ಬೆಂಗಳೂರು:ರಾಜ್ಯದ ಕರಾವಳಿ ಭಾಗದ ಅಭಿವೃದ್ಧಿಗೆ ಹಾಗೂ ಇಲ್ಲಿನ ಜನರಿಗಾಗಿ ಪ್ರಸಕ್ತ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಕರಾವಳಿ ಭದ್ರತಾ ಪಡೆಯ ತಂತ್ರಜ್ಞಾನ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಅನುದಾನವನ್ನು ಸಿಎಂ ಯಡಿಯೂರಪ್ಪ ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ಕರಾವಳಿ ಭಾಗಕ್ಕೆ ನೀಡಲಾದ ಇನ್ನೂ ಹಲವಾರು ಯೋಜನೆಗಳ ವಿವರ ಇಂತಿದೆ:
- ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್
- ಮಂಗಳೂರು- ಪಣಜಿ ಜಲಮಾರ್ಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ
- ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ಗೆ 150 ಕೋಟಿ ರೂ.
ಮಲೆನಾಡು, ಕರಾವಳಿ ಭಾಗ ಮಂಗಳೂರಿಗೆ ಬಜೆಟ್‌ನಲ್ಲಿ ಸಿಕ್ಕಿರುವುದೇನು?
ಮಲೆನಾಡು, ಕರಾವಳಿ ಭಾಗದಲ್ಲಿ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ರೂ. ಮೀಸಲಿಡಲಾಗಿದೆ. ಮಂಗಳೂರು-ಪಣಜಿ ಜಲಮಾರ್ಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ. ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲು 150 ಕೋಟಿ ರೂ. ಇಡಲಾಗಿದೆ ಎಂದು ಘೋಷಣೆಯಾಗಿದೆ.
ಮಂಗಳೂರಿನಲ್ಲಿ ಅಡ್ವಾನ್ಸ್ ಬಯೋಟೆಕ್ ಸೆಂಟರ್ ಫಾರ್ ಆಕ್ವಾ ಮರಿನ್ ಸ್ಥಾಪಿಸಲಾಗುವುದು. ಕ್ವಾಂಟಂ ಕಂಪ್ಯೂಟಿಂಗ್ ತಂತ್ರಜ್ಞಾನ ಸಂಶೋಧನ ಉತ್ತೇಜನಕ್ಕೆ 10 ಕೋಟಿ ರೂ. ಒದಗಿಸಲಾಗಿದೆ. ತ್ರಾಸಿ, ಮರವಂತೆ, ಒತ್ತಿನೆಣಿ ಸಮುದ್ರ ತೀರ ಅಭಿವೃದ್ಧಿಗೆ ಬಜೆಟ್‌ನಲ್ಲಿ ನೂರು ಕೋಟಿ ರೂ. ಮೀಸಲಿಡಲಾಗಿದೆ. ಇನ್ನು ಸೋಮೇಶ್ವರ ಕಡಲ ತೀರ ಅಭಿವೃದ್ಧಿಗೆ 10 ಕೋಟಿ ಮೀಸಲಿಡಲಾಗಿದೆ.