ಬೆಂಗಳೂರು: ರಾಜ್ಯದಲ್ಲಿಂದು 1151 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಯಾವುದೇ ಸಾವು ಸಂಭವಿಸಿಲ್ಲ. ರಾಜ್ಯಾದ್ಯಂತ ಇಂದು 25,481 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 1,151 ಮಂದಿಗೆ ಸೋಂಕು ದೃಢಪಟ್ಟಿದೆ. 837 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ.
ಸದ್ಯ ರಾಜ್ಯದಲ್ಲಿ ಒಟ್ಟು 9,162 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ. 4. 51 ಇದೆ. ವಾರದ ಸೋಂಕಿತರ ಪ್ರಮಾಣ ಶೇ. 4.90 ರಷ್ಟಿದೆ. ಈ ವಾರದ ಸಾವಿನ ಪ್ರಮಾಣ ಶೇ. 0.01 ಇದೆ.