ಬೆಂಗಳೂರು :ರಾಜ್ಯದಲ್ಲಿ ದಿನನಿತ್ಯದ ಕೋವಿಡ್ ಪ್ರಕರಣಗಳಲ್ಲಿ ಭಾರಿ ಇಳಿಮುಖ ಕಂಡು ಬಂದಿದೆ. ಇಂದು 99,254 ಮಂದಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ 6,151 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,02,309 ಏರಿಕೆ ಆಗಿದೆ.
ಇತ್ತ 16,802 ಸೋಂಕಿತರು ಗುಣಮುಖರಾಗಿದ್ದು, ಈತನಕ 37,75,799 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 39,396 ಸಕ್ರಿಯ ಪ್ರಕರಣಗಳು ಇವೆ. ಸೋಂಕಿಗೆ 49ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,396 ಏರಿಕೆ ಕಂಡಿದೆ.
ಇದನ್ನೂ ಓದಿ:ಶಾಸಕ ರಾಜಕುಮಾರ್ ಬಳಿ 2 ಕೋಟಿ ರೂ. ಬೇಡಿಕೆ ಆರೋಪ : ನಾಳೆ ವಿಚಾರಣೆಗೆ ಹಾಜರಾಗಲು ಸಂತ್ರಸ್ತೆಗೆ ನೋಟಿಸ್
ಇವತ್ತಿನ ಪಾಸಿಟಿವ್ ದರ ಶೇ. 6.19 ಹಾಗೂ ಸಾವಿದ ದರ ಶೇ. 0.79ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 1,284 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 677 ವಿದೇಶಿಗರು ಹೈರಿಸ್ಕ್ ದೇಶದಿಂದ ಬಂದಿಳಿದಿದ್ದಾರೆ.
ರಾಜಧಾನಿ ಕೋವಿಡ್ : ಬೆಂಗಳೂರಿನಲ್ಲಿ 2,718 ಮಂದಿಗೆ ಇಂದು ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,60,176ಕ್ಕೆ ಏರಿದೆ. 6,726 ಜನರು ಡಿಸ್ಜಾರ್ಜ್ ಆಗಿದ್ದು, ಇಲ್ಲಿಯತನಕ 17,07,853 ಗುಣಮುಖರಾಗಿದ್ದಾರೆ. 15 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,691ಕ್ಕೆ ಏರಿದೆ. ಸದ್ಯ 39,396 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಮಾಹಿತಿ:
- ಅಲ್ಪಾ- 156
- ಬೇಟಾ-08
- ಡೆಲ್ಟಾ ಸಬ್ ಲೈನ್ ಏಜ್- 4,431
- ಇತರೆ- 286
- ಒಮಿಕ್ರಾನ್-1,115