ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹುಬ್ಬಳ್ಳಿ -ಧಾರವಾಡ ಕೇಂದ್ರ ಮತ್ತು ಪಶ್ಚಿಮ ಕ್ಷೇತ್ರ, ಶಿವಮೊಗ್ಗ ನಗರ ಸೇರಿದಂತೆ ಒಟ್ಟು 59 ಅಭ್ಯರ್ಥಿಗಳ ಹೆಸರನ್ನು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಕಟಿಸಿದ್ದಾರೆ. ಇದೇ ವೇಳೆ ಏಳು ಕ್ಷೇತ್ರಗಳಲ್ಲಿ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ..ನಿಪ್ಪಾಣಿ - ರಾಜು ಮಾರುತಿ ಪವಾರ್, ಚಿಕ್ಕೋಡಿ - ಸದಾಶಿವ ವಾಳಕೆ, ಕಾಗವಾಡ - ಮಲ್ಲಪ್ಪ ಚುಂಗ, ಹುಕ್ಕೇರಿ - ಬಸವರಾಜ್ ಪಾಟೀಲ್, ಅರಭಾವಿ - ಪ್ರಕಾಶ ಕಾಶಶೆಟ್ಟಿ, ಯಮಕನಮರಡಿ - ಮಾರುತಿ ಮಲ್ಲಪ್ಪ ಅಸ್ತಗಿ, ಬೆಳಗಾವಿ ಉತ್ತರ - ಶಿವಾನಂದ ಮುಗಲಿಹಾಳ್, ಬೆಳಗಾವಿ ದಕ್ಷಿಣ ಶ್ರೀನಿವಾಸ್ ತೋಳಲ್ಕರ್, ಬೆಳಗಾವಿ ಗ್ರಾಮಾಂತರ - ಶಂಕರಗೌಡ ಪಾಟೀಲ್, ರಾಮದುರ್ಗ ಕ್ಷೇತ್ರಕ್ಕೆ ಪ್ರಕಾಶ ಮುದೋಳ್ ಹೆಸರನ್ನು ಪ್ರಕಟಿಸಲಾಗಿದೆ.
ತೇರದಾಳ - ಸುರೇಶ್ ಮಡಿವಾಳರ್, ಜಮಖಂಡಿ - ಯಾಕುಬ್ ಕಪಡೇವಾಲ್, ಬೀಳಗಿ - ರುಕ್ಕುದ್ದೀನ್ ಸೌದಗಲ್, ಬಾಗಲಕೋಟೆ - ಡಾ.ದೇವರಾಜ ಪಾಟೀಲ್, ಹುನಗುಂದ ಶಿವಪ್ಪ ಬೋಲಿ, ವಿಜಯಪುರ ನಗರ - ಬಂಡೆ ನವಾಜ್ ಮಾಬರಿ, ಸುರಪುರ - ಶ್ರವಣಕುಮಾರ್ ನಾಯ್ಕ್, ಗುಲಬರ್ಗಾ ದಕ್ಷಿಣ - ಕೃಷ್ಣರೆಡ್ಡಿ, ಔರಾದ್ -ಜೈಸಿಂಗ್ ರಾಠೋಡ್, ರಾಯಚೂರ ನಗರ - ವಿನಯಕುಮಾರ್ ಈ., ಮಸ್ಕಿ - ರಾಘವೇಂದ್ರ ನಾಯಕ, ಕನಕಗಿರಿ - ರಾಜಗೋಪಾಲ್, ಯಲಬುರ್ಗಾ - ಮಲ್ಲನಗೌಡ ಕೋಣಗೌಡ, ಕೊಪ್ಪಳ - ಚಂದ್ರಶೇಖರ್, ಶಿರಹಟ್ಟಿ - ಹನುಮಂತಪ್ಪ ನಾಯಕ್, ಗದಗ ವೆಂಕನಗೌಡ ಗೋವಿಂದಗೌಡರ, ರೋಣ ಕ್ಷೇತ್ರದಲ್ಲಿ ಮುದಗಮ್ ಸಾಬ್ ಅವರಿಗೆ ಟಿಕೆಟ್ ನೀಡಲಾಗಿದೆ.