ಬೆಂಗಳೂರು: ರಾಜ್ಯದಲ್ಲಿಂದು 78,958 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 397 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,78,286 ಏರಿಕೆ ಆಗಿದೆ.
ರಾಜ್ಯದಲ್ಲಿ ಇಳಿಕೆಯತ್ತ ಕೊರೊನಾ; 397 ಮಂದಿಗೆ ಸೋಂಕು, 13 ಜನ ಸಾವು - karnataka covid daily update news ,
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇಂದು ಕೊರೊನಾದಿಂದ 13 ಜನರು ಸಾವಿಗೀಡಾಗಿದ್ದರೆ, 397 ಮಂದಿಗೆ ಸೋಂಕು ವಕ್ಕರಿಸಿದೆ.
ಇಂದು 693 ಮಂದಿ ಡಿಸ್ಚಾರ್ಜ್ ಆಗಿದ್ದರೆ, ಈವರೆಗೆ 29,28,433 ಗುಣಮುಖರಾಗಿದ್ದಾರೆ. 13 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,832 ಕ್ಕೆ ಏರಿಕೆ ಆಗಿದೆ.
ಸದ್ಯ ಸಕ್ರಿಯ ಪ್ರಕರಣಗಳು 11,992 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.50% ರಷ್ಟಿದ್ದರೆ, ಸಾವಿನ ಪ್ರಮಾಣ 3.27% ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 5,106 ಪ್ರಯಾಣಿಕರು ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ 648 ಪ್ರಯಾಣಿಕರು ಆಗಮಿಸಿದ್ದಾರೆ.
ರೂಪಾಂತರಿ ವೈರಸ್ ಅಪ್ಡೇಟ್
ಅಲ್ಫಾ- 155
ಬೀಟಾ- 08
ಡೆಲ್ಟಾ- 1653
ಡೆಲ್ಟಾ ಪ್ಲಸ್- 04
ಡೆಲ್ಟಾ ಸಬ್ ಲೈನ್ಏಜ್- 202
ಡೆಲ್ಟಾ ಸಬ್ ಲೈನ್ಏಜ್ AY.12H -14
ಕಪ್ಪಾ- 160
ಈಟಾ- 01