ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ರಾಜ್ಯಾದ್ಯಂತ ಶೇಕಡಾ 66.31 ರಷ್ಟು ಮತದಾನವಾಗಿದೆ. ಇದರಲ್ಲಿ ಹಳೆ ಮೈಸೂರು ಭಾಗದ ರಾಮನಗರ ಕ್ಷೇತ್ರದಲ್ಲಿ ಅತ್ಯಧಿಕ ಮತದಾನವಾಗಿದೆ. ಇಲ್ಲಿ 79 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅತಿ ಕಡಿಮೆ ಬಿಬಿಎಂಪಿ ದಕ್ಷಿಣ ಕ್ಷೇತ್ರದಲ್ಲಿ 50 ಪ್ರತಿಶತದಷ್ಟು ಹಕ್ಕು ಚಲಾವಣೆಯಾಗಿದೆ.
Live Updates: ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯ: ರಾಜ್ಯಾದ್ಯಂತ ಶೇ.66.31 ರಷ್ಟು ಮತದಾನ - ವಿಧಾನಸಭಾ ಚುನಾವಣೆ 2023 ಮತದಾನ
18:24 May 10
ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯ,
16:39 May 10
ಮೊದಲ ಮತದಾನದ ಖುಷಿಯಲ್ಲಿ ಯುವ ಮತದಾರರು
ಬೆಂಗಳೂರು: ರಾಜ್ಯಾದ್ಯಂತ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ಬಾರಿ ಮೊದಲ ಬಾರಿಗೆ ಮತದಾನ ಮಾಡುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಯುವ ಮತದಾರರು ಕ್ಯೂನಲ್ಲಿ ನಿಂತು ತಮ್ಮ ಮತಹಕ್ಕು ಚಲಾಯಿಸಿದರು.
16:09 May 10
ಹುಬ್ಬಳ್ಳಿಯಲ್ಲಿ ಮತ ಡಿಲೀಟ್, ಬೆಂಗಳೂರಿನಲ್ಲಿ 'ಕೈ' ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ
ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಒಂದೇ ಮತ ಕೇಂದ್ರದಲ್ಲಿ ಸುಮಾರು 400ಕ್ಕೂ ಅಧಿಕ ಮತಗಳು ಡಿಲೀಟ್ ಆಗಿವೆ. ಗುರುನಾಥ ನಗರದಲ್ಲಿರುವ ಪ್ರಿಯದರ್ಶಿನಿ ಕಾಲೇಜಿನ ಮತಗಟ್ಟೆಯಲ್ಲಿ ಮತಗಳೇ ಡಿಲೀಟ್ ಆಗಿವೆ. ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತದಾರರ ಹೆಸರು ಡಿಲೀಟ್ ಆಗಿದೆ ಎಂದು ಮತ ಚಲಾಯಿಸಲು ಬಂದ ಸಾರ್ವಜನಿಕರು ಚುನಾವಣಾ ಆರೋಪಿಸಿದರು.
ವೋಟಿಂಗ್ ಬೂತ್ ಎದುರೇ ಫೈಟ್:ಬೆಂಗಳೂರಿನಪದ್ಮನಾಭನಗರ ಕ್ಷೇತ್ರದ ಪಾಪಯ್ಯ ಗಾರ್ಡನ್ 28, 29 ಬೂತ್ ಬಳಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೊಣ್ಣೆಗಳಿಂದ ಯಾರೋ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಬಗ್ಗೆ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಜಿ ಕಾರ್ಪೋರೇಟರ್ ಲಕ್ಷ್ಮೀ ಪತಿ ಕಬ್ಬಾಳ್ ಉಮೇಶ್ ಎಂಬುವವರು ಸುಮಾರು 30 ಹುಡುಗರನ್ನ ಕರೆಸಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಮೀನಮ್ಮ ಮತ್ತು ಚನ್ನಪ್ಪ ಎಂಬುವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
15:51 May 10
ವಿಜಯಪುರದಲ್ಲಿ ಮತಯಂತ್ರ ಪುಡಿಗಟ್ಟಿದ ಜನರು
ವಿಜಯಪುರ:ಮತದಾನದ ಮಧ್ಯೆ ವಿಜಯಪುರದಲ್ಲಿ ಗಲಾಟೆ ನಡೆದಿದೆ. ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡುಬಂದಿದ್ದು, ಅಧಿಕಾರಿಗಳು ಮತದಾನ ಕಾರ್ಯ ಸ್ಥಗಿತಗೊಳಿಸಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ವಾಪಸ್ ಕೊಂಡೊಯ್ಯುತ್ತಿದ್ದರು. ಮೀಸಲಿಡಲಾಗಿದ್ದ ಮಶಿನ್‌ಗಳನ್ನೂ ತೆಗೆದುಕೊಂಡು ಹೋಗುವುದನ್ನು ಗಮನಿಸಿದ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಅಧಿಕಾರಿಗಳು ಇದಕ್ಕೆ ಸಮಂಜಸ ಉತ್ತರ ನೀಡದ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರುಮತಯಂತ್ರ ಮತ್ತು ವಿವಿಪ್ಯಾಟ್ ಮಷಿನ್‌ಗಳನ್ನು ಪುಡಿಗಟ್ಟಿದ್ದಾರೆ. ಬಳಿಕ ಅಧಿಕಾರಿಗಳ ಕಾರನ್ನೂ ಜಖಂಗೊಳಿಸಿದ್ದಾರೆ. ಸಿಬ್ಬಂದಿಗೆ ಥಳಿಸಿದ್ದಾರೆ ಎಂಬ ಆರೋಪವಿದೆ. ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು.
ಇನ್ನೊಂದೆಡೆ, ಕೋಲಾರ ತಾಲೂಕಿನ ಕೂಟೇರಿ ಗ್ರಾಮದಲ್ಲಿ ಮತಗಟ್ಟೆ ಬಳಿ ಕುಳಿತಿದ್ದವರಿಗೆ ದೂರ ಹೋಗುವಂತೆ ಮಹಿಳಾ ಪಿಎಸ್ಐ ಹೇಳಿದ್ದಾರೆ. ಇದರಿಂದ ಪೊಲೀಸರು ಮತ್ತು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀಕೃಷ್ಣಪ್ಪ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ಮಾತು ಕೇಳದ ಹಿನ್ನೆಲೆಯಲ್ಲಿ ಶ್ರೀಕೃಷ್ಣಪ್ಪರಿಗೆ ಜೀಪ್ ಹತ್ತುವಂತೆ ಸೂಚಿಸಿದ್ದಾರೆ.
ಕೃಷ್ಣಪ್ಪ ಪೊಲೀಸ್ ಜೀಪ್ ಹತ್ತಲು ನಿರಾಕರಿಸಿದ್ದಾರೆ. ಬಲವಂತವಾಗಿ ಪೊಲೀಸ್ ಜೀಪು ಹತ್ತಿಸಿಕೊಳ್ಳುವಾಗ ಕೃಷ್ಣಪ್ಪರ ತಲೆಗೆ ಗಾಯವಾಗಿದೆ. ಪೊಲೀಸರ ವರ್ತನೆ ಖಂಡಿಸಿದ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ಗ್ರಾಮಸ್ಥರು ಪೊಲೀಸ್ ಜೀಪ್ಗೆ ಮುತ್ತಿಗೆ ಹಾಕಿದರು. ಕೃಷ್ಣಪ್ಪರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
15:20 May 10
ಪೂರ್ಣ ಬಹುಮತದಿಂದ ಬಿಜೆಪಿ ಸರ್ಕಾರ ರಚನೆ: ಈಶ್ವರಪ್ಪ ವಿಶ್ವಾಸ
ಶಿವಮೊಗ್ಗ:ಭಾರತೀಯ ಜನತಾ ಪಾರ್ಟಿಯನ್ನು ಪೂರ್ಣ ಬೆಂಬಲದ ಮೂಲಕ ಅಧಿಕಾರಕ್ಕೆ ತರಬೇಕು ಎಂದು ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯು 140 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಸೈನ್ಸ್ ಮೈದಾನದ ಬೂತ್ ಸಂಖ್ಯೆ 163 ರಲ್ಲಿ ತಮ್ಮ ಕುಟುಂಬ ಸಮೇತ ಮತದಾನ ಮಾಡಿ ಮಾತನಾಡಿದ ಅವರು, ಈಗಾಗಲೇ ನಾನು ಕುಟುಂಬದ ಸಮೇತ ಶಿವಮೊಗ್ಗದಲ್ಲಿ ಮತದಾನ ಮಾಡಿದ್ದೇನೆ. ಈಗಾಗಲೇ 20ರಿಂದ 25ರಷ್ಟು ಮತದಾನ ಆಗಿದೆ. ಈ ಬಾರಿ ಹೆಚ್ಚು ಮತದಾನ ಆಗುವ ನಿರೀಕ್ಷೆಯಿದೆ ಎಂದರು.
