂರು: ರಾಜ್ಯದಲ್ಲಿಂದು 929 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಐವರು ಸೋಂಕಿತರು ಸಾವಿಗೀಡಾಗಿದ್ದಾರೆ. ರಾಜ್ಯಾದ್ಯಂತ ಇಂದು 23,128 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 929 ಮಂದಿಗೆ ಸೋಂಕು ದೃಢಪಟ್ಟಿದೆ. 987 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಒಟ್ಟು 7,859 ಸಕ್ರಿಯ ಪ್ರಕರಣಗಳಿವೆ.
ಕರ್ನಾಟಕ ಕೋವಿಡ್ ವರದಿ.. ಇಂದು 929 ಮಂದಿಗೆ ಕೋವಿಡ್, ಐವರು ಸೋಂಕಿತರು ಸಾವು - Etv bharat kannada
Karnataka Covid Report... ರಾಜ್ಯದಲ್ಲಿಂದು 929 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ.
ಕರ್ನಾಟಕ ಕೋವಿಡ್ ವರದಿ
ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.4.01. ವಾರದ ಸೋಂಕಿತರ ಪ್ರಮಾಣ ಶೇ.4.88ರಷ್ಟಿದೆ. ಈ ವಾರದ ಸಾವಿನ ಪ್ರಮಾಣ ಶೇ.0.28 ಇದೆ. ಬೆಂಗಳೂರಿನಲ್ಲಿ ಇಂದು 429 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,63,210 ಕ್ಕೆ ಏರಿಕೆ ಆಗಿದೆ. ಇಂದು 646 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಲ್ಲಿ ಈವರೆಗೂ ಕೋವಿಡ್ನಿಂದ 16,981 ಜನ ಮೃತಪಟ್ಟಿದ್ದಾರೆ. ರಾಜಧಾನಿಯಲ್ಲಿ 4,911 ಸಕ್ರಿಯ ಪ್ರಕರಣಗಳಿವೆ.
(ಇದನ್ನೂ ಓದಿ: ಹಾವೇರಿ: ಕೋವಿಡ್ನಿಂದ ಮೃತಪಟ್ಟ ಎರಡು ಕುಟುಂಬಕ್ಕೆ ಸಿಗದ ಪರಿಹಾರ)