ಬೆಂಗಳೂರು:ಕೋವಿಡ್-19 ಅತ್ಯುತ್ತಮ ನಿರ್ವಹಣೆಗಾಗಿ ಇಂಡಿಯಾ ಟುಡೇ ಗ್ರೂಪ್ನ ಹೆಲ್ತ್‌ಗಿರಿ ಪ್ರಶಸ್ತಿ ಕರ್ನಾಟಕದ ಮುಡಿಗೇರಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಂತಸ ಹಂಚಿಕೊಂಡರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಭೇಟಿ ನೀಡಿದರು. ದಿ ಇಂಡಿಯಾ ಟುಡೇ ಗ್ರೂಪ್ನಿಂದ 'ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ' ವಿಭಾಗದಡಿ ಕರ್ನಾಟಕಕ್ಕೆ 'ಇಂಡಿಯಾ ಟುಡೇ ಹೆಲ್ತ್ ಗಿರಿ' ಪ್ರಶಸ್ತಿ ದೊರೆತಿರುವ ಮಾಹಿತಿ ನೀಡಿದರು.
ಕೋವಿಡ್ ಸಮಯದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಆರೋಗ್ಯ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಂಡಿದ್ದಕ್ಕೆ ಆರೋಗ್ಯ ಸಚಿವ ಸುಧಾಕರ್ಗೆ ಈ ವೇಳೆ ಸಿಎಂ ಅಭಿನಂದನೆ ಸಲ್ಲಿಸಿದರು.