ಕರ್ನಾಟಕ

karnataka

ETV Bharat / state

'ಐ ಡೋಂಟ್​​ ಕೇರ್​​'... ಅಣ್ಣಾಮಲೈ ಮೇಕೆದಾಟು ಸತ್ಯಾಗ್ರಹಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಮೇಕೆದಾಟು ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ಯಾರೇ ಪ್ರತಿಭಟನೆ ಮಾಡಿದ್ರೂ ಕೂಡ ಐ ಡೋಂಟ್​ ಕೇರ್​ ಎಂದಿದ್ದಾರೆ.

Karnataka CM Basavaraj Bommai
Karnataka CM Basavaraj Bommai

By

Published : Aug 5, 2021, 10:37 PM IST

Updated : Aug 6, 2021, 7:52 AM IST

ಬೆಂಗಳೂರು:ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ,ತಮಿಳುನಾಡಿನಲ್ಲಿ ಇಂದಿನಿಂದ ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸತ್ಯಾಗ್ರಹ ಆರಂಭಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಸತ್ಯಾಗ್ರಹಕ್ಕೆ ಐ ಡೋಂಟ್​​ ಕೇರ್​ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ, ನೋಡಿ, ಅಣ್ಣಾಮಲೈಗೆ ನಾನು ಈಗಾಗಲೇ ಉತ್ತರ ನೀಡಿದ್ದೇನೆ. ಆತ ದೊಡ್ಡ ಮನುಷ್ಯ. ಸತ್ಯಾಗ್ರಹ ಮಾಡುವ ಅವಶ್ಯಕತೆ ಇಲ್ಲ. ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆ ಬಗ್ಗೆ ಯಾರೇ ಪ್ರತಿಭಟನೆ ಮಾಡಲಿ, ಅವರು ಯಾವುದೇ ಪಕ್ಷದಲ್ಲಿರಲಿ ಅದು ರಾಜಕೀಯ ಪ್ರೇರಿತವಾಗಿದೆ.

ಅಣ್ಣಾಮಲೈ ಮೇಕೆದಾಟು ಸತ್ಯಾಗ್ರಹಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಮೇಕೆದಾಟು ಯೋಜನೆ ಅಂತಾರಾಜ್ಯ ವಿವಾದವಾಗಿದ್ದು, ಈಗಾಗಲೇ ಸಮಸ್ಯೆ ಬಗೆಹರಿದಿದೆ. ಹೆಚ್ಚುವರಿ ನೀರು ತಡೆಹಿಡಿದು ಬೆಂಗಳೂರಿಗೆ ನೀಡುವಂತೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಇದಕ್ಕೆ ಯಾರೇ ಪ್ರತಿಭಟನೆ ಮಾಡಿದ್ರೂ ನಾನು ಕೇರ್ ಮಾಡಲ್ಲ. ಕೇಂದ್ರದಿಂದ ಒಪ್ಪಿಗೆ ಪಡೆದು ಯೋಜನೆ ಆರಂಭ ಮಾಡಲಾಗುವುದು ಎಂದರು. ಕೇಂದ್ರ ಜಲಶಕ್ತಿ ಸಚಿವರಾಗಿರುವ ಶೇಖಾವತ್ ಜೊತೆ ನಾನು ಈಗಾಗಲೇ ಈ ಯೋಜನೆ ಬಗ್ಗೆ ಮಾತನಾಡಿದ್ದೇನೆ. ಕಾನೂನಾತ್ಮಕವಾಗಿ ಅನುಮೋದನೆ ಸಿಗುತ್ತಿದ್ದಂತೆ ಯೋಜನೆ ಪ್ರಾರಂಭ ಮಾಡುತ್ತೇವೆ. ಇದಕ್ಕೆ ಯಾವುದೇ ವ್ಯಕ್ತಿ ಪ್ರತಿಭಟನೆ ಅಥವಾ ಸತ್ಯಾಗ್ರಹ ನಡೆಸಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: BSY ರಾಜೀನಾಮೆ ನೀಡುವ ಮೊದಲು ನನ್ನನ್ನು ಸಚಿವನನ್ನಾಗಿ ಮಾಡುವ ಷರತ್ತು ಹಾಕಿರಲಿಲ್ಲ: ಈಟಿವಿ ಭಾರತಕ್ಕೆ ವಿಜಯೇಂದ್ರ ಸ್ಪಷ್ಟನೆ

ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಇಂದಿನಿಂದ ಸತ್ಯಾಗ್ರಹ ಆರಂಭ ಮಾಡಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ನಾವು ಅನುಮತಿ ನೀಡಲ್ಲ ಎಂದು ಹೇಳಿದ್ದಾರೆ.

Last Updated : Aug 6, 2021, 7:52 AM IST

ABOUT THE AUTHOR

...view details