ಬೆಂಗಳೂರು:2021-22ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡನೆ ಮಾಡುತ್ತಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿಗೆ 1,500 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೀಸಲಿರಿಸಿದ್ದಾರೆ.
ಕರ್ನಾಟಕ ಬಜೆಟ್ 2021-22: ಅಲ್ಪಸಂಖ್ಯಾತರು ಸೇರಿ ಯಾವ ಸಮುದಾಯಕ್ಕೆ, ಎಷ್ಟು ಕೋಟಿ ರೂ. ಮೀಸಲು? - ಕರ್ನಾಟಕ ಆರ್ಥಿಕ ಬೆಳವಣಿಗೆ
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆ ಮಾಡುತ್ತಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿಗೆ 1,500 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
![ಕರ್ನಾಟಕ ಬಜೆಟ್ 2021-22: ಅಲ್ಪಸಂಖ್ಯಾತರು ಸೇರಿ ಯಾವ ಸಮುದಾಯಕ್ಕೆ, ಎಷ್ಟು ಕೋಟಿ ರೂ. ಮೀಸಲು? Karnataka Budget](https://etvbharatimages.akamaized.net/etvbharat/prod-images/768-512-10917581-thumbnail-3x2-net.jpg)
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಅಲ್ಲದೆ ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ 200 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಒಕ್ಕಲಿಗರ ಸರ್ವತೋಮುಖ ಅಭಿವೃದ್ಧಿಗೆ ನಿಗಮ ಸ್ಥಾಪಿಸಿ, ನಿಗಮದ ಚಟುವಟಿಕೆಗೆ 500 ಕೋಟಿ ರೂಪಾಯಿ ಮೀಸಲು ಇಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಉಳಿದಂತೆ ವೀರಶೈವ ಲಿಂಗಾಯತರಿಗೆ 500 ಕೋಟಿ ರೂ., ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ., ಹಿಂದುಳಿದ ವರ್ಗಗಳಿಗೆ 500 ಕೋಟಿ ರೂ., ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 50 ಕೋಟಿ ಅನುದಾನ ಮೀಸಲಿರಿಸಿದ್ದಾರೆ.
Last Updated : Mar 8, 2021, 6:13 PM IST