ಬೆಂಗಳೂರು: ರಾಜ್ಯದಲ್ಲಿಂದು 27,838 ಜನರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಅದರಲ್ಲಿ 109 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,44,714 ಕ್ಕೆ ಏರಿಕೆ ಆಗಿದೆ.
ಪಾಸಿಟಿವ್ ದರವೂ 0.39% ರಷ್ಟಿದೆ. ಇತ್ತ 143 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 39,02,640 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1995 ರಷ್ಟಿದೆ. ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,037 ಏರಿಕೆ ಕಂಡಿದೆ.
ಡೆತ್ ರೇಟ್ 1.83% ರಷ್ಟಿದೆ. ವಿಮಾನ ನಿಲ್ದಾಣದಿಂದ 3,312 ಪ್ರಯಾಣಿಕರು ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ 91 ಮಂದಿಗೆ ಸೋಂಕು ತಗುಲಿದ್ದು, 17,81,007 ಕ್ಕೆ ಏರಿಕೆ ಆಗಿದೆ. 125 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 17,62,349ಕ್ಕೆ ಏರಿಕೆ ಕಂಡಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 16,951 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,706 ಕ್ಕೆ ತಲುಪಿದೆ.
ರೂಪಾಂತರಿ ವೈರಸ್ ಅಪ್ಡೇಟ್ಸ್..
ಅಲ್ಪಾ- 156
ಬೀಟಾ-08
ಡೆಲ್ಟಾ ಸಬ್ಲೈನೇಜ್- 4619