14:48 May 10
ಹಾಸನದಲ್ಲಿ ಮತ ಚಲಾಯಿಸಿದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ
ಹಾಸನ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತದಾನ ಮಾಡಿದರು. ಹಾಸನದ ಮತಗಟ್ಟೆಯಲ್ಲಿ ಪತ್ನಿ ಚೆನ್ನಮ್ಮ ಅವರ ಸಮೇತರಾಗಿ ಆಗಮಿಸಿದ ಗೌಡರು ತಮ್ಮ ಮತ ಚಲಾಯಿಸಿದರು.
ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಹಾಗು ಪುತ್ರ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಸಮೇತರಾಗಿ ರಾಮನಗರ ಜಿಲ್ಲೆಯಲ್ಲಿ ಮತದಾನ ಮಾಡಿದ್ದಾರೆ. ಶಾಸಕಿ ಹಾಗು ಪತ್ನಿ ಅನಿತಾ ಕುಮಾರಸ್ವಾಮಿ, ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜೊತೆಗಿದ್ದರು. ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 235ಯಲ್ಲಿ ಹಕ್ಕು ಚಲಾಯಿಸಿದರು.
14:27 May 10
ಬಿಜೆಪಿ, ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದೆ- ಹೆಚ್ಡಿಕೆ ಆರೋಪ
ರಾಮನಗರ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದ್ದು, ನಾವು ನಮ್ಮ ಅಭ್ಯರ್ಥಿಗಳಿಗೆ ಹಣದ ಸಹಾಯ ಮಾಡಲು ಆಗದ್ದಕ್ಕೆ ನೋವಿದೆ. ಆದಾಗ್ಯೂ ಜೆಡಿಎಸ್ ರಾಜ್ಯದಲ್ಲಿ ಬಹುಮತ ಪಡೆಯಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇತಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, "ಉತ್ತರ ಕರ್ನಾಟಕದ ಹಲವು ಕಡೆಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು, ಅಫ್ಜಲ್‌ಪುರ, ಸೇಡಂ, ನವಲಗುಂದ, ರಾಯಭಾಗ, ಕುಡಚಿ, ರಾಯಚೂರು ಗ್ರಾಮೀಣ, ಕೊಪ್ಪಳ, ಸಿಂದಗಿ ಸೇರಿದಂತೆ ಕನಿಷ್ಠ 25 ಕ್ಷೇತ್ರಗಳಲ್ಲಿ ಹಣದ ಕೊರತೆಯಿಂದಾಗಿ ನಮಗೆ ಹಿನ್ನಡೆ ಆಗಿದೆ. ಇದರಿಂದಾಗಿ ಗೆಲ್ಲುವ ಕ್ಷೇತ್ರಗಳಲ್ಲಿಯೂ ಪೆಟ್ಟು ತಿಂದಿದ್ದೇವೆ. ಕೊನೆಯ ಹಂತದಲ್ಲಿ ಪಾರ್ಟಿ ಫಂಡ್ ವಿಚಾರದಲ್ಲಿ ನಾವು ಅಭ್ಯರ್ಥಿಗಳ ನಿರೀಕ್ಷೆ ಮುಟ್ಟಲು ಆಗಿಲ್ಲ" ಎಂದರು.
ಚನ್ನಪಟ್ಟಣ, ರಾಮನಗರ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದಲ್ಲಿ ಮುಂದೇನು ಮಾಡುತ್ತೀರಿ ಎಂಬ ಪ್ರಶ್ನೆಗೆ ಅದರ ಬಗ್ಗೆ ಮುಂದೆ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.
14:16 May 10
ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಿ - ಸುದೀಪ್
ನಟ ಕಿಚ್ಚ ಸುದೀಪ್ ಬೆಂಗಳೂರಿನಲ್ಲಿ ಮತ ಚಲಾಯಿಸಿದರು. ನಂತರ ಮಾತನಾಡಿದ ಅವರು, "ಪ್ರತಿಯೊಬ್ಬರೂ ತಮ್ಮ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಬೇಕು. ನಾನು ಸೆಲೆಬ್ರಿಟಿಯಾಗಿ ಇಲ್ಲಿಗೆ ಮತ ಹಾಕಲು ಬಂದಿಲ್ಲ, ನಾನು ಭಾರತೀಯನಾಗಿ ಇಲ್ಲಿಗೆ ಬಂದಿದ್ದೇನೆ ಮತ್ತು ಇದು ನನ್ನ ಜವಾಬ್ದಾರಿ ಕೂಡ ಹೌದು" ಎಂದರು.
ಹಾಗೆಯೇ, ತುಮಕೂರು ನಗರದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಂಬ್ಯುಲೆನ್ಸ್ನಲ್ಲಿ ಬಂದು ಮತ ಚಲಾವಣೆ ಮಾಡಿದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಪಗಿರಾಮು ಎಂಬುವರು ಕಳೆದ ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲೇ ಮಲಗಿದ್ದರು. ಇಂದು ಆಂಬ್ಯುಲೆನ್ಸ್ನಲ್ಲಿ ಬಂದ ಅವರು ತುಮಕೂರು ನಗರದ ರೈಲ್ವೆ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ಮತದಾನ ಮಾಡಿದರು.
13:40 May 10
ರಾಜ್ಯದಲ್ಲಿ ಈವರೆಗೆ ಶೇ 37.25 ಮತದಾನ
ಇಂದು ಮಧ್ಯಾಹ್ನ ಒಂದು ಗಂಟೆವರೆಗೆ ರಾಜ್ಯದಲ್ಲಿ ಒಟ್ಟು 37.25% ಮತದಾನವಾಗಿದೆ.
ಕೋಲಾರ ಜಿಲ್ಲೆ ವಿಧಾನಸಭಾ ಮತದಾನದ ವಿವರ: 1.00 ಗಂಟೆಯವರೆಗೆ ಶ್ರೀನಿವಾಸಪುರದಲ್ಲಿ - 38 %, ಮುಳಬಾಗಿಲು - ಶೇ. 33.0, ಕೆಜಿಎಫ್ - ಶೇ. 38.5, ಬಂಗಾರಪೇಟೆ -ಶೇ. 34.23, ಕೋಲಾರ -ಶೇ. 31.42 %, ಮಾಲೂರು -ಶೇ. 29.24 % ಸೇರಿ ಜಿಲ್ಲೆಯಲ್ಲಿ ಸರಾಸರಿ ಶೇ.- 34.05% ರಷ್ಟು ಶೇಕಡಾವಾರು ಮತದಾನವಾಗಿದೆ.
ರಾಮನಗರ ಜಿಲ್ಲೆ ವಿಧಾನಸಭಾ ಮತದಾನದ ಮಾಹಿತಿ: ಮಾಗಡಿ ಶೇ. 44.21, ರಾಮನಗರ - ಶೇ. 45.00, ಕನಕಪುರ - ಶೇ. 37.15, ಚನ್ನಪಟ್ಟಣ -ಶೇ. 41.21 ಸೇರಿ ಜಿಲ್ಲೆಯಲ್ಲಿ ಶೇ.- 41.89ರಷ್ಟು ಮತದಾನವಾಗಿದೆ.
ಧಾರವಾಡ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನದ ವಿವರ: ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ. 35.08, ಕುಂದಗೋಳ ವಿಧಾನಸಭಾ ಮತಕ್ಷೇತ್ರ ಶೇ. 35.28, ಧಾರವಾಡ ವಿಧಾನಸಭಾ ಮತಕ್ಷೇತ್ರ ಶೇ.38.61, ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ.32, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ. 34.68, ಹುಬ್ಬಳ್ಳಿ - ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ. 35.74, ಕಲಘಟಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ.33 ರಷ್ಟು ಮತದಾನವಾಗಿದ್ದು, ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ನಡೆದಿರುವ ಸರಾಸರಿ ಮತದಾನ ಶೇ. 35.06.
ತುಮಕೂರು: ಜಿಲ್ಲೆಯಲ್ಲಿ ಸಹ ಬಿರುಸಿನಿಂದ ಮತದಾನ ಸಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ 38.36% ರಷ್ಟು ಮತದಾನ ಮಾಡಲಾಗಿದೆ.
ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ 1 ಗಂಟೆವರೆಗೆ 44.17 ಪ್ರತಿಶತ ಮತದಾನವಾಗಿದೆ. ಬಂಟ್ವಾಳ- 47.03%, ಬೆಳ್ತಂಗಡಿ - 44.82%, ಮಂಗಳೂರು- 43.40%, ಮಂಗಳೂರು ಉತ್ತರ- 43.43%, ಮಂಗಳೂರು ದಕ್ಷಿಣ - 38.45%, ಮೂಡಬಿದಿರೆ- 44.45%, ಪುತ್ತೂರು- 47.47%, ಸುಳ್ಯ- 45.10%.
ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳ ಮತದಾನದ ವಿವರ:ಶಿವಮೊಗ್ಗ ಗ್ರಾಮೀಣ ಕ್ಷೇತ್ರದಲ್ಲಿ - 40.39%, ಭದ್ರಾವತಿ - 37.92%, ಶಿವಮೊಗ್ಗ - 40.03%, ತೀರ್ಥಹಳ್ಳಿ - 44.00%, ಶಿಕಾರಿಪುರ - 45.02%, ಸೊರಬ - 40.21%, ಸಾಗರ - 43.01%.
ರಾಯಚೂರು ಮತದಾನದ ಶೇಕಡಾವಾರು ಮಾಹಿತಿ: ದೇವದುರ್ಗ: 42.08%, ಲಿಂಗಸುಗೂರು: 32.12%, ಮಾನ್ವಿ : 36.91%, ಮಸ್ಕಿ : 38.90%, ರಾಯಚೂರು ನಗರ: 32.13%, ರಾಯಚೂರು ಗ್ರಾಮೀಣ: 41.75%, ಸಿಂಧನೂರು : 44.03% ಸೇರಿ ಜೆಲ್ಲೆಯಾದ್ಯಂತ ಒಟ್ಟಾರೆ : 38.20% ರಷ್ಟು ಮತದಾನವಾಗಿದೆ.
ಮೈಸೂರು: ಜಿಲ್ಲೆಯಲ್ಲಿ ಬೆಳಗ್ಗೆ 1 ಗಂಟೆ ವರಗೆ 36.73 ಶೇ. ರಷ್ಟು ಮತದಾನವಾಗಿದೆ.
ಚಾಮರಾಜನಗರ: ಚಾಮರಾಜನಗರ - 37.77%, ಗುಂಡ್ಲುಪೇಟೆ-25.09%, ಹನೂರು-28.26%, ಕೊಳ್ಳೇಗಾಲ-31.73% ರಷ್ಟು ಮತದಾನ ಮಾಡಲಾಗಿದೆ.
ಕೊಡಗು : ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯುತ್ತಿದ್ದು, ಒಟ್ಟು 45.64 % ಮತದಾನವಾಗಿದೆ. ಮಡಿಕೇರಿ ಕ್ಷೇತ್ರ - 43.99%, ವಿರಾಜಪೇಟೆ ಕ್ಷೇತ್ರ - 47.57% ಮತದಾನವಾಗಿದೆ.
ದಾವಣಗೆರೆ: ಜಗಳೂರಿನಲ್ಲಿ ಶೇ. - 42.00%, ಹರಿಹರ -40.62%, ದಾವಣಗೆರೆ ಉತ್ತರ - 36.87%, ದಾವಣಗೆರೆ ದಕ್ಷಿಣ - 32.15%, ಮಾಯಕೊಂಡ -38.48%, ಚನ್ನಗಿರಿ -40.93%, ಹೊನ್ನಾಳಿ -40.16% ಮತದಾನವಾಗಿದೆ.
ಬೆಳಗಾವಿ: ನಿಪ್ಪಾಣಿ ವಿಧಾನಸಭೆ ಕ್ಷೇತ್ರ: ಶೇ.38.7, ಚಿಕ್ಕೋಡಿ ವಿಧಾನಸಭೆ ಕ್ಷೇತ್ರ: ಶೇ.42.3, ಅಥಣಿ ವಿಧಾನಸಭೆ ಕ್ಷೇತ್ರ: ಶೇ.41.5, ಕಾಗವಾಡ ವಿಧಾನಸಭೆ ಕ್ಷೇತ್ರ: ಶೇ.43.26, ಕುಡಚಿ ವಿಧಾನಸಭೆ ಕ್ಷೇತ್ರ: ಶೇ.45.2, ರಾಯಬಾಗ ವಿಧಾನಸಭೆ ಕ್ಷೇತ್ರ: ಶೇ.32.25, ಹುಕ್ಕೇರಿ ವಿಧಾನಸಭೆ ಕ್ಷೇತ್ರ: ಶೇ.39.08, ಅರಭಾವಿ ವಿಧಾನಸಭೆ ಕ್ಷೇತ್ರ: ಶೇ.37.76, ಗೋಕಾಕ್ ವಿಧಾನಸಭೆ ಕ್ಷೇತ್ರ: ಶೇ.39.08, ಯಮಕನಮರಡಿ ವಿಧಾನಸಭೆ ಕ್ಷೇತ್ರ: ಶೇ.40.52, ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರ: ಶೇ.32.26, ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರ: ಶೇ.33.63, ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರ: ಶೇ.35.78, ಖಾನಾಪುರ ವಿಧಾನಸಭೆ ಕ್ಷೇತ್ರ: ಶೇ.36.42, ಕಿತ್ತೂರು ವಿಧಾನಸಭೆ ಕ್ಷೇತ್ರ: ಶೇ.38.3, ಬೈಲಹೊಂಗಲ ವಿಧಾನಸಭೆ ಕ್ಷೇತ್ರ: ಶೇ.37, ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರ: ಶೇ.36.49, ರಾಮದುರ್ಗ ವಿಧಾನಸಭೆ ಕ್ಷೇತ್ರ: ಶೇ.27.15 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 38.64% ಶೇಕಡಾವಾರು ಮತದಾನವಾಗಿದೆ.
ವಿಜಯಪುರ: ಮಧ್ಯಾಹ್ನ1 ಗಂಟೆವರೆಗೆ ಶೇ.35.98ರಷ್ಟು ಮತದಾನವಾಗಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶೇ.36.3, ದೇವರಹಿಪ್ಪರಗಿ ಶೇ.34.71, ಬಸವನ ಬಾಗೇವಾಡಿ ಶೇ.39.11, ಬಬಲೇಶ್ವರ ಶೇ.39.15, ಬಿಜಾಪೂರ ನಗರ ಕ್ಷೇತ್ರದಲ್ಲಿ ಶೇ.40.84 ರಷ್ಟು, ನಾಗಠಾಣ ಮತಕ್ಷೇತ್ರದಲ್ಲಿ ಶೇ 33.49, ಇಂಡಿ ಶೇ.35.09 ಹಾಗೂ ಸಿಂದಗಿ ಶೇ.29.14 ರಷ್ಟು ಮತದಾನವಾಗಿದೆ.
13:38 May 10
ಮಹದೇವಪುರ ಕ್ಷೇತ್ರದಲ್ಲಿ ಕೈಕೊಟ್ಟ ಮತಯಂತ್ರ!
ಮಹದೇವಪುರ ಕ್ಷೇತ್ರದ ಜ್ಯೋತಿಪುರ ಗ್ರಾಮದ ಮತಗಟ್ಟೆ ಸಂಖ್ಯೆ 3ರಲ್ಲಿ ತಾಂತ್ರಿಕ ತೊಂದರೆ ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಮತದಾರರು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಬೇಕಾಯಿತು. ಚುನಾವಣಾ ಅಧಿಕಾರಗಳ ನಿರ್ಲಕ್ಷ್ಯದಿಂದ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು 150ಕ್ಕೂ ಹೆಚ್ಚು ಮತದಾರರು ಸರತಿ ಸಾಲಿನಲ್ಲಿ ಬಿಸಿಲಿನಲ್ಲಿ ಪರದಾಡಬೇಕಾಯಿತು. ಸುಮ್ಮನೆ ಕುಳಿತಿದ್ದ ಅಧಿಕಾರಿಗಳ ವರ್ತನೆಗೆ ಬೇಸತ್ತ ಮತದಾರರು, ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
13:03 May 10
ಮತ ಹಾಕದ ಗ್ರಾಮಸ್ಥರು:
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ಸಾಗುತ್ತಿದ್ದರೂ ರಾಜ್ಯದ ಕಟ್ಟಕಡೆಯ ಗ್ರಾಮವಾದ ಗುಂಡ್ಲುಪೇಟೆ ತಾಲೂಕಿನ ಚಿಕ್ಕ ಎಲಚೆಟ್ಟಿಯಲ್ಲಿ ಇದುವರೆಗೆ ಒಬ್ಬರೂ ಮತ ಹಾಕಿಲ್ಲ. ಇಲ್ಲಿ 101 ಅರ್ಹ ಮತದಾರರಿದ್ದಾರೆ. ಆದರೆ, ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಬಸ್ ಸೌಕರ್ಯ ಇಲ್ಲವೆಂದು ಅಸಮಾಧಾನಗೊಂಡು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಮೂಲಸೌಕರ್ಯ ಸಮಸ್ಯೆಯಿಂದಾಗಿ ನೊಂದು ಗ್ರಾಮಸ್ಥರು ಬೆಳಗ್ಗೆಯಿಂದಲೇ ಮತಗಟ್ಟೆಯತ್ತ ತಿರುಗಿ ನೋಡದೇ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಗುಂಡ್ಲುಪೇಟೆ ತಹಶೀಲ್ದಾರ್ ತಳವಾರ್ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತನಾಡಿದ್ದಾರೆ. ಆದರೆ, ತಹಶೀಲ್ದಾರ್ ಮಾತಿಗೂ ಒಪ್ಪದ ಗ್ರಾಮಸ್ಥರು, ಎಲ್ಲರು ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
13:03 May 10
ಬೆಳಗಾವಿಯಲ್ಲಿ ವಿವಿಧ ಅಭ್ಯರ್ಥಿಗಳಿಂದ ಮತದಾನ
ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಹಳೆ ವಂಟಮೂರಿಯಲ್ಲಿ ಸ್ಥಾಪಿಸಿದ ಮತಗಟ್ಟೆ ಕೇಂದ್ರ 95ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ ಚಲಾಯಿಸಿದರು. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮತ ಚಲಾಯಿಸಿ ಮಾತನಾಡಿದ ಅವರು, "ಮತದಾನ ನಮ್ಮ ಬಹುದೊಡ್ಡ ಜವಾಬ್ದಾರಿಯಾಗಿದ್ದು, ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಬೇಕೆಂದು" ಮನವಿ ಮಾಡಿದರು.
ಹಾಗೆಯೇ, ಬೆಳಗಾವಿ ಶಿವಬಸವ ನಗರದ ಜಿ.ಜಿ.ಯಳ್ಳೂರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಆಸೀಫ್(ರಾಜು) ಸೇಠ್, "ಮತದಾನ ಪ್ರತಿಯೊಬ್ಬರಿಗೂ ಸಂವಿಧಾನ ಕೊಟ್ಟ ಹಕ್ಕು, ತಮ್ಮ ಅಭ್ಯರ್ಥಿಗಳ ಪರ ಎಲ್ಲರೂ ಮತದಾನ ಮಾಡಿ ಗೆಲ್ಲಿಸಬೇಕು. ಎಲ್ಲ ಜಾತಿ, ಭಾಷೆ, ಧರ್ಮದವರು ಒಗ್ಗಟ್ಟಾಗಿ ಬೆಂಬಲ ಕೊಟ್ಟಿದ್ದಾರೆ. ಭಾರಿ ಅಂತರದಿಂದ ಗೆಲ್ಲುತ್ತೇನೆ" ಎಂದರು.
ಬೆಳಗಾವಿ ಸದಾಶಿವ ನಗರದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಮಾತನಾಡಿ, ಮತದಾನ ಮಾಡಿ ತುಂಬಾ ಖುಷಿಯಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಬಹಳಷ್ಟು ಸಂಖ್ಯೆಯಲ್ಲಿ ಮತದಾರರು ಮತ ಹಾಕುತ್ತಿದ್ದಾರೆ. ಇದನ್ನು ನೋಡಿದರೆ ಬಿಜೆಪಿಗೆ ಒಳ್ಳೆಯ ಪ್ರೋತ್ಸಾಹ ಸಿಗುತ್ತಿದ್ದು, ಖಂಡಿತವಾಗಲೂ ನಾನು ಗೆಲ್ಲುತ್ತೇನೆ, ಜನ ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಬೈಲಹೊಂಗಲ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ವಿಶ್ವನಾಥ ಪಾಟೀಲ ಸ್ವಗ್ರಾಮ ಲಿಂಗದಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಮತದಾನ ಮಾಡಿದರು. ಸವದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಸವದತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರ ಬೂತ್ ನಂ. 158ರಲ್ಲಿ ತಮ್ಮ ಪತ್ನಿ ಜೊತೆಗೆ ಆಗಮಿಸಿ ಮತ ಹಾಕಿದರು.
12:44 May 10
ಮತಗಟ್ಟೆ ಮುಂದೆ ಅಜ್ಜಿ ಧರಣಿ:
- ಮತಗಟ್ಟೆ ಮುಂದೆ ಧರಣಿ ಕುಳಿತ ಅಜ್ಜಿ
- ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ನಡೆದ ಘಟನೆ
- ಮೊಮ್ಮಗನ ಜೊತೆಗೆ ಮತದಾನಕ್ಕೆ ಆಗಮಿಸಿದ್ದ 85 ವರ್ಷದ ಮುಕ್ತುಂಬೀ ದೊಡ್ಡಮನಿ ಎನ್ನುವ ಅಜ್ಜಿ
- ಮೊಮ್ಮಗನನ್ನು ಅಜ್ಜಿಯ ಜೊತೆ ಬಿಡದ ಅಧಿಕಾರಿಗಳು
- ಅಜ್ಜಿ ತೋರಿಸಿದ ಚಿಹ್ನೆಗೆ ಮತ ಹಾಕಿಲ್ಲವೆಂಬ ಆರೋಪ
- ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು
- ಮತಗಟ್ಟೆ ಮುಂದೆ ಧರಣಿ ಕುಳಿತ 85 ವರ್ಷದ ಅಜ್ಜಿ
ಹಾಸನ : ಕೈಕೊಟ್ಟ ಇವಿಎಂ ಮಿಷನ್
- ಇವಿಎಂ ದೋಷದಿಂದ ಆರಂಭವಾಗದ ಮತದಾನ
- ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆಚಂಗಿ ಗ್ರಾಮದ ಮತಗಟ್ಟೆ ಸಂಖ್ಯೆ 76 ರಲ್ಲಿ ನಡೆದ ಘಟನೆ
- ಹಕ್ಕು ಚಲಾವಣೆ ಮಾಡಲು ಬಂದು ಕಾಯುತ್ತಿರುವ ಮತದಾರರು
- ಇವಿಎಂ ಮಿಷನ್ ಸರಿಪಡಿಸಲು ಅಧಿಕಾರಿಗಳ ಪರದಾಟ
- ಮತಯಂತ್ರ ಬದಲಾಯಿಸಿ ಮತದಾನಕ್ಕೆ ಅವಕಾಶ
- ತಡವಾದ ಕಾರಣ ಮುನ್ನೂರಕ್ಕೂ ಹೆಚ್ಚು ಜನ ಮತದಾನ ಮಾಡದೆ ವಾಪಸ್
ದಾವಣಗೆರೆ: ಇಲ್ಲಿನ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್ಎಸ್ ಮಲ್ಲಿಕಾರ್ಜುನ್ ಮತಚಲಾವಣೆ
- ಕುಟುಂಬ ಸಮೇತರಾಗಿ ಆಗಮಿಸಿ ಮತಚಲಾವಣೆ ಮಾಡಿದ ಮಲ್ಲಿಕಾರ್ಜುನ್
- ಪತ್ನಿ ಪ್ರಭಾ, ಪುತ್ರ ಸಮರ್ಥ್, ಪುತ್ರಿ ಶ್ರೇಷ್ಠ ರೊಂದಿಗೆ ಆಗಮಿಸಿ ಹಕ್ಕು ಚಲಾವಣೆ
- ಮೊದಲ ಬಾರಿ ಓಟು ಹಾಕಿದ ಪುತ್ರ ಸಮರ್ಥ್ ಹಾಗೂ ಪುತ್ರಿ ಶ್ರೇಷ್ಠ
- ಹಾಗೆಯೇ, ದಾವಣಗೆರೆ ದಕ್ಷಿಣ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ರಿಂದ ಕೂಡ ಮತಚಲಾವಣೆ
- ದಾವಣಗೆರೆ ನಗರದ ಐಎಂಎ ಹಾಲ್ ಮತಗಟ್ಟೆಯಲ್ಲಿ ಮತದಾನ
ಚಿಕ್ಕೋಡಿ : ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆಯಿಂದ ಮತದಾನ
- ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಮತದಾನ ಮಾಡಿದ ಪ್ರಭಾಕರ್ ಕೋರೆ
- ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಮತಚಲಾವಣೆ
- ಪ್ರತಿಯೊಬ್ಬರು ಶಾಂತಿಯಿಂದ ಮತದಾನ ಮಾಡುವಂತೆ ಮನವಿ
ಹಾಸನ: ವಾರ್ಡ್ ನಂ 21, 22 ಬೂತ್ಗೆ ಭೇಟಿ ನೀಟಿದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು
- ಬುರ್ಖಾ ತೆಗೆಸಿ ಮತದಾನ ಮಾಡಿಸುವಂತೆ ಕೆಲ ಕಾರ್ಯಕರ್ತರು ಆಗ್ರಹ
- ಸ್ಥಳದಿಂದ ಸಿಮೆಂಟ್ ಮಂಜು ನಿರ್ಗಮನದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಮುಸ್ಲಿಮರು ಆಕ್ರೋಶ
- ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾದ ಕಿಡಿಗೇಡಿಗಳು
- ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ
- ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ ಪೋಲಿಸರು
12:16 May 10
ಜಿಲ್ಲಾವಾರು ಮತದಾನದ ಮಾಹಿತಿ:
ತುಮಕೂರು ಮತದಾನದ ವಿವರ: ಚಿಕ್ಕನಾಯಕನಹಳ್ಳಿ ಶೇ. 23.33, ತಿಪಟೂರು - ಶೇ. 21.22, ತುರುವೇಕೆರೆ - ಶೇ. 22.51, ಕುಣಿಗಲ್ -ಶೇ. 23.80, ತುಮಕೂರು ನಗರ - ಶೇ20.49, ತುಮಕೂರು ಗ್ರಾಮಾಂತರ - ಶೇ. 20.63, ಕೊರಟಗೆರೆ - ಶೇ. 17.63, ಗುಬ್ಬಿ - ಶೇ. 24.22, ಶಿರಾ - ಶೇ. 16.09, ಪಾವಗಡ - ಶೇ 23.74, ಮಧುಗಿರಿ - ಶೇ. 19.68 ಮತದಾನವಾಗಿದ್ದು, ಜಿಲ್ಲೆಯಲ್ಲಿ ಸರಾಸರಿ ಶೇ. 21.11ರಷ್ಟು ಮತದಾನವಾಗಿದೆ.
ಕಲಬುರಗಿ ಮತದಾನದ ಶೇಕಡಾವಾರು ಮಾಹಿತಿ: ಕಲಬುರಗಿ ಜಿಲ್ಲೆಯಲ್ಲಿ 11 ಗಂಟೆವರೆಗೆ ಶೇಕಡಾ 17.95% ಮತದಾನವಾಗಿದೆ. ಅತಿ ಹೆಚ್ಚು ಮತದಾನವಾಗಿರೋದು ಸೇಡಂ ಮತಕ್ಷೇತ್ರದಲ್ಲಿ ಶೇಕಡ 19% ರಷ್ಟು. ಅತ್ಯಂತ ಕಡಿಮೆ ಮತದಾನವಾಗಿರೋದು ದಕ್ಷಿಣ ಮತಕ್ಷೇತ್ರದಲ್ಲಿ 13%.
ಬಳ್ಳಾರಿ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನದ ವಿವರ: ಬೆಳಗ್ಗೆ 11 ಗಂಟೆಯವರೆಗೆ ಕಂಪ್ಲಿಯಲ್ಲಿ - ಶೇ.30.75, ಸಿರಗುಪ್ಪ-ಶೇ.25.84, ಬಳ್ಳಾರಿ ಗ್ರಾಮೀಣ- ಶೇ. 24.0, ಬಳ್ಳಾರಿ ನಗರ-ಶೇ. 19.22, ಸಂಡೂರು-ಶೇ.19.03 ಮತದಾನವಾಗಿದ್ದು, ಜಿಲ್ಲೆಯಲ್ಲಿ ಸರಾಸರಿ ಶೇ.- 23.76 ಮತದಾನವಾಗಿದೆ.
ಶಿವಮೊಗ್ಗ ಜಿಲ್ಲೆ ಮತದಾನದ ಮಾಹಿತಿ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ- 23.49 %, ಭದ್ರಾವತ ಕ್ಷೇತ್ರ - 21.92 %, ಶಿವಮೊಗ್ಗ ಕ್ಷೇತ್ರ-23.62 %, ತೀರ್ಥಹಳ್ಳಿ ಕ್ಷೇತ್ರ- 20.00 %, ಶಿಕಾರಿಪುರ ಕ್ಷೇತ್ರ- 22.01 %, ಸೊರಬ ಕ್ಷೇತ್ರ- 21 %, ಸಾಗರ: 26.92 % ಮತದಾನವಾಗಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಮತದಾನದ ಶೇಕಡಾವಾರು ಮಾಹಿತಿ ಇಂತಿದೆ: ನಿಪ್ಪಾಣಿ - 21.6%, ಚಿಕ್ಕೋಡಿ- ಸದಲಗಾ - 16.3%, ಅಥಣಿ - 24.6%, ಕಾಗವಾಡ - 23.89%, ಕುಡಚಿ - 24.36%, ರಾಯಬಾಗ - 23.5%, ಹುಕ್ಕೇರಿ - 22.21%, ಯಮಕನಮರಡಿ - 18.2% ಮತದಾನ ಮಾಡಲಾಗಿದೆ.
ಗದಗ ವಿಧಾನಸಭಾ ಕ್ಷೇತ್ರದ ಮಾಹಿತಿ:ಗದಗ ಜಿಲ್ಲೆಯಲ್ಲಿ ಒಟ್ಟು ಶೇ.21.14 ರಷ್ಟು ಮತದಾನವಾಗಿದೆ. ಗದಗ - 22.63%, ರೋಣ - 22.04 % ಶಿರಹಟ್ಟಿ - 16.17 % ನರಗುಂದ - 24.28% ಮತದಾನವಾಗಿದೆ.
ದಾವಣಗೆರೆ ಮತದಾನದ ಮಾಹಿತಿ: ಜಗಳೂರು - 22.30%, ಹರಿಹರ - 22.95%, ದಾವಣಗೆರೆ- ಉತ್ತರ 18.35%, ದಾವಣಗೆರೆ ದಕ್ಷಿಣ- 17.46%, ಮಾಯಕೊಂಡ -19.21%, ಚನ್ನಗಿರಿ -25.39%, ಹೊನ್ನಾಳಿ -20.39% ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಶೇಕಡವಾರು 20.78 ಮತದಾನವಾಗಿದೆ.
ಬಾಗಲಕೋಟೆ: ಜಿದ್ದಾಜಿದ್ದನ ಕ್ಷೇತ್ರವಾಗಿರುವ ಬೀಳಗಿಯಲ್ಲಿ ಬಿಜೆಪಿ ಅಭ್ಯರ್ಥಿ ಮುರಗೇಶ್ ನಿರಾಣಿ ಮತದಾನ ಮಾಡಿದರು. ಬೀಳಗಿ ತಾಲೂಕಿನ ಬಸವ ಹಂಚಿನಾಳ ಗ್ರಾಮದಲ್ಲಿ ತಂದೆ, ತಾಯಿ, ಪತ್ನಿ, ಮಕ್ಕಳು, ಸೊಸೆ ಸೇರಿದಂತೆ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.
ರಾಯಚೂರು ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ ಮತದಾನದ ಶೇಕಡಾವಾರು ಮಾಹಿತಿ: ದೇವದುರ್ಗ 24.13 %, ಲಿಂಗಸುಗೂರು- 15.67%, ಮಾನ್ವಿ - 20.83, ಮಸ್ಕಿ - 22.80%, ರಾಯಚೂರು ನಗರ- 21.38%, ರಾಯಚೂರು ಗ್ರಾಮೀಣ- 25.40%, ಸಿಂಧನೂರು - 27.77%. ಒಟ್ಟಾರೆ : 22.48% ಮತದಾನವಾಗಿದೆ.
ಕೊಪ್ಪಳ : 11 ಗಂಟೆವರೆಗೆ ಶೇ.21.46 ಮತದಾನವಾಗಿದ್ದು, ಕುಷ್ಟಗಿ ಕ್ಷೇತ್ರದಲ್ಲಿ ಶೇ.22.92, ಕನಕಗಿರಿ ಕ್ಷೇತ್ರದಲ್ಲಿ ಶೇ.26.27, ಗಂಗಾವತಿ ಕ್ಷೇತ್ರದಲ್ಲಿ ಶೇ.16.95, ಯಲಬುರ್ಗಾ ಕ್ಷೇತ್ರದಲ್ಲಿ ಶೇ.21.83, ಕೊಪ್ಪಳ ಕ್ಷೇತ್ರದಲ್ಲಿ ಶೆ.19.12 ಮತದಾನವಾಗಿದೆ.
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 11ಗಂಟೆಯವೆಗಿನ 16.90% ಮತದಾನವಾಗಿದೆ. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ 18.87% ಮತದಾನ ಮಾಡಲಾಗಿದೆ.
ಆನೇಕಲ್ : ಇಲ್ಲಿನ 378 ಮತಗಟ್ಟೆಗಳಲ್ಲಿ 11 ಗಂಟೆ ವರೆಗೆ 13.67% ಮತದಾನ ದಾಖಲಾಗಿದೆ.
11:59 May 10
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯಿಂದ ಮತದಾನ
ವಿಜಯನಗರ: ರಾಜ್ಯ ಚುನಾವಣೆ ಆಯೋಗದ ರಾಯಭಾರಿ, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಇಂದು ಬೆಳಗ್ಗೆ ಮತದಾನ ಮಾಡಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ 60ನೇ ನಂಬರ್ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮರಿಯಮ್ಮನಹಳ್ಳಿ ಹೊಸಪೇಟೆ ತಾಲೂಕಾದರೂ ಸದ್ಯಕ್ಕೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿದೆ.
ಶಿವಮೊಗ್ಗ: ವಿಧಾನಸಭೆ ಚುನಾವಣೆ ಮತದಾನ ಬಿರುಸಿನಿಂದ ಸಾಗುತ್ತಿದ್ದು, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗೋ ಮಾತೆಗೆ ಪೂಜೆ ಸಲ್ಲಿಸಿ, ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು. ಕೋಟೆ ರಸ್ತೆಯ ಮಹಾವೀರ ಶಾಲೆಯಲ್ಲಿ ಮತದಾನ ಮಾಡಿದರು.
ಹಾಗೆಯೇ, ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಎಸ್ ಶಂಕರಮೂರ್ತಿ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಅವರು ಕುಟುಂಬ ಸಮೇತರಾಗಿ ಬಸವನಗುಡುಯ ಆನಂದ ಶಾಯಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜೊತೆಗೆ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಹಸೂಡಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮತಗಟ್ಟೆ ಸಂಖ್ಯೆ 207 ರಲ್ಲಿ ಸರತಿ ಸಾಲಿನಲ್ಲಿ ನಿಂತು ಓಟು ಹಾಕಿದರು.
11:48 May 10
ಮೈಸೂರು:ತಾಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತದಾನ ಮಾಡಿದರು. ಬಳಿಕ ಮಾತನಾಡಿ, "ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ. ನನ್ನದು ಇದು ಕೊನೆಯ ಚುನಾವಣೆ, ಆದರೆ ನಿವೃತ್ತಿಯಾಗುವುದಿಲ್ಲ ಎಂದು ಹೇಳಿದರು.
ಇನ್ನು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಸಹ ಮೈಸೂರಿನ ಮತಗಟ್ಟೆಯಲ್ಲಿ ಓಟು ಹಾಕಿದರು. ಬಳಿಕ ಮಾತನಾಡಿ " ನಾನು ಮತ ಹಾಕಿದ್ದೇನೆ, ಒಳ್ಳೆಯ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬರು ಬಂದು ಮತ ಚಲಾಯಿಸುವ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕೆಂದು" ವಿನಂತಿ ಮಾಡಿದರು.
11:38 May 10
ಈವರೆಗೆ 20.99% ಮತದಾನ:
ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಸರಾಗವಾಗಿ ಸಾಗುತ್ತಿದ್ದು, 11ಗಂಟೆವರೆಗೆ 20.99% ಮತದಾನವಾಗಿದೆ.
ಹಾಸನ: ಮಾಜಿ ಸಿಎಂ ಮತ್ತು ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ತಮ್ಮ ಕುಟುಂಬದೊಂದಿಗೆ ರಾಮನಗರದ ಮತಗಟ್ಟೆಗೆ ಆಗಮಿಸಿ ಓಟು ಮಾಡಿದರು. ಹಾಗೆಯೇ, ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ರೇವಣ್ಣ ಕೂಡ ಕುಟುಂಬ ಸಮೇತರಾಗಿ ಆಗಮಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ಮತದಾನ ಮಾಡಿದರು.
- ಕಲಬುರಗಿ: ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆಯಿಂದ ಮತ ಚಲಾವಣೆ
- ಚಿತ್ತಾಪುರ ಕ್ಷೇತ್ರದ ಗುಂಡಗುರ್ತಿ ಗ್ರಾಮದಲ್ಲಿ ಮತದಾನ
- ಗುಂಡುಗುರ್ತಿ ಗ್ರಾಮದ ಬೂತ್ ನಂಬರ್ 26 ರಲ್ಲಿ ಮತ ಹಾಕಿದ ಕೈ ನಾಯಕ
- ತೀವ್ರ ಅನಾರೋಗ್ಯದ ನಡುವೆಯೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ಶ್ರೀಮತಿ ಶೃತಿ ಪ್ರಿಯಾಂಕ್ ಖರ್ಗೆ
- ದೆಹಲಿಯಿಂದ ವಿಮಾನದ ಮೂಲಕ ಆಗಮಿಸಿ ಮತ ಹಾಕಿದ ಶೃತಿ ಖರ್ಗೆ
- ಮೆದುಳಿನಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿರುವ ಶೃತಿ
11:20 May 10
ಮತ ಹಾಕಿದ ರಾಹುಲ್ ದ್ರಾವಿಡ್
ಬೆಂಗಳೂರು: ಭಾರತ ಕ್ರಿಕೆಟ್ ಮಾಜಿ ಆಟಗಾರ, ಪ್ರಸ್ತುತ ತಂಡದ ಕೋಚ್ ರಾಹುಲ್ ದ್ರಾವಿಡ್ ಮಲ್ಲೇಶ್ವರಂ ಕ್ಷೇತ್ರದ ಡಾಲರ್ಸ್ ಕಾಲೋನಿ ಮತಗಟ್ಟೆ 53 ರಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಕಾರವಾರ: ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರಿಗೆ ಮತಗಟ್ಟೆಯಲ್ಲಿ ಗಿಡಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡಲಾಯಿತು. ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್ ನಲ್ಲಿ ತೆರೆಲಾದ ಮತಗಟ್ಟೆಯಲ್ಲಿ ಮುಂಜಾನೆ ಆಗಮಿಸಿದ 5 ಕ್ಕೂ ಹೆಚ್ಚು ಯುವ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮತದಾನ ಮಾಡುವ ಯುವ ಮತದಾರರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಎಂಸಿ ಕಮಿಷನರ್ ಜುಬಿನ್ ಮಹಾಪಾತ್ರ ಹಾಗೂ ಮತಗಟ್ಟೆ ಅಧಿಕಾರಿಗಳು ಹೂವು- ಹಣ್ಣುಗಳ ಗಿಡಗಳನ್ನು ನೀಡಿ ಅಭಿನಂದಿಸಿದರು. ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಹಾಕುವ 50 ಯುವಕ- ಯುವತಿಯರಿಗೆ ಗಿಡಗಳನ್ನು ನೀಡಿ ಅಭಿನಂದಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹುಬ್ಬಳ್ಳಿ: ಕೇಶ್ವಾಪುರದ ವಿವೇಕಾನಂದ ಕಾಲೊನಿಯ ರೋಟರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮತಗಟ್ಟೆ ನಂ. 109 ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ," ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಬೆಳಗ್ಗೆಯಿಂದ ಮತಗಟ್ಟೆಗಳ ಎದುರು ಜನರು ಸರತಿ ಸಾಲಿನಲ್ಲಿ ನಿಂತು, ಮತ ಚಲಾಯಿಸುತ್ತಿದ್ದಾರೆ. ರಾಜ್ಯಾದ್ಯಂತ ಪ್ರಜಾತಂತ್ರ ಹಬ್ಬಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ಚಿಕ್ಕೋಡಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬೂತ್ ನಂಬರ್ 45 ರಲ್ಲಿ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಮತದಾನ ಪ್ರಜಾಪ್ರಭುತ್ವ ದೊಡ್ಡ ಹೆಜ್ಜೆ, ಈ ಹಿನ್ನಲೆಯಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿ ಮತದಾನ ಮಾಡುವುದು ಕರ್ತವ್ಯವಾಗಿದೆ, ಮತದಾನ ಮಾಡಬೇಕೇ ಹೊರತು, ಆಮಿಷಕ್ಕೆ ಒಳಗಾಗಿ ಮತದಾನವನ್ನ ಮಾರಬಾರದು, ಪ್ರತಿಯೊಬ್ಬರೂ ಮತದಾನ ಮಾಡಿ ಒಳ್ಳೆಯ ಉತ್ತಮವಾದ ನಾಯಕನನ್ನು ಆಯ್ಕೆ ಮಾಡಬೇಕು" ಎಂದು ಹೇಳಿದರು.
ಹುಕ್ಕೇರಿ ಶ್ರೀಗಳಿಂದ ಮತದಾನ:ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹುಕ್ಕೇರಿ ಪಟ್ಟಣದ ಸರ್ಕಾರಿ ಶಾಲೆಗೆ ತೆರಳಿ ಮತದಾನ ಮಾಡಿದರು. ಇದೇ ಸಂದರ್ಭದಲ್ಲಿ, "ಮತದಾನ ಪವಿತ್ರವಾಗಿದೆ ಎಲ್ಲರೂ ಮತದಾನ ಮಾಡಿ, ಯಾವುದೇ ಆಮಿಷಗಳಿಗೆ ಬಲಿಯಾಗದೆ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ" ಎಂದು ಕರೆ ನೀಡಿದರು.
11:08 May 10
ತೇಜಸ್ವಿ ಸೂರ್ಯ, ಎಸ್ ನಾರಾಯಣ್, ಅರವಿಂದ ಲಿಂಬಾವಳಿಯಿಂದ ಮತದಾನ :
ಬೆಂಗಳೂರು: ಬಸವನಗುಡಿ ಕ್ಷೇತ್ರ ವ್ಯಾಪ್ತಿಯ ಗಿರಿನಗರದ ವಿಜಯ ಭಾರತಿ ವಿದ್ಯಾಲಯದಲ್ಲಿ ತಂದೆ ಮತ್ತು ತಾಯಿ ಜೊತೆ ಬಂದು ಸಂಸದ ತೇಜಸ್ವಿ ಸೂರ್ಯ ಮತದಾನ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, "ಎಲ್ಲರೂ ಬಂದು ಮತದಾನ ಮಾಡಿ, ಪ್ರಜಾಪ್ರಭುತ್ವ ದಲ್ಲಿ ಚುನಾವಣೆ ದೊಡ್ಡ ಹಬ್ಬ. ಬೆಂಗಳೂರಲ್ಲಿ ಸುಮಾರು 10-12% ಮತದಾನ ಆಗಿದೆ ಎಂಬ ಮಾಹಿತಿ ಬರುತ್ತಿದೆ. ಮತಗಟ್ಟೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕ್ಯೂ ಕಾಣುತ್ತಿದೆ. ವೃದ್ಧರು ವ್ಹೀಲ್ ಚೇರ್ನಲ್ಲಿ ಬಂದು ಮತ ಹಾಕುತ್ತಿದ್ದಾರೆ. ವೃದ್ಧರು ಬಂದು ಮತ ಹಾಕುತ್ತಿರುವಾಗ ಯುವಕರು ಮನೆಯಲ್ಲಿ ಕೂರಬಾರದು. ಬಂದು ಮತದಾನ ಮಾಡಬೇಕು. ಸುಭದ್ರ ಸರ್ಕಾರಕ್ಕೆ ನಿರ್ಧಾರ ಮಾಡಬೇಕು" ಎಂದು ಕರೆ ನೀಡಿದರು.
ಹಾಗೆಯೇ, ನ್ಯೂ ತಿಪ್ಪಸಂದ್ರ ನ್ಯಾಷನಲ್ ಸೆಂಟರ್ ಎಕ್ಸಲೆನ್ಸ್ ಶಾಲೆಯ ಮತಗಟ್ಟೆಯಲ್ಲಿ ಅರವಿಂದ ಲಿಂಬಾವಳಿ ದಂಪತಿ ಮತ ಚಲಾಯಿಸಿದರು. ಮತ್ತು ನಾಗರಭಾವಿಯ ಸೋಫಿಯಾ ಸ್ಕೂಲ್ನಲ್ಲಿ ಹಿರಿಯ ನಟ ಹಾಗೂ ನಿರ್ದೇಶಕ ಎಸ್ ನಾರಾಯಣ್ ದಂಪತಿ ಓಟು ಹಾಕಿದರು.
10:52 May 10
ಮತದಾನ ಮಾಡಿದ ಡಿ.ಕೆ.ಶಿವಕುಮಾರ್:
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 245ರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾನ ಮಾಡಿದರು. ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ ಆಭರಣ, ಸಹೋದರ ಡಿ.ಕೆ.ಸುರೇಶ್ ಜೊತೆ ಆಗಮಿಸಿ ಡಿಕೆಶಿ ಹಕ್ಕು ಚಲಾಯಿಸಿದರು.
ಮತದಾನಕ್ಕೂ ಮುನ್ನ ಮನೆದೇವರು ಕೆಂಕೇರಮ್ಮಗೆ ಪೂಜೆ ನೆರವೇರಿಸಿದ ಶಿವಕುಮಾರ್, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
10:44 May 10
ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
- ಬಳ್ಳಾರಿ: ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
- ಸಂಜೀವರಾಯನಕೋಟೆ ಗ್ರಾಮದಲ್ಲಿ ಕಾರ್ಯಕರ್ತರ ನಡುವೆ ನಡೆದ ಗಲಾಟೆ
- ಕಾಂಗ್ರೆಸ್ ಸ್ಥಳೀಯ ಮುಖಂಡ ಉಮೇಶ್ ಗೌಡ ತಲೆಗೆ ಗಾಯ
- ಇತ್ತೀಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಉಮೇಶ್ ಗೌಡ
- ಮತದಾನಕ್ಕೆ ತೆರಳುವ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಆರಂಭವಾದ ಗಲಾಟೆ
- ಸ್ಥಳಕ್ಕೆ ಆಗಮಿಸಿದ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು
10:28 May 10
ಮತದಾನ ಮಾಡಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೆಬ್ಬಾಳ್ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು.
10:23 May 10
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವಾರು ಮತದಾನ:
ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಗೆ ವರೆಗೆ ಶೇಕಡಾವಾರು -10.06% ರಷ್ಟು ಮತದಾನವಾಗಿದೆ.
- ಗೌರಿಬಿದನೂರು -7.48%
- ಬಾಗೇಪಲ್ಲಿ - 9.39%
- ಚಿಕ್ಕಬಳ್ಳಾಪುರ - 9.58%
- ಶಿಡ್ಲಘಟ್ಟ - 7.71%
- ಚಿಂತಾಮಣಿ - 10.27%
10:22 May 10
ತುಮಕೂರು ಜಿಲ್ಲೆಯಲ್ಲಿ 7.82 ℅ ಮತದಾನ
- ಚಿಕ್ಕನಾಯಕನಹಳ್ಳಿ - 8.79 %
- ತಿಪಟೂರು - 7.91%
- ತುರುವೇಕೆರೆ - 7.79%
- ಕುಣಿಗಲ್ - 8.36%
- ತುಮಕೂರು ಟೌನ್ - 9.13%
- ತುಮಕೂರು ಗ್ರಾ. - 7.69%
- ಕೊರಟಗೆರೆ - 3.48%
- ಗುಬ್ಬಿ - 8.16%
- ಶಿರಾ - 6.03%
- ಪಾವಗಡ - 7.12%
- ಮಧುಗಿರಿ - 3.07%
10:14 May 10
ರಾಜಧಾನಿ ಬೆಂಗಳೂರಿನ ಮತದಾನದ ಮಾಹಿತಿ
ಬಿಬಿಎಂಪಿ ಸೆಂಟ್ರಲ್ನಲ್ಲಿ 7.89 % ಮತದಾನವಾಗಿದೆ
ಬಿಬಿಎಂಪಿ ಉತ್ತರ - 7.55 %
ಬಿಬಿಎಂಪಿ ದಕ್ಷಿಣ - 9.37 %
ಬೆಂಗಳೂರು ನಗರ - 9.11 %
ಬೆಂಗಳೂರು ಗ್ರಾಮೀಣ - 7.72 %
10:13 May 10
ಹಾವೇರಿ ಜಿಲ್ಲೆಯಲ್ಲಿ ಇದುವರೆಗೆ ನಡೆದ ಶೇಕಡಾವಾರು ಮತದಾನ
- ಹಾನಗಲ್ - 8.58 %
- ಶಿಗ್ಗಾಂವ್ - 6.72 %
- ಹಾವೇರಿ - 7.17 %
- ಬ್ಯಾಡಗಿ - 7.59 %
- ಹಿರೇಕೇರೂರು - 8.69 %
- ರಾಣೆಬೆನ್ನೂರು - 7.7 %
10:12 May 10
ಚಿಕ್ಕಮಗಳೂರು ಜಿಲ್ಲಾವಾರು ಮತದಾನದ ಮಾಹಿತಿ:
- ಚಿಕ್ಕಮಗಳೂರು - ಶೇ. 8.68
- ಕಡೂರು - ಶೇ. 6.74
- ಮೂಡಿಗೆರೆ - ಶೇ. 8.84
- ಶೃಂಗೇರಿ - ಶೇ.11.45
- ತರಿಕೆರೆ - ಶೇ.8.16
- ಚಿಕ್ಕಮಗಳೂರು ಜಿಲ್ಲೆಯಲ್ಲಿ 8.06 ಮತದಾನವಾಗಿದೆ.
10:12 May 10
ದಾವಣಗೆರೆ ಜಿಲ್ಲಾವಾರು ಮಾಹಿತಿ:
- ಜಗಳೂರು - 7.64%
- ಹರಿಹರ - 08.09%
- ದಾವಣಗೆರೆ ಉತ್ತರ -07.45%
- ದಾವಣಗೆರೆ ದಕ್ಷಿಣ - 06.72%
- ಮಾಯಕೊಂಡ -06.09%
- ಚನ್ನಗಿರಿ - 06.92%
- ಹೊನ್ನಾಳಿ - 05.83%
- ಜಿಲ್ಲೆಯ ಒಟ್ಟು ಶೇಕಡವಾರು ಮತದಾನ- 06.99%
10:11 May 10
- ದಕ್ಷಿಣ ಕನ್ನಡ - ಬೆಳಗ್ಗೆ 9 ಗಂಟೆ ವರೆಗೆ 12.47 % ಮತದಾನವಾಗಿದೆ
- ಕೋಲಾರ: ಇಲ್ಲಿಯವರೆಗೆ 11.25% ಮತದಾನವಾಗಿದೆ
- ಧಾರವಾಡ ಜಿಲ್ಲೆಯಲ್ಲಿ ಶೇ 8.48 ಮತದಾನ
10:10 May 10
ಧಾರವಾಡ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ನಡೆದ ಮತದಾನದ ಶೇ. ಪ್ರಮಾಣ:
- ಧಾರವಾಡ ಗ್ರಾಮೀಣ - 9.23 %
- ಹು-ಧಾ ಸೆಂಟ್ರಲ್ - 10.07 %
- ಹು-ಧಾ ಪೂರ್ವ - 10 %
- ಹು-ಧಾ ಪಶ್ಚಿಮ - 9.80 %
- ಕಲಘಟಗಿ - 10%
- ಕುಂದಗೋಳ - 6.07%
- ನವಲಗುಂದ - 3.29%. ಜಿಲ್ಲೆಯ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ನಲ್ಲಿ ಹೆಚ್ಚು ಮತದಾನವಾಗಿದ್ದು, ನವಲಗುಂದದಲ್ಲಿ ಕಡಿಮೆ ಮತದಾನವಾಗಿದೆ.
09:51 May 10
- ವಿಜಯಪುರ ಜಿಲ್ಲೆಯಲ್ಲಿ - 8.36% ಮತದಾನ
09:51 May 10
- ಹುಬ್ಬಳ್ಳಿ: ಹಕ್ಕು ಚಲಾಯಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
- ಹುಬ್ಬಳ್ಳಿಯ ಕೇಶ್ವಾಪೂರದ ಎಸ್‌ಬಿಐ ಶಾಲೆಯ ಮತಗಟ್ಟೆ ಸಂಖ್ಯೆ 125 ರಲ್ಲಿ ಮತದಾನ
- ಕುಟುಂಬ ಸಮೇತರಾಗಿ ಮತ ಚಲಾವಣೆ ಮಾಡಿದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕೈ ಅಭ್ಯರ್ಥಿ
09:50 May 10
ರಾಯಚೂರು ಜಿಲ್ಲಾವಾರು ಮತದಾನದ ಮಾಹಿತಿ:
- ರಾಯಚೂರು ಜಿಲ್ಲೆಯಲ್ಲಿ ಬೆಳಗ್ಗೆ 9 ಕ್ಕೆ ಒಟ್ಟು 6.97 %ರಷ್ಟು ಮತದಾನವಾಗಿದೆ.
- ರಾಯಚೂರು ನಗರ - 5.88 %
- ರಾಯಚೂರು ಗ್ರಾಮೀಣ - 8. 97%
- ಮಾನ್ವಿ- 7.25 %
- ದೇವದುರ್ಗ - 6%
- ಲಿಂಗಸೂಗುರು-5%.
- ಸಿಂಧನೂರು-8%
- ಮಸ್ಕಿ-8%
09:41 May 10
ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು, ಈವರೆಗೆ ಒಟ್ಟು 8.26% ಮತದಾನವಾಗಿದೆ.
09:40 May 10
ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ ಗೋಪಾಲಯ್ಯ
ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಮತದಾನ ಪ್ರಾರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಕ್ಷೇತ್ರದ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದರು. ವೃಷಭಾವತಿ ನಗರದ 102ನೇ ವಾರ್ಡ್ನ ಅಮರ ವಾಣಿ ಶಾಲೆಯಲ್ಲಿ ಓಟು ಹಾಕಿದರು.
ಮತದಾನದ ