ಕರ್ನಾಟಕ

karnataka

ETV Bharat / state

ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಮಧು ಬಂಗಾರಪ್ಪಗೆ ಜಯಭೇರಿ - ಹಾಸನದಲ್ಲಿ ಜೆಡಿಎಸ್ ಗೆಲುವು

ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಮತ ಎಣಿಕೆ ಭರದಿಂದ ಸಾಗಿದೆ. ವಿವಿಧ ಕ್ಷೇತ್ರಗಳ ಫಲಿತಾಂಶ ಹೀಗಿದೆ..

Etv Bharat
Etv Bharat

By

Published : May 13, 2023, 11:30 AM IST

Updated : May 13, 2023, 2:23 PM IST

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗುತ್ತಿದೆ. ಕಾಂಗ್ರೆಸ್​ ಸರಳ ಬಹುಮತದತ್ತ ಸಾಗುತ್ತಿದೆ. ಆಡಳಿತಾರೂಢ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿದ್ದು, ಜೆಡಿಎಸ್ 3ನೇ ಸ್ಥಾನದಲ್ಲಿ ಮುಂದುವರೆದಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ - 1, ಎನ್​ಸಿಪಿ - 1, ಸರ್ವೋದಯ ಕರ್ನಾಟಕ ಪಕ್ಷ ಒಂದೆಡೆ ಮುನ್ನಡೆಯಲ್ಲಿದ್ದು, 5 ಕ್ಷೇತ್ರಗಳಲ್ಲಿ ಪಕ್ಷೇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದುವರೆಗೆ ಗೆದ್ದ - ಸೋತ ಅಭ್ಯರ್ಥಿಗಳು:

  • ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಟಿ.ರಘುಮೂರ್ತಿ ಅವರು ಜೆಡಿಎಸ್​ನ ರವೀಶ್​ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ಧಾರೆ.
  • ಹಾಸನದಲ್ಲಿ ಜೆಡಿಎಸ್​ನ ಸ್ವರೂಪ್​ ವಿರುದ್ಧ ಬಿಜೆಪಿಯ ಹಾಲಿ ಶಾಸಕ ಪ್ರೀತಂ ಗೌಡ ಸೋಲು ಅನುಭವಿಸಿದ್ದಾರೆ.
  • ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ ಹೆಬ್ಬಾರ್ ಗೆಲುವು ಕಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ವಿ.ಎಸ್.ಪಾಟೀಲ್ ಸೋತಿದ್ದಾರೆ.
  • ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ವಿ.ಸೋಮಣ್ಣ ಸೋಲು ಕಂಡಿದ್ದಾರೆ. ಕಾಂಗ್ರೆಸ್​ನ ಪುಟ್ಟರಂಗಶೆಟ್ಟಿ ಭರ್ಜರಿ ಗೆಲುವು ಸಾಧಿಸಿದ್ಧಾರೆ.
  • ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಜಿಎಸ್​ ಪಾಟೀಲ್​ ಅವರು ಬಿಜೆಪಿಯ ಕಳಕಪ್ಪ ಬಂಡಿ ವಿರುದ್ಧ ಸೋಲು ಕಂಡಿದ್ದಾರೆ.
  • ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್​ನ ಶ್ರೀನಿವಾಸ್ ಎನ್​ಟಿ ಜಯ ಸಾಧಿಸಿದ್ದಾರೆ.
  • ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಕೆಸಿ ವಿರೇಂದ್ರ ಪಪ್ಪಿ ಗೆಲುವು ಕಂಡಿದ್ದಾರೆ.
  • ದಾವಣಗೆರೆ ದಕ್ಷಿಣ ಮತ ಕ್ಷೇತ್ರದಲ್ಲಿ ಕಾಂಗ್ರೆಸ್​ ಶಾಮನೂರು ಶಿವಶಂಕರಪ್ಪ ಗೆಲುವು ದಾಖಲಿಸಿದ್ದಾರೆ.
  • ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ​ ವಿನಯ್ ಕುಲಕರ್ಣಿ ಜಯದ ನಗೆ ಬೀರಿದ್ದಾರೆ. ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೋಗದಿದ್ದರೂ ಗೆಲುವು ಕಂಡಿದ್ದಾರೆ.
  • ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಸಂತೋಷ್ ಲಾಡ್ ಗೆಲುವು ಸಾಧಿಸಿದ್ದಾರೆ.
  • ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಯ ಕೆ. ಕಿರಣಕುಮಾರ್​ ಜಯ ಕಂಡಿದ್ದಾರೆ
  • ಕೆಜಿಎಫ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನ ರೂಪಕಲಾ ಜಯ ದಾಖಲಿಸಿದ್ದಾರೆ.
  • ಕೊಳ್ಳೇಗಾಲದಲ್ಲಿ ಕಾಂಗ್ರೆಸ್​ನ ಎಆರ್​ ಕೃಷ್ಣಮೂರ್ತಿ ಗೆಲುವು ಪಡೆದಿದ್ದಾರೆ.
  • ಬೀದರ್​ನಲ್ಲಿ ಕಾಂಗ್ರೆಸ್​​ ರಹೀಂ ಖಾನ್​ ಜಯ ಕಂಡಿದ್ದಾರೆ.
  • ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
  • ಬಳ್ಳಾರಿ ಗ್ರಾಮೀಣದಲ್ಲಿ ಸಚಿವ ಶ್ರೀರಾಮುಲು ಸೋತಿದ್ಧಾರೆ. ಕಾಂಗ್ರೆಸ್​ನ ಬಿ.ನಾಗೇಂದ್ರ ಗೆಲುವು ಕಂಡಿದ್ದಾರೆ.
  • ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ್ದಾರೆ.
  • ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಮತ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ಗೆ ಸೋಲು ಕಂಡಿದ್ದಾರೆ. ಬಿಜೆಪಿಯ ಮಹೇಶ್ ಟೆಂಗಿನಕಾಯಿ ಜಯದ ನಗೆ ಬೀರಿದ್ದಾರೆ.
  • ಖಾನಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಅಂಜಲಿ ನಿಂಬಾಳ್ಕರ್​ ಸೋಲು ಕಂಡಿದ್ದಾರೆ.
  • ಸುಳ್ಯ ಮತ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಭಾಗೀರಥಿ ಮುರುಳ್ಯ ಜಯ ಸಾಧಿಸಿದ್ದಾರೆ.
  • ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯ ಯಶಪಾಲ್ ಸುವರ್ಣ ಗೆದ್ದಿದ್ದಾರೆ.
  • ಬೀದರ್​ ಜಿಲ್ಲೆಯ ಔರಾದ್ ಮತಕ್ಷೇತ್ರದಲ್ಲಿ ಸಚಿವ ಪ್ರಭು ಚವ್ಹಾಣ್ ಜಯ ಕಂಡಿದ್ದಾರೆ.
  • ಶಿರಸಿ ಕ್ಷೇತ್ರದಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲು ಕಂಡಿದ್ದಾರೆ.
  • ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಚಿವ ಡಾ. ಸುಧಾಕರ್ ಸೋತಿದ್ದಾರೆ. ಕಾಂಗ್ರೆಸ್​ ಪ್ರದೀಶ್ ಈಶ್ವರ್ ಜಯ ಸಾಧಿಸಿದ್ದಾರೆ.
  • ಅರಭಾವಿ ಕ್ಷೇತ್ರದಲ್ಲಿ ಬಿಜೆಪಿ ಬಾಲಚಂದ್ರ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.
  • ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಕಾಂಗ್ರೆಸ್​ನ​ ಕೆಎಂ ಶಿವಲಿಂಗೇಗೌಡ ಗೆದ್ದಿದ್ದಾರೆ. ಜೆಡಿಎಸ್​​ ಶಾಸಕರಾಗಿದ್ದ ಶಿವಲಿಂಗೇಗೌಡ ಇತ್ತೀಚೆಗೆ ಕಾಂಗ್ರೆಸ್​ ಸೇರಿದ್ದರು.
  • ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ್ ಜಯ ಕಂಡಿದ್ದಾರೆ.
  • ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಶಿವರಾಜ್ ತಂಗಡಗಿ ಗೆಲುವು ದಾಖಲಿಸಿದ್ದಾರೆ.
  • ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ್​ ವಿರುದ್ಧ ಕಾಂಗ್ರೆಸ್​ನ ರಾಜು ಕಾಗೆ ಗೆದ್ದಿದ್ದಾರೆ.
  • ಕಾಪು ಕ್ಷೇತ್ರದಲ್ಲಿ ಬಿಜೆಪಿಯ ಗುರ್ಮೆ ಸುರೇಶ್​ ಶೆಟ್ಟಿ ಜಯ ದಾಖಲಿಸಿದ್ದಾರೆ.
  • ಕಾರವಾರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಸತೀಶ್ ಸೈಲ್ ಗೆದ್ದಿದ್ದಾರೆ.
  • ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿಯ ವಿ. ಸುನೀಲ್​ ಕುಮಾರ್​ ಗೆಲುವು ದಾಖಲಿಸಿದ್ದಾರೆ.
  • ಸೊರಬ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ, ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಕಾಂಗ್ರೆಸ್​ನ ಮಧು ಬಂಗಾರಪ್ಪ ಜಯ ದಾಖಲಿಸಿದ್ದಾರೆ.
  • ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಕೃಷ್ಣಬೈರೇಗೌಡ ಗೆದ್ದಿದ್ದಾರೆ.
Last Updated : May 13, 2023, 2:23 PM IST

ABOUT THE AUTHOR

...view details