ಬೆಂಗಳೂರು: ಜಿ.ಎಸ್.ಟಿ ಹೆಚ್ಚಳದಿಂದ ಅನೇಕ ತೊಂದರೆಗಳಾಗುತ್ತಿದ್ದು, ಗ್ರಾಹಕರು ಕೂಡ ಇದರಿಂದ ಬೇಸತ್ತು ಚಿಟ್ ಫಂಡ್ಗಳಿಗೆ ಹಣ ಕಟ್ಟಲು ಹಿಂಜರಿಯುತ್ತಿದ್ದಾರೆ ಎಂದು ರಾಜ್ಯ ಚಿಟ್ ಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಬಸವಲಿಂಗಪ್ಪ ಹೇಳಿದರು.
ಸೋಮವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಶೇ. 12 ಇದ್ದ ಜಿಎಸ್ಟಿಯನ್ನು ಶೇ.18 ಕ್ಕೆ ಹೆಚ್ಚಿಸಿದೆ. ಇದರಿಂದ ನಮ್ಮ ರಾಜ್ಯದಲ್ಲಿಯೇ 10 ಸಾವಿರಕ್ಕೂ ಹೆಚ್ಚು ಮಂದಿ ಈ ಕೆಲಸವನ್ನು ನಂಬಿಕೊಂಡಿದ್ದಾರೆ. ರಾಜ್ಯದಲ್ಲಿ 1500 ನೋಂದಣಿಯಾದ ಕಂಪನಿಗಳಿವೆ. ವರ್ಷಕ್ಕೆ 8.5 ಕೋಟಿ ರೂ. ವ್ಯವಹಾರ ಆಗುತ್ತಿದ್ದು, ಜಿಎಸ್ಟಿ ಹೆಚ್ಚಳದಿಂದ ತೊಂದರೆ ಆಗುತ್ತದೆ. ಈ ಕ್ರಮವನ್ನು ವಿರೋಧಿಸಿ ಜುಲೈ 25 ರಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.