ಕರ್ನಾಟಕ

karnataka

ETV Bharat / state

ಜುಲೈ 30, 31ರಂದು  ಸಿಇಟಿ : ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಘೋಷಣೆ

ಕರ್ನಾಟಕದಲ್ಲಿ ಬರುವ ಜುಲೈ 30 ಹಾಗೂ 31ರಂದು ವೃತ್ತಿಪರ ಕೋರ್ಸ್​ಗಳ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

Dr C N Ashwath Narayan
Dr C N Ashwath Narayan

By

Published : May 13, 2020, 2:07 PM IST

ಬೆಂಗಳೂರು:ಸಾಮಾಜಿಕ ಅಂತರ ಕಾಯ್ದುಕೊಂಡು ಜುಲೈ 30, 31ರಂದು ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸೆಪ್ಟೆಂಬರ್​ ಮೊದಲ ವಾರದಲ್ಲಿ ಕಾಲೇಜು​ಗಳು ಪುನಾರಂಭ ಆಗುವ ಬಗ್ಗೆ ಕೂಡ ಸುಳಿವು ನೀಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ

ಇಂಜಿನಿಯರಿಂಗ್​, ವೈದ್ಯಕೀಯ ಸೇರಿ ವೃತ್ತಿಪರ ಕೋರ್ಸ್​​ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆ ಇದಾಗಿದ್ದು, 1 ಲಕ್ಷದ 92 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದಿರುವ ಅವರು, ಮಾಸ್ಕ್, ಸ್ಯಾನಿಟೈಸರ್​ ಸೇರಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

55,000 ಸಾವಿರ ಮೊಬೈಲ್​​ ಅಪ್ಲಿಕೇಷನ್​​ಗಳು ಡೌನ್​ಲೋಡ್ ಆಗಿವೆ. ಈವರೆಗೆ 52,975 ವಿದ್ಯಾರ್ಥಿಗಳು ಟೆಸ್ಟ್ ತೆಗೆದುಕೊಂಡಿದ್ದಾರೆ. ಆಫ್​ಲೈನ್​​​​ನಲ್ಲೂ ತರಬೇತಿ ಪಡೆಯಲು ಅವಕಾಶ ಇದೆ ಎಂದರು.

ಪಿಯುಸಿ ಇಂಗ್ಲಿಷ್​ ಪರೀಕ್ಷಾ ದಿನಾಂಕದ ಬಗ್ಗೆ ಶೀಘ್ರವೇ ಮಾಹಿತಿ

ದ್ವಿತೀಯ ಪಿಯುಸಿಯ ಇಂಗ್ಲಿಷ್ ವಿಷಯದ ಪರೀಕ್ಷೆ ಬಾಕಿ ಇದ್ದು, ಅದು ಯಾವಾಗ ನಡೆಯಲಿದೆ ಎಂಬುದನ್ನು ಶಿಕ್ಷಣ ಸಚಿವರು ಶೀಘ್ರವೇ ಮಾಹಿತಿ ನೀಡಲಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಅಕಾಡೆಮಿಕ್ ವರ್ಷ ಆರಂಭವಾಗವಾಗಲಿದ್ದು, ಮೇ 31ರೊಳಗೆ ಪಠ್ಯಕ್ರಮ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಡಿಸಿಎಂ ಸ್ಪಷ್ಟನೆ ನೀಡಿದರು.

ಸಿಇಟಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಗೆಟ್​ ಸೆಟ್ ಗೋ ಮೂಲಕ ಆಲ್​ನೈಲ್​ ಕೋಚಿಂಗ್​ಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದು, ಯೂಟ್ಯೂಬ್​​ನಲ್ಲೂ ವಿಡಿಯೋ ಡೌನ್ಲೋಡ್​ ಅವಕಾಶ ನೀಡಿದ್ದೇವೆ ಎಂದಿದ್ದಾರೆ. ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ ಎಂಬ ಮಾತು ಸಹ ಈ ವೇಳೆ ಹೇಳಿದ್ದಾರೆ.

ಪದವಿ ಕಾಲೇಜುಗಳನ್ನ ಸೆಪ್ಟೆಂಬರ್​ ತಿಂಗಳಲ್ಲಿ ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಎಂದು ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ವಿಶ್ವ ವಿದ್ಯಾಲಯಗಳಲ್ಲಿ ಮೌಲ್ಯಮಾಪನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದರು. ಮೇ ಅಂತ್ಯದೊಳಗೆ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಪಠ್ಯ ಚಟುವಟಿಕೆ ಮುಗಿಸಲು ಸೂಚಿಸಲಾಗಿದೆ ಎಂದರು.

ABOUT THE AUTHOR

...view details