ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ರಚಿಸುವ ಯತ್ನ ಮಾಡಲಿದೆ ಎಂಬ ಮಾತಿಗೆ ಕೈ ನಾಯಕರೇ ಇಲ್ಲ ಎಂಬ ಉತ್ತರ ನೀಡಿದ್ದಾರೆ. ಆದರೆ ಮಾಹಿತಿ ಪ್ರಕಾರ, ಸದ್ಯ ಸರ್ಕಾರ ರಚಿಸುವ ಉತ್ಸಾಹ ತೋರುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬಿದ್ದ ನಂತರ ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ಸಾಕಷ್ಟು ಸಲ ವಾಗ್ದಾಳಿ ನಡೆಸಿದ್ದರು. ಸರ್ಕಾರ ರಚನೆಯಾದ ದಿನದಿಂದಲೂ ಅಪಸ್ವರಗಳು ಕೇಳಿಬರುತ್ತಲೇ ಇದ್ದವು. ಇದೀಗ ಮತ್ತೊಮ್ಮೆ ಮೈತ್ರಿ ಕುದುರುವುದು ಕಷ್ಟಸಾಧ್ಯ. ಇನ್ನು ಭಾರತೀಯ ಜನತಾ ಪಕ್ಷ ಹಿಂದಿನಷ್ಟು ದುರ್ಬಲವಾಗಿಲ್ಲ. ಬದಲಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಇನ್ನಷ್ಟು ಗಟ್ಟಿಯಾಗಿದೆ. ಸದ್ಯ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಇರುವ ಒಟ್ಟು 222 ಶಾಸಕರಲ್ಲಿ 120 ಶಾಸಕರ ಬಲ ಹೊಂದಿದೆ. ಇದರಲ್ಲಿ 117 ಬಿಜೆಪಿ ಚುನಾಯಿತ ಶಾಸಕರಾಗಿದ್ದರೆ, ಮೂವರು ಪಕ್ಷೇತರರು. ಇನ್ನು ಪ್ರತಿಪಕ್ಷಗಳು ಒಟ್ಟು 102 ಸದಸ್ಯರ ಬಲ ಹೊಂದಿವೆ. ಇದರಲ್ಲಿ ಕಾಂಗ್ರೆಸ್ 68 ಶಾಸಕರನ್ನು ಹೊಂದಿದ್ದರೆ ಜೆಡಿಎಸ್ 34 ಮಂದಿ ಶಾಸಕರ ಬಲ ಹೊಂದಿದೆ. ಖಾಲಿ ಇರುವ ಎರಡು ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು, ಇಲ್ಲಿ ಶಾಸಕರಾಗಿ ಅನರ್ಹರಾಗಿರುವ ಇಬ್ಬರೂ ಸದ್ಯ ಬಿಜೆಪಿ ಪಾಳಯದಲ್ಲಿ ನೆಲೆ ಕಂಡುಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ 222 ಸದಸ್ಯರ ವಿಧಾನಸಭೆಯಲ್ಲಿ 112 ಸ್ಥಾನ ಪಡೆದು ಸರಳ ಬಹುಮತ ಸಾಧಿಸಬೇಕಿದ್ದು, ಬಿಜೆಪಿ ಅಗತ್ಯಕ್ಕಿಂತ 8 ಶಾಸಕರನ್ನು ಹೆಚ್ಚಾಗಿ ಹೊಂದಿದೆ. ಸರಳ ಬಹುಮತ ಸಂಖ್ಯೆ ತಲುಪಲಿಕ್ಕೆ ಮೈತ್ರಿಗಳು ಒಂದಾದರೂ ಇನ್ನೂ 10 ಶಾಸಕರು ಬೇಕು. ಆದರೆ ಸದ್ಯ ಬಿಜೆಪಿಯಲ್ಲಿ ಕಂಡುಬರುತ್ತಿರುವ ಭಿನ್ನಮತ ಸರ್ಕಾರ ಬೀಳಿಸುವ ಮಟ್ಟಕ್ಕಿಲ್ಲ. ಇದರ ಲಾಭ ಪಡೆಯಲು ಹವಣಿಸುವ ಆಸಕ್ತಿ ಕೂಡ ಕಾಂಗ್ರೆಸ್ ಪಕ್ಷಕ್ಕಿಲ್ಲ. ಸದ್ಯವೇನಿದ್ದರೂ, 2023ರ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಪಕ್ಷ ಕಟ್ಟುವ ಕಾರ್ಯ ಕಾಂಗ್ರೆಸ್ ಮಾಡಬೇಕಿದೆ. ಬಿಜೆಪಿಯ ರಾಜಕೀಯ ನಡೆಯ ಮುಂದೆ ತತ್ತರಿಸಿರುವ ಕಾಂಗ್ರೆಸ್ ಪಕ್ಷ ಇದೀಗ ತಮ್ಮ ಶಾಸಕರನ್ನೂ ಕಳೆದುಕೊಂಡು ಕಂಗಾಲಾಗಿರುವ ಸ್ಥಿತಿಯಲ್ಲಿದೆ. ಹೀಗಿರುವಾಗ ಸರ್ಕಾರ ರಚಿಸುವ ಸಾಹಸಕ್ಕೆ ಕೈ ಹಾಕುವ ಕಾರ್ಯಕ್ಕೆ ಮುಂದಾಗುವುದಿಲ್ಲ ಎನ್ನಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅಲ್ಲದೇ ಜೆಡಿಎಸ್ ಜತೆ ಕೈಜೋಡಿಸಿದ್ದರಿಂದ ತಮ್ಮ ಕ್ಷೇತ್ರದಲ್ಲಿ ಕೆಲಸ ಆಗುತ್ತಿಲ್ಲ ಎಂದು ದೂರಿ ಹೆಚ್ಚಿನ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಗೆದ್ದು ಮಂತ್ರಿಗಳೂ ಆಗಿದ್ದಾರೆ. ಅಲ್ಲದೇ ಇಂದು ಸರ್ಕಾರ ಬೀಳದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನೂ ಸಿಎಂ ಬಿ.ಎಸ್. ಯಡಿಯೂರಪ್ಪಗೆ ನೀಡಿದ್ದಾರೆ. ಬಿಜೆಪಿಗೆ ಆಪರೇಷನ್ ಹೊಸದಲ್ಲ. ಕೇಂದ್ರ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಿನ್ನೆಲೆ ಜನರೂ ಮತ ಹಾಕಿ ಬಿಡುತ್ತಾರೆ. ಸರ್ಕಾರ ರಚನೆ ಕಸರತ್ತಿಗೆ ಕೈ ಹಾಕಿ ಇನ್ನಷ್ಟು ಶಾಸಕರನ್ನು ಕಳೆದುಕೊಂಡು ದುರ್ಬಲವಾಗುವ ಬದಲು, ಸಾಂಘಿಕವಾಗಿ ಒಟ್ಟಾಗಿ ದುಡಿದು ಪಕ್ಷ ಕಟ್ಟುವ ಕಾರ್ಯ ಮಾಡೋಣ, ಮುಂದಿನ ಅವಧಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿದೆ. ಇಲ್ಲವಾದರೆ ಒಮ್ಮೆ ನಮ್ಮ ಜುಟ್ಟನ್ನು ಬಿಜೆಪಿ ಕೈಗೆ ಕೊಟ್ಟರೆ ಮತ್ತೆ ವಾಪಸ್ ಸಿಗುವುದು ಕಷ್ಟ ಎನ್ನುವ ಮನವರಿಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸುವುದಕ್ಕಿಂತ ಸುಮ್ಮನಿರುವುದೇ ವಾಸಿ. ಅಲ್ಲದೇ ಸರ್ಕಾರ ರಚನೆಗೆ ಮುಂದಾದರೆ ತಮ್ಮ ಹಾಗೂ ಜೆಡಿಎಸ್ ಪಕ್ಷದ ಕೆಲ ಶಾಸಕರನ್ನು ಬಿಜೆಪಿ ಸೆಳೆಯುವುದು ಶತಸಿದ್ಧ. ಇದರಿಂದ ಸರ್ಕಾರ ರಚನೆಗೆ ಮುಂದಾಗಿ ಮುಜುಗರಕ್ಕೆ ಒಳಗಾಗುವುದು ಬೇಡ ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದೆ.