ಬೆಂಗಳೂರು :ರಾಜ್ಯದಲ್ಲಿಂದು 1,06,939 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 292 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,88,333 ಕ್ಕೆ ಏರಿಕೆ ಆಗಿದೆ.
ಇಂದು 345 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 29,41,578 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 8,644 ಇದ್ದು, ಪಾಸಿಟಿವಿಟಿ ದರ ಶೇ.0.27 % ರಷ್ಟಿದೆ. 11 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,082ಕ್ಕೆ ಏರಿದೆ. ಈ ಮೂಲಕ ಸಾವಿನ ಶೇಕಡಾವಾರು 3.76% ರಷ್ಟಿದೆ.
ಬೆಂಗಳೂರಲ್ಲಿ 137 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,51,872 ಕ್ಕೆ ಏರಿದೆ. ಇನ್ನು 204 ಜನರು ಗುಣಮುಖರಾಗಿದ್ದು, 12,29,059 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಇಂದು 7 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,281 ರಷ್ಟಿದೆ. ಸದ್ಯ 6531 ಸಕ್ರಿಯ ಪ್ರಕರಣಗಳು ಇವೆ.
ರೂಪಾಂತರಿ ವೈರಸ್ ಅಪಡೇಟ್ಸ್ :
1) ಡೆಲ್ಟಾ ( Delta/B.617.2) - 1698
2) ಅಲ್ಪಾ(Alpha/B.1.1.7) - 155