ಕರ್ನಾಟಕ

karnataka

By

Published : Sep 5, 2021, 3:40 PM IST

ETV Bharat / state

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​​ ಬರದ ಸಿದ್ಧತೆ : ಅಭ್ಯರ್ಥಿಗಳ ಆಯ್ಕೆಗೆ ಕೈ ನಾಯಕರ ಸಭೆ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ಚುನಾವಣೆ ನಡೆಯುವ ಕ್ಷೇತ್ರಗಳು ಒಟ್ಟು 25. ಪದವೀಧರರು ಹಾಗೂ ಶಿಕ್ಷಕರ 4 ಕ್ಷೇತ್ರಗಳ ಚುನಾವಣೆಗಿನ್ನೂ ಒಂದು ವರ್ಷ ಬಾಕಿ ಇರುವಾಗಲೇ ಚುನಾವಣಾ ತಯಾರಿ ಆರಂಭಿಸಿದೆ ಕಾಂಗ್ರೆಸ್. ಹೀಗಾಗಿ, ವಿಧಾನ ಪರಿಷತ್ತಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ನಡೆಯುವ ಒಟ್ಟು 29 ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ..

ಅಭ್ಯರ್ಥಿಗಳ ಆಯ್ಕೆಗೆ ಕೈ ನಾಯಕರ ಸಭೆ
ಅಭ್ಯರ್ಥಿಗಳ ಆಯ್ಕೆಗೆ ಕೈ ನಾಯಕರ ಸಭೆ

ಬೆಂಗಳೂರು :ನಗರದ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ 29 ಕ್ಷೇತ್ರಗಳ ಎಂಎಲ್​ಸಿ ಚುನಾವಣೆ ತಯಾರಿ ಕುರಿತು ಸುದೀರ್ಘ ಚರ್ಚೆ ನಡೆಯುತ್ತಿದೆ. ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವವಹಿಸಿದ್ದಾರೆ.

ಮುಂದಿನ ವರ್ಷ ಜನವರಿಯಲ್ಲಿ ನಡೆಯೋ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಸಿದ್ಧತೆ ಆರಂಭಿಸಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಗೂ ಸಜ್ಜಾಗುತ್ತಿದೆ. ಇಂದು 2ನೇ ದಿನದ ಜಂಟಿ ಸಭೆಯಲ್ಲಿ ಸಹ ಅತ್ಯಂತ ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆದಿದೆ.

ಅಭ್ಯರ್ಥಿಗಳ ಆಯ್ಕೆಗೆ ಕೈ ನಾಯಕರ ಸಭೆ

ಚುನಾವಣೆಗಿನ್ನೂ ನಾಲ್ಕು ತಿಂಗಳು ಬಾಕಿ ಇರುವಾಗಲೇ ಅಖಾಡ ಸಿದ್ಧಗೊಳಿಸಲು ಸಜ್ಜಾದ ಕೈ ನಾಯಕರು, ಎಲ್ಲಿಯೂ ತಮಗೆ ಹಿನ್ನಡೆ ಆಗದಂತೆ ನೋಡಿಕೊಳ್ಳುವ ತಂತ್ರಗಾರಿಕೆ ರೂಪಿಸುವ ಸಮಾಲೋಚನೆ ನಡೆಸಿದ್ದಾರೆ.

ಪರಿಷತ್ ಚುನಾವಣೆ ಮೇಲೆ ಕಾಂಗ್ರೆಸ್​ ಕಣ್ಣು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ಚುನಾವಣೆ ನಡೆಯುವ ಕ್ಷೇತ್ರಗಳು ಒಟ್ಟು 25. ಪದವೀಧರರು ಹಾಗೂ ಶಿಕ್ಷಕರ 4 ಕ್ಷೇತ್ರಗಳ ಚುನಾವಣೆಗಿನ್ನೂ ಒಂದು ವರ್ಷ ಬಾಕಿ ಇರುವಾಗಲೇ ಚುನಾವಣಾ ತಯಾರಿ ಆರಂಭಿಸಿದೆ ಕಾಂಗ್ರೆಸ್. ಹೀಗಾಗಿ, ವಿಧಾನ ಪರಿಷತ್ತಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ನಡೆಯುವ ಒಟ್ಟು 29 ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ.

ಚುನಾವಣೆ ನಡೆಯಲಿರುವ ಜಿಲ್ಲೆಗಳು : ಬಳ್ಳಾರಿ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ವಿಜಯಪುರ, ಬೀದರ್,ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಧಾರವಾಡ, ಹಾವೇರಿ,ಬೆಳಗಾವಿ, ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆ ನಡೆಯಲಿದೆ. ಈ ಭಾಗದ ಜಿಲ್ಲಾ ಮುಖಂಡರ ಜೊತೆ ಸಭೆ ನಡೆಯುತ್ತಿದೆ.

ಹಾಲಿ ಶಾಸಕರು, ಮಾಜಿ ಶಾಸಕರು, ಹಾಲಿ ಹಾಗೂ ಮಾಜಿ ಎಂಎಲ್ಸಿಗಳು ಸಭೆಯಲ್ಲಿ ಭಾಗಿಯಾಗಿ ತಮ್ಮ ಸಲಹೆ, ಸೂಚನೆ ನೀಡುತ್ತಿದ್ದಾರೆ. ಸಂಜೆ 7 ಗಂಟೆಯವರೆಗೂ ಸಭೆ ಮುಂದುವರಿಯಲಿದೆ. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಜಿಲ್ಲಾ ಪ್ರಮುಖರು ಭಾಗಿಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರು ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಕಾಂಗ್ರೆಸ್ ಮುಖಂಡರ ಜತೆ ರಾಜಕೀಯ ವಿದ್ಯಮಾನ, ಪಕ್ಷ ಸಂಘಟನೆ ಬಲವರ್ಧನೆ, ಮುಂಬರುವ ಚುನಾವಣೆಗಳ ಸಂಬಂಧ ಭಾನುವಾರ ಸಮಾಲೋಚನೆ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ವಿಧಾನಸಭೆಯಲ್ಲಿ ಪಕ್ಷದ ಮುಖ್ಯಸಚೇತಕ ಡಾ. ಅಜಯ್ ಸಿಂಗ್, ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ, ಬಾಬುರಾವ್ ಚೌಹಾಣ್, ಮುಖಂಡರಾದ ನರಸಿಂಗರಾವ್ ಸೂರ್ಯವಂಶಿ, ಅಶೋಕ್ ಖೇಣಿ, ವಿಜಯ್ ಸಿಂಗ್, ಮಾಲಾ ಬಿ. ರಾವ್, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.

ದೇಣಿಗೆ ಸ್ವೀಕಾರ : ಕಲಬುರಗಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಕಲಬುರಗಿ ನಗರದ 181 ಮಂದಿ ಕಾರ್ಯಕರ್ತರು ಕೊಡಮಾಡಿರುವ 10 ಲಕ್ಷ ರುಪಾಯಿ ದೇಣಿಗೆಯ ಚೆಕ್​​ನ ಕಲಬುರಗಿ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಸ್ತಾಂತರಿಸಿದರು.

ಇದನ್ನೂ ಓದಿ : ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ಹಿಂದೆ ಸರಿದ್ರಾ ಮಾಜಿ ಸಚಿವ ವಿನಯ ಕುಲಕರ್ಣಿ!?

ABOUT THE AUTHOR

...view details