ಕರ್ನಾಟಕ

karnataka

ETV Bharat / state

ಹದಿಮೂರು ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್

ನಾಮಪತ್ರ ಸಲ್ಲಿಕೆಗೆ ಕೆಲವೇ ಕ್ಷಣಗಳು ಬಾಕಿ ಇರುವಾಗಲೇ ಜೆಡಿಎಸ್​ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ.

jds
ಜೆಡಿಎಸ್

By

Published : Apr 20, 2023, 2:37 PM IST

Updated : Apr 20, 2023, 3:31 PM IST

ಬೆಂಗಳೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಜೆಡಿಎಸ್‌ 13 ಮಂದಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ. ನಿನ್ನೆ 59 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಈಗ ಪಟ್ಟಿ ಬಿಡುಗಡೆ ಮಾಡಿರುವ ಬಹುತೇಕ ಅಭ್ಯರ್ಥಿಗಳು ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಹೀಗಿದೆ: ಗೋಕಾಕ್ - ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ (ಚಂದನ್ ಕುಮಾರ್), ಕಿತ್ತೂರು - ಅಶ್ವಿನಿ ಸಿಂಗಯ್ಯ ಪೂಜೇರಾ, ಯಾದಗಿರಿ - ಎ.ಬಿ. ಮಾಲಕರೆಡ್ಡಿ, ಭಾಲ್ಕಿ- ರೌಫ್ ಪಟೇಲ್, ಶಿಗ್ಗಾಂವಿ - ಶಶಿಧರ್ ಚನ್ನಬಸಪ್ಪ ಯಲಿಗಾರ, ಮೊಳಕಾಲ್ಮೂರು - ಮಹಾದೇವಪ್ಪ, ಪುಲಕೇಶಿನಗರ - ಅನುರಾಧ, ಶಿವಾಜಿನಗರ - ಅಬ್ದುಲ್ ಜಫರ್ ಆಲಿ, ಶಾಂತಿನಗರ- ಮಂಜುನಾಥ್ ಗೌಡ, ಬೆಳ್ತಂಗಡಿ- ಅಶ್ರಫ್ ಅಲಿ ಕುಂಞ, ಮಂಗಳೂರು ನಗರ ಉತ್ತರ - ಮೋಹಿನುದ್ದೀನ್ ಬಾವ, ಮಂಗಳೂರು - ಅಲ್ತಾಫ್ ಕುಂಪಾಲ, ಬಂಟ್ವಾಳ- ಪ್ರಕಾಶ್ ರಫಾಯಲ್ ಗೊಮ್ಸ್ ಹೆಸರು ಪ್ರಕಟಿಸಲಾಗಿದೆ.

ಇದನ್ನೂ ಓದಿ:ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಗುರುಚರಣ್: ಪಕ್ಷಕ್ಕೆ ಸ್ವಾಗತಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಇದಕ್ಕೂ ಮೊದಲು ಜೆಡಿಎಸ್​ ತನ್ನ 59 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಹುಬ್ಬಳ್ಳಿ - ಧಾರವಾಡ ಕೇಂದ್ರ ಮತ್ತು ಪಶ್ಚಿಮ ಕ್ಷೇತ್ರ, ಶಿವಮೊಗ್ಗ ನಗರ ಸೇರಿದಂತೆ ಒಟ್ಟು 59 ಅಭ್ಯರ್ಥಿಗಳ ಹೆಸರನ್ನು ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಪ್ರಕಟಿಸಿದ್ದರು.

ನಿಪ್ಪಾಣಿ- ರಾಜು ಮಾರುತಿ ಪವಾರ್​,ಚಿಕ್ಕೋಡಿ- ಸದಾಶಿವ ವಾಳಕೆ, ಕಾಗವಾಡ- ಮಲ್ಲಪ್ಪ ಚುಂಗ, ಹುಕ್ಕೇರಿ- ಬಸವರಾಜ್​ ಪಾಟೀಲ್​, ಅರಭಾವಿ- ಪ್ರಕಾಶ ಕಾಶಶೆಟ್ಟಿ , ಯಮಕನಮರಡಿ- ಮಾರುತಿ ಮಲ್ಲಪ್ಪ ಅಸ್ತಗಿ, ಬೆಳಗಾವಿ ಉತ್ತರ- ಶಿವಾನಂದ ಮಗಲಿಹಾಳ್​, ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್​, ಬೆಳಗಾವಿ ಗ್ರಾಮಾಂತರ- ಶಂಕರಗೌಡ ಪಾಟೀಲ್​, ರಾಮದುರ್ಗ ಕ್ಷೇತ್ರಕ್ಕೆ ಪ್ರಕಾಶ ಮುದೋಳ್​ ಹೆಸರು ಪ್ರಕಟಿಸಲಾಗಿದೆ.

ತೇರದಾಳ- ಸುರೇಶ್​ ಮಡಿವಾಳರ್​, ಜಮಖಂಡಿ- ಯಾಕುಬ್​ ಕಪಡೇವಾಲ್​, ಬೀಳಗಿ- ರುಕ್ಕುದ್ದೀನ್​ ಸೌದಗಲ್​, ಬಾಗಲಕೋಟೆ- ಡಾ.ದೇವರಾಜ ಪಾಟೀಲ್​, ವಿಜಯಪುರ ನಗರ- ಬಂಡೆ ನವಾಜ್​ ಮಾಬರಿ, ಸುರಪುರ- ಶ್ರವಣಕುಮಾರ್​ ನಾಯ್ಕ್​, ಗುಲ್ಬರ್ಗ ದಕ್ಷಿಣ- ಕೃಷ್ಣರೆಡ್ಡಿ, ಔರಾದ್​ ​- ಜೈಸಿಂಗ್​ ಟಾಠೋಡ್​, ರಾಯಚೂರು ನಗರ- ವಿನಯ್​ ಕುಮಾರ್​, ಮಸ್ಕಿ- ರಾಘವೇಂದ್ರ ನಾಯಕ, ಕನಕಗಿರಿ- ರಾಜಗೋಪಾಲ್​, ಯಲಬುರ್ಗಾ- ಮಲ್ಲನಗೌಡ ಕೋಣಗೌಡ, ಕೊಪ್ಪಳ- ಚಂದ್ರಶೇಖರ್​, ಶಿರಹಟ್ಟಿ- ಹನುಮಂತಪ್ಪ ನಾಯಕ್​, ಗದಗ- ವೆಂಕನಗೌಡ ಗೋವಿಂದಗೌಡರ, ರೋಣ- ಮುದಗಮ್​ ಸಾಬ್​ ಅವರಿಗೆ ಟಿಕೆಟ್​ ನೀಡಲಾಗಿದೆ.

ಇದನ್ನೂ ಓದಿ:ತಪ್ಪಿದ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್.. ಜೆಡಿಎಸ್​ನಿಂದ ಮೊಯ್ದಿನ್ ಬಾವ ಸ್ಪರ್ಧೆ

ನರಗುಂದ - ರುದ್ರಗೌಡ ಪಾಟೀಲ್, ನವಲಗುಂದ- ಕಲಪ್ಪ ಗಡ್ಡಿ, ಕುಂದಗೋಳ- ಹಜರಾತ್ ಅಲಿ,ಧಾರವಾಡ- ಮಂಜುನಾಥ್ ಹಗೇದಾರ್, ಹುಬ್ಬಳ್ಳಿ-ಧಾರವಾಡ ಕೇಂದ್ರ- ಸಿದ್ದಲಿಂಗೇಶ ಗೌಡ ಒಡೆಯರ್​, ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಗುರುರಾಜ ಹುಣಸಿಮರದ, ಕಲಘಟಗಿ- ವೀರಪ್ಪ ಬಸಪ್ಪ ಶಿಗೇಹಟ್ಟಿ, ಹಾವೇರಿ- ತುಕಾರಾಂ ಮಾಳಗಿ, ಬ್ಯಾಡಗಿ- ಸುನೀತಾ ಎಂ.ಪೂಜಾರ್, ಕೂಡ್ಲಗಿ- ಕೋಡಿಹಳ್ಳಿ ಭೀಮಪ್ಪ, ಚಿತ್ರದುರ್ಗ- ರಘು ಆಚಾರ್, ಹೊಳಲ್ಕರೆ- ಇಂದ್ರಜಿತ್ ನಾಯಕ್, ಜಗಳೂರು- ದೇವರಾಜ್, ಶಿವಮೊಗ್ಗ ನಗರ- ಆಯನೂರು ಮಂಜುನಾಥ್,ಸೊರಬ- ಬಾಸೂರು ಚಂದ್ರೇಗೌಡ, ಸಾಗರ- ಜಾಕೀರ್, ರಾಜರಾಜೇಶ್ವರಿನಗರ - ಡಾ.ನಾರಾಯಣಸ್ವಾಮಿ ಹೆಸರನ್ನು ಘೋಷಿಸಲಾಗಿದೆ.

ಮಲ್ಲೇಶ್ವರಂ- ಉತ್ಕರ್ಷ್, ಚಾಮರಾಜಪೇಟೆ- ಗೋವಿಂದರಾಜು, ಚಿಕ್ಕಪೇಟೆ- ಇಮ್ರಾನ್ ಪಾಷ, ಪದ್ಮನಾಭನಗರ- ಬಿ.ಮಂಜುನಾಥ್, ಬಿಟಿಎಂ ಲೇಔಟ್- ವೆಂಕಟೇಶ್, ಜಯನಗರ- ಕಾಳೇಗೌಡ, ಬೊಮ್ಮನಹಳ್ಳಿ- ನಾರಾಯಣರಾಜು, ಅರಸೀಕೆರೆ- ಎನ್.ಆರ್. ಸಂತೋಷ್, ಮೂಡಬಿದರೆ - ಅಮರಶ್ರೀ, ಸುಳ್ಯ- ಪ್ರೊ.ವೆಂಕಟೇಶ್ ಎಚ್.ಎನ್, ವಿರಾಜಪೇಟೆ- ಮನ್ಸೂರ್ ಅಲಿ, ಚಾಮರಾಜ- ಎಚ್.ಕೆ.ರಮೇಶ್ (ರವಿ), ನರಸಿಂಹರಾಜ- ಅಬ್ದುಲ್ ಖಾದರ್ ಶಾಹೀದ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಜೆಡಿಎಸ್​ ಮಣೆ ಹಾಕಿದೆ.

Last Updated : Apr 20, 2023, 3:31 PM IST

ABOUT THE AUTHOR

...view details