ಬೆಂಗಳೂರು:ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಾರ್ಚ್ 18-21 ನಡುವೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಕೆ.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಹುತೇಕ ಇನ್ನು ಎರಡು ದಿನಗಳ ಕಾಲ ಒಣ ಹವೆ ಇರಲಿದೆ. ಈಗಾಗಲೇ ಶೇ. 37° ಗರಿಷ್ಠ ತಾಪಮಾನ ಕಲಬುರಗಿಯಲ್ಲಿ ಕಂಡು ಬಂದಿದೆ. ಇದರ ಜೊತೆಗೆ ಕೊಪ್ಪಳ, ರಾಯಚೂರು, ಬೆಳಗಾವಿ, ಧಾರವಾಡದಲ್ಲಿ ಶೇ. 35° ತಾಪಮಾನವಿರಲಿದೆ. ಮಂಡ್ಯ, ಚಿತ್ರದುರ್ಗ, ಬೆಂಗಳೂರಿನಲ್ಲಿ ಶೇ. 34° ತಾಪಮಾನ ದಾಖಲಾಗಿದೆ ಎಂದರು.