ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಸರ್ಕಾರಕ್ಕೆ ಸ್ಪಷ್ಟ ಬಹುಮತ... ಮಗನೊಂದಿಗೆ ಸಂಭ್ರಮಿಸಿದ ಸಿಎಂ ಬಿಎಸ್​ವೈ - ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿ

ಬಿಎಸ್​ವೈ ಸರ್ಕಾರದ ಅಳಿವು, ಉಳಿವಿನ ಚುನಾವಣೆಯಾಗಿದ್ದ ಬೈಎಲೆಕ್ಷನ್​​ನಲ್ಲಿ ಭಾರತೀಯ ಜನತಾ ಪಾರ್ಟಿಗೆ ಸ್ಪಷ್ಟ ಬಹುಮತ ಸಿಕ್ಕಿದೆ.

Yediyurappa celebrates
ಯಡಿಯೂರಪ್ಪ ಸರ್ಕಾರಕ್ಕೆ ಸ್ಪಷ್ಟ ಬಹುಮತ

By

Published : Dec 9, 2019, 12:00 PM IST

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿ.ಎಸ್.​ ಯಡಿಯೂರಪ್ಪ ಹಾಗೂ ಅನರ್ಹ ಶಾಸಕರ ಹಣೆಬರಹ ನಿರ್ಧರಿಸುವ ಉಪಚುನಾವಣೆಯಲ್ಲಿ ಕೊನೆಗೂ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡು ಗೆಲುವಿನ ನಗೆ ಬೀರಿದೆ.

ಉಪಚುನಾವಣೆ ಫಲಿತಾಂಶ: ಮನೆಯಲ್ಲೇ ಕುಳಿತು ಟಿವಿ ವೀಕ್ಷಣೆ ಮಾಡುತ್ತಿರುವ ಸಿಎಂ ಬಿಎಸ್​ವೈ

ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬೆಳಗ್ಗೆ ವಾಕಿಂಗ್​​ಗೂ ಹೋಗದೇ ಡಾಲರ್ಸ್​ ಕಾಲೋನಿಯಲ್ಲಿ ಟಿವಿ ಮುಂದೆ ಕುಳಿತುಕೊಂಡಿದ್ದರು ಎಂದು ತಿಳಿದು ಬಂದಿತ್ತು. ಡಾಲರ್ಸ್​ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಬಿಎಸ್​ವೈ ಟಿವಿ ಮುಂದೆ ಕುಳಿತುಕೊಂಡು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮತ ಎಣಿಕೆ ವರದಿಗಳನ್ನು ವೀಕ್ಷಿಸುತ್ತಿದ್ದರು.

15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಮುಂದಿನ ಮೂರು ವರ್ಷಗಳ ಕಾಲ ಸ್ಥಿರ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡಿದೆ.

ಉಪಚುನಾವಣೆ 15 ಕ್ಷೇತ್ರಗಳ ಫಲಿತಾಂಶ ಬಹುತೇಕ ಫೈನಲ್​ ಆಗುತ್ತಿದ್ದಂತೆ ತಮ್ಮ ನಿವಾಸದಲ್ಲಿ ಮಗ ವಿಜಯೇಂದ್ರ ಜತೆ ಸಂಭ್ರಮಾಚರಣೆ ಮಾಡಿದ್ದು, ಅವರಿಗೆ ಸಿಹಿ ತಿನಿಸಿದ್ದಾರೆ. ಇದೇ ವೇಳೆ, ಮಗ ವಿಜಯೇಂದ್ರ ತಂದೆಯ ಆಶೀರ್ವಾದ ಪಡೆದುಕೊಂಡಿದ್ದಾರೆ.

ABOUT THE AUTHOR

...view details