ಬೆಂಗಳೂರು:ರಾಜ್ಯದಲ್ಲಿಂದು 76,420 ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 254 ಜನರಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,89,014 ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ 0.33 % ರಷ್ಟು ದಾಖಲಾಗಿದೆ. 316 ಸೋಂಕಿತರು ಗುಣಮುಖರಾಗಿದ್ದು, ಈ ತನಕ 29,42,588 ಜನ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 8,306 ರಷ್ಟು ಇದೆ.
2 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,091 ಕ್ಕೆ ಏರಿದೆ. ಮೃತರ ಶೇಕಡಾವಾರು ಪ್ರಮಾಣ 0.78 ರಷ್ಟು ದಾಖಲಾಗಿದೆ. ವಿಮಾನ ನಿಲ್ದಾಣದಲ್ಲಿ 10,987 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ 1345 ಪ್ರಯಾಣಿಕರು ಬಂದಿದ್ದಾರೆ.
ಬೆಂಗಳೂರಿನಲ್ಲಿ 151 ಜನರಿಗೆ ವೈರಸ್ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,52,257 ಕ್ಕೆ ಏರಿಕೆ ಆಗಿದೆ. 173 ಜನರು ಗುಣಮುಖರಾಗಿದ್ದು, 12,29,570 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,285 ಕ್ಕೆ ಏರಿಕೆ ಆಗಿದೆ. ಸದ್ಯ 6401 ಸಕ್ರಿಯ ಪ್ರಕರಣಗಳು ಇವೆ.
ರೂಪಾಂತರಿ ವೈರಸ್ ಅಪ್ಡೇಟ್ಸ್
1)ಡೆಲ್ಟಾ (Delta/B.617.2) - 1698
2)ಅಲ್ಪಾ (Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೆಟಾ ವೈರಸ್ (BETA/B.1.351) -8
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1
7) ಡೆಲ್ಟಾ ಸಬ್ಲೈನ್ ಏಜ್ AY.4- 300
8) ಡೆಲ್ಟಾ ಸಬ್ಲೈನ್ ಏಜ್ AY .12- 15
ಇದನ್ನೂ ಓದಿ:ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ: ಸಿದ್ದರಾಮಯ್ಯ