ಕರ್ನಾಟಕ

karnataka

ETV Bharat / state

Karnataka Budget: ಅಲ್ಪಸಂಖ್ಯಾತರ ಏಳಿಗೆಗೆ ಹಲವು ಕ್ರಮಗಳು.. - measures to develop Minorities

ಕರ್ನಾಟಕ ಬಜೆಟ್ ಮಂಡನೆ ಆಗಿದ್ದು, ಅಲ್ಪಸಂಖ್ಯಾತರ ಏಳಿಗೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ.

measures to develop Minorities
ಅಲ್ಪ ಸಂಖ್ಯಾತರ ಏಳಿಗೆಗೆ ಹಲವು ಕ್ರಮ

By

Published : Jul 7, 2023, 2:30 PM IST

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು 2023-24ರ ಮಧ್ಯಂತರ ಬಜೆಟ್​ ಮಂಡಿಸಿದ್ದಾರೆ. ರಾಜ್ಯದ ಆರ್ಥಿಕತೆ ಪುನಶ್ಚೇತನಗೊಳಿಸುವ ಉದ್ದೇಶದೊಂದಿಗೆ ಬಜೆಟ್​ ಮಂಡನೆ ಮಾಡಿದ್ದಾರೆ. ಪ್ರತಿ ಇಲಾಖೆಗೂ ಗಮನ ಹರಿಸಿರುವ ಸರ್ಕಾರ ಅಲ್ಪಸಂಖ್ಯಾತರ ಏಳಿಗೆ ದೃಷ್ಟಿಯಿಂದ ಕೆಲ ಕ್ರಮ ಕೈಗೊಂಡಿದೆ. ಅವುಗಳು ಇಂತಿವೆ.

-ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೆಟ್ರಿಕ್​ ಪೂರ್ವ ವಿದ್ಯಾರ್ಥಿ ವೇತನವನ್ನು ಮುಂದುವರೆಸಲು 60 ಕೋಟಿ ರೂ. ಅನದಾನ.

-ಹೊಸದಾಗಿ 10 ಅಲ್ಪ ಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭ.

-62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಉನ್ನತೀಕರಣಕ್ಕಾಗಿ 30 ಕೋಟಿ ರೂ. ಅನುದಾನ.

-ಮೊರಾರ್ಜಿ ದೇಸಾಯಿ ಶಾಲೆಗಳ ದಾಖಲಾತಿ ದ್ವಿಗುಣಗೊಳಿಸಲು 23 ಕೋಟಿ ರೂ. ಅನುದಾನ.

-ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಅರಿವು ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ ವೃತ್ತಿಪರ ಕೋರ್ಸ್​ಗಳಿಗೆ ಶಿಕ್ಷಣ ಪಡೆಯುವವರಿಗಾಗಿ ಶೇ.2ರಷ್ಟು ಬಡ್ಡಿ ದರದಲ್ಲಿ ವಾರ್ಷಿಕ 1 ಲಕ್ಷದಂತೆ ಸಾಲ ಮಂಜೂರು ಮಾಡಲು 75 ಕೋಟಿ ರೂ. ಅನುದಾನ.

-ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆ ಜ್ಞಾನ ಹೆಚ್ಚಳಕ್ಕಾಗಿ ಭಾಷಾ ಪ್ರಯೋಗಾಲಯಗಳನ್ನು ಪ್ರಾರಂಭಿಸಿಲು 5 ಕೋಟಿ ರೂ. ಅನುದಾನ.

-ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಯುವಕರಿಗೆ ಕೌಶಲ್ಯ ತರಬೇತಿ ನೀಡಲು 4 ಕೋಟಿ ರೂ. ಅನುದಾನ.

-ವಸತಿ ಕಾಲೇಜುಗಳಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಟ್​, ಜೆಇಇ, ಸಿಇಟಿ ತರಬೇತಿ ಪಡೆಯಲು 8 ಕೋಟಿ ರೂ. ಅನುದಾನ.

-ನಗರದ ಹಜ್​ ಭವನದಲ್ಲಿ ಅಲ್ಪಸಂಖ್ಯಾತ ಯುವಜನರಿಗೆ 10 ತಿಂಗಳ ವಸತಿ ಸಹಿತ ಐಎಎಸ್​, ಕೆಎಎಸ್​ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು.

-ವಿಶ್ವದ 250 ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಶೂನ್ಯ ಬಡ್ಡಿದರದಲ್ಲಿ 20 ಲಕ್ಷದವರೆಗೂ ಸಾಲ ಸೌಲಭ್ಯಗಳನ್ನು ಒದಗಿಸುವುದು.

-ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ಸ್ವಯಂಉದ್ಯೋಗ ಕೈಗೊಳ್ಳಲು ಶೇ.20ರಷ್ಟು ಅಥವಾ ಒಂದು ಲಕ್ಷದವರೆಗೂ ಸಹಾಯಧನ.

-ಸ್ವಾವಲಂಬಿ ಸಾರಥಿ ಯೋಜನೆಯಡಿ ಅಲ್ಪಸಂಖ್ಯಾತ ನಿರುದ್ಯೋಗಿ ಯುವಜನರಿಗೆ 3 ಲಕ್ಷದವರೆಗೂ ಸಹಾಯ ಧನ ನೀಡುವುದು.

-ಶಾದಿ ಮಹಲ್​ ಮತ್ತು ಸಮುದಾಯ ಭವನಗಳ ನಿರ್ಮಾಣ, ಬಾಕಿ ಕಾಮಗಾರಿ ಪೂರ್ಣಗೊಳಿಸಲು 54 ಕೋಟಿ ರೂ. ಅನುದಾನ.

-ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ತಸ್ತಿಕ್​ ಮೊತ್ತವನ್ನು 48 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ.

-ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 360 ಕೋಟಿ ರೂ. ಮೀಸಲು.

-ಜೈನರ ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ.

-ಕ್ರಿಶ್ಚಿಯನ್​ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಲು 100 ಕೋಟಿ ರೂ. ಅನುದಾನ

-ವಕ್ಫ್​ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ.

-ಹಲಸೂರಿನಲ್ಲಿರುವ ಗುರುದ್ವಾರದ ಅಭಿವೃದ್ಧಿಗೆ 25 ಕೋಟಿ ರೂ., ಮೈಸೂರು, ಕಲಬುರಗಿ ಮತ್ತು ಹುಬ್ಬಳ್ಳಿಯ ಗುರುದ್ವಾರಗಳಿಗೆ 5 ಕೋಟಿ ರೂ. ಅನುದಾನ.

ಇದನ್ನೂ ಓದಿ:Karnataka Budget: ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ 30,000 ಕೋಟಿ ರೂಪಾಯಿ ವೆಚ್ಚ

ABOUT THE AUTHOR

...view details