ಬೆಂಗಳೂರು: ಕಾವಲ್ ಭೈರಸಂದ್ರದಲ್ಲಿ ಕಳೆದ ರಾತ್ರಿ ನಡೆದ ಘಟನೆಗೆ ಕಾಂಗ್ರೆಸ್ ಪಕ್ಷ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘಟನೆಯನ್ನ ಖಂಡಿಸಲಾಗಿದೆ.
ಗಲಭೆಗೆ ಕಾಂಗ್ರೆಸ್ ಬೇಸರ: ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ - ಕಾವಲ್ ಬೈರಸಂದ್ರದಲ್ಲಿ ಹಿಂಸಾಚಾರ
ತಡರಾತ್ರಿ ಬೆಂಗಳೂರಿನಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ ಬೇಸರ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.
ಗಲಭೆಗೆ ಕಾಂಗ್ರೆಸ್ ಬೇಸರ
ಕಾವಲ್ ಭೈರಸಂದ್ರದಲ್ಲಿ ನಡೆದ ಘಟನೆ ನಿಜಕ್ಕೂ ಹೆಚ್ಚಿನ ಬೇಸರದ ವಿಚಾರ. ಅಲ್ಲಿರುವ ಜನ ಶಾಂತಿಯಿಂದ ವರ್ತಿಸಬೇಕು. ದಯಮಾಡಿ ತಾಳ್ಮೆ ತೆಗೆದುಕೊಳ್ಳಬೇಡಿ, ಶಾಂತಿ ಕಾಪಾಡಲು ಮನವಿ ಮಾಡುತ್ತೇವೆ. ಯಾವುದೇ ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡದೇ ಶಾಂತಿಯುತವಾಗಿರುವಂತೆ ಪಕ್ಷ ಮನವಿ ಮಾಡಿದೆ.
ಪಕ್ಷದ ಬೆರಳೆಣಿಕೆಯಷ್ಟು ನಾಯಕರು ಘಟನೆಯನ್ನು ಖಂಡಿಸಿದ್ದಾರೆ. ಉಳಿದವರು ಮೌನವಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್ ನಾಯಕರ ನಡೆ ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.