ಕರ್ನಾಟಕ

karnataka

ETV Bharat / state

ಕೂಡಲೇ ಶಾಲೆಗಳನ್ನು ಆರಂಭಿಸಬೇಕು : ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹ - ಶಾಲೆ ಆರಂಭದ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ

ಪೋಷಕರು ಶಾಲೆ ಆರಂಭಿಸುವ ಬಗ್ಗೆ ಒಲವು ಹೊಂದಿದ್ದಾರೆ. 3ನೇ ಅಲೆ ಬಂದರೂ ಅದಕ್ಕನುಸಾರವಾಗಿ ಹೊಂದಾಣಿಕೆ ಮಾಡಿ ಶಾಲೆಗಳನ್ನು ಮುಂದುವರಿಸಬೇಕು. ಶಾಲೆ ಆರಂಭವಾಗದಿದ್ದರಿಂದ ಮಕ್ಕಳ ಪ್ರಗತಿ‌ ಕುಂಠಿತವಾಗಿದೆ. ಕಾಲ ಕಾಲಕ್ಕೆ ಏನು ಸಮಸ್ಯೆ ಎದುರಾಗುತ್ತೆ ಅದನ್ನು ಬಗೆಹರಿಸುವ ಕೆಲಸ ಸರ್ಕಾರದ್ದಾಗಿದೆ ಎಂದು ಹೇಳಿದ್ದಾರೆ..

Karnataka Council Chairman Sabhapati Horatti statement on School opening
ಸಭಾಪತಿ ಹೊರಟ್ಟಿ ಆಗ್ರಹ

By

Published : Aug 13, 2021, 8:15 PM IST

Updated : Aug 13, 2021, 9:22 PM IST

ಬೆಂಗಳೂರು :ಕೂಡಲೇ ಶಾಲೆಗಳನ್ನು ಆರಂಭಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ತರಗತಿ ಇಲ್ಲದೆ ಮಕ್ಕಳು ಓದುವುದನ್ನೇ ಮರೆತಿದ್ದಾರೆ.

ಮಕ್ಕಳೇ ದೇವರಲ್ಲಿ ಬೇಡಿಕೊಳ್ತಿದ್ದಾರೆ. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕರೆದು ಮಾತನಾಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳನ್ನ ಕರೆದು ಶಾಲೆ ಆರಂಭಿಸಬೇಕು ಅಂತಾ ಸೂಚಿಸಿದ್ದೇನೆ ಎಂದಿದ್ದಾರೆ. ಜಿಲ್ಲಾಧಿಕಾರಿಗಳು, ಬಿಇಒ, ಡಿಡಿಪಿಐ ಎಲ್ಲರೂ ಶಾಲೆ ಆರಂಭಿಸುವಾಗ ಮಕ್ಕಳ ಆರೋಗ್ಯ, ಮುಂಜಾಗ್ರತಾ ಕ್ರಮಗಳ ಬಗ್ಗೆ ಜವಾಬ್ದಾರಿ ವಹಿಸಬೇಕು.

ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹ

ಪೋಷಕರು ಮಕ್ಕಳನ್ನು ಹೊಲ, ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಬಹಳ ಅಧ್ಯಯನ ಮಾಡಿದ್ದೇನೆ. ರೆಸಿಡೆನ್ಸ್ ಶಾಲೆಯಲ್ಲಿ ಓದುತ್ತಿರೋ ಮಕ್ಕಳ ಜೊತೆ ಪೋಷಕರ ಸಂಬಂಧ ಹಾಳಾಗಿದೆ. ಹೀಗಾಗಿ, ಶಾಲೆ ಆರಂಭಿಸುವುದು ಉತ್ತಮ. ನಾನೂ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ. ಮಕ್ಕಳನ್ನ ಶಾಲೆಗೆ ಕರೆದುಕೊಂಡು ಹೋಗುವ ಕೆಲಸ ಆಗಬೇಕು ಎಂದಿದ್ದಾರೆ.

ಪೋಷಕರು ಶಾಲೆ ಆರಂಭಿಸುವ ಬಗ್ಗೆ ಒಲವು ಹೊಂದಿದ್ದಾರೆ. 3ನೇ ಅಲೆ ಬಂದರೂ ಅದಕ್ಕನುಸಾರವಾಗಿ ಹೊಂದಾಣಿಕೆ ಮಾಡಿ ಶಾಲೆಗಳನ್ನು ಮುಂದುವರಿಸಬೇಕು. ಶಾಲೆ ಆರಂಭವಾಗದಿದ್ದರಿಂದ ಮಕ್ಕಳ ಪ್ರಗತಿ‌ ಕುಂಠಿತವಾಗಿದೆ. ಕಾಲ ಕಾಲಕ್ಕೆ ಏನು ಸಮಸ್ಯೆ ಎದುರಾಗುತ್ತೆ ಅದನ್ನು ಬಗೆಹರಿಸುವ ಕೆಲಸ ಸರ್ಕಾರದ್ದಾಗಿದೆ ಎಂದು ಹೇಳಿದ್ದಾರೆ.

ಓದಿ:ಮೇಕೆದಾಟು ಯೋಜನೆ ಬಗ್ಗೆ ಕರ್ನಾಟಕ ಬಿಜೆಪಿ ಸ್ಪಷ್ಟ: ಸಚಿವ ಅಶ್ವತ್ಥ ನಾರಾಯಣ

Last Updated : Aug 13, 2021, 9:22 PM IST

ABOUT THE AUTHOR

...view details