ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 1,141 ಮಂದಿಗೆ ಕೋವಿಡ್‌ ಸೋಂಕು ದೃಢ; 14 ಬಲಿ - ಸೋಂಕಿತರ ಒಟ್ಟು ಸಂಖ್ಯೆ 3

ಜಗತ್ತಿನಾದ್ಯಂತ ಕೊರೊನಾ ಎರಡನೇ ರೂಪಾಂತರ ಕಾಣಿಸಿಕೊಂಡಿದ್ದು ಈ ಹಿನ್ನೆಲೆ ಹಲವಡೆ ಮತ್ತೆ ಲಾಕ್​ಡೌನ್​ ಹೇರಿದ್ದಾರೆ. ರಾಜ್ಯದಲ್ಲಿಯೂ ಹಲವಡೆ ಕಟ್ಟೆಚ್ಚರ ನೀಡಲಾಗಿದ್ದು ಇಂದಿನ ಕೊರೊನಾ ಪ್ರಕರಣಗಳ ಅಂಕಿ-ಸಂಖ್ಯೆ ಹೀಗಿದೆ.

Karnataka Total cases
ಸಂಗ್ರಹ ಚಿತ್ರ

By

Published : Dec 22, 2020, 11:48 PM IST

Updated : Dec 23, 2020, 2:48 AM IST

ಬೆಂಗಳೂರು:ರಾಜ್ಯದಲ್ಲಿ ಇಂದು 1,141 ಹೊಸ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,11,382ಕ್ಕೆ ತಲುಪಿದೆ.

ಕಿಲ್ಲರ್​ ಕೊರೊನಾಗೆ ಇಂದು 14 ಸೋಂಕಿತರು ಮೃತಪಟ್ಟಿದ್ದು ಮೃತರ ಸಂಖ್ಯೆ 12,029ಕ್ಕೆ ತಲುಪಿದೆ. ಕೊರೊನಾದಿಂದ 1136 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,85,341 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 216 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 12,029 ಸಕ್ರಿಯ ಪ್ರಕರಣಗಳು ಬಾಕಿ ಇವೆ.

ಜಗತ್ತಿನಾದ್ಯಂತ ಕೊರೊನಾ ಎರಡನೇ ರೂಪಾಂತರ ಕಾಣಿಸಿಕೊಂಡಿದ್ದು ಈ ಹಿನ್ನೆಲೆ ಹಲವಡೆ ಮತ್ತೆ ಲಾಕ್​ಡೌನ್​ ಹೇರಿದ್ದಾರೆ. ರಾಜ್ಯದಲ್ಲಿಯೂ ಹಲವಡೆ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿಂದು 1,194 ಮಂದಿಗೆ ಕೋವಿಡ್‌ ಸೋಂಕು ದೃಢ; ಐವರು ಬಲಿ

ಕಳೆದ 7 ದಿನಗಳಲ್ಲಿ 27,659 ಮಂದಿ ಹೋಂ ಕ್ವಾರೆಂಟೈನ್​ನಲ್ಲಿದ್ದಾರೆ.

ಇನ್ನು ಬೆಂಗಳೂರಿನಲ್ಲಿಂದು 585 ಹೊಸ ಸೋಂಕು ದೃಢಪಟ್ಟಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 3,83,816ಕ್ಕೆ ಏರಿಕೆ ಆಗಿದೆ.‌ 686 ಜನರು ಡಿಸ್ಜಾರ್ಜ್ ಆಗಿದ್ದು 3,70,387 ಗುಣಮುಖರಾಗಿದ್ದಾರೆ. 9148 ಸಕ್ರಿಯ ಪ್ರಕರಣಗಳಿದ್ದು 8 ಸೋಂಕಿತರು ಕೋವಿಡ್​ಗೆ ಬಲಿಯಾಗಿದ್ದಾರೆ.‌ ಈ ಮೂಲಕ ಸಾವಿನ ಸಂಖ್ಯೆ 4280ಕ್ಕೆ ಏರಿಕೆ ಆಗಿದೆ.

Last Updated : Dec 23, 2020, 2:48 AM IST

ABOUT THE AUTHOR

...view details