ಕರ್ನಾಟಕ

karnataka

ETV Bharat / state

COVID Report..ರಾಜ್ಯದಲ್ಲಿಂದು 462 ಮಂದಿಗೆ ಸೋಂಕು, 9 ಜನ ಸಾವು

ರಾಜ್ಯದಲ್ಲಿಂದು 462 ಕೋವಿಡ್ ಪ್ರಕರಣಗಳು ಕಂಡು ಬಂದಿದ್ದು, 09 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

covid Bulletin
covid Bulletin

By

Published : Oct 20, 2021, 6:57 PM IST

ಬೆಂಗಳೂರು: ರಾಜ್ಯದಲ್ಲಿಂದು 1,16,121 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 462 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,84,484ಕ್ಕೆ ಏರಿಕೆ ಆಗಿದೆ. 479 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 29,37,405 ಜನ ಗುಣಮುಖರಾಗಿದ್ದಾರೆ.

ಇಂದು 09 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,976 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 9,074 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.39 ರಷ್ಟಿದ್ದರೆ ಸಾವಿನ ಪ್ರಮಾಣ ಶೇ.1.94 ರಷ್ಟಿದೆ.

ರಾಜಧಾನಿಯಲ್ಲಿ 253 ಮಂದಿಗೆ ಸೋಂಕು:

ಇಂದು ಬೆಂಗಳೂರಲ್ಲಿ 253 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,49,915 ಏರಿಕೆ ಆಗಿದೆ. 263 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 12,26,929 ಜನ ಡಿಸ್ಚಾರ್ಜ್ ಆಗಿದ್ದಾರೆ. 6 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,225 ಕ್ಕೆ ಏರಿಕೆ‌ ಆಗಿದ್ದು, ಸದ್ಯ ಸಕ್ರಿಯ 6,760 ಪ್ರಕರಣಗಳು ಇವೆ.

ರೂಪಾಂತರಿ ಅಪ್ಡೇಟ್​:

ಅಲ್ಫಾ - 155

ಬೀಟಾ - 08

ಡೆಲ್ಟಾ - 1679

ಡೆಲ್ಟಾ ಪ್ಲಸ್ - 04

ಡೆಲ್ಟಾ ಸಬ್ ಲೈನ್ಏಜ್ - 256

ಡೆಲ್ಟಾ ಸಬ್ ಲೈನ್ಏಜ್ AY.12H -15

ಕಪ್ಪಾ - 160

ಈಟಾ - 01

ABOUT THE AUTHOR

...view details