ಬೆಂಗಳೂರು:ರಾಜ್ಯದಲ್ಲಿಂದು 1,275 ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,63,614 ತಲುಪಿದೆ.
ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 12,407 ಕ್ಕೇರಿದೆ. 479 ಮಂದಿ ಗುಣಮುಖರಾಗಿದ್ದು, 9,40,968 ಜನ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 10,220 ಇದ್ದು, 134 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಪ್ರಕರಣಗಳು ಶೇ 1.47 ರಷ್ಟಿದ್ದರೆ, ಮೃತ ಪಟ್ಟವರ ಪ್ರಮಾಣ ಶೇ. 0.31 ರಷ್ಟಿದೆ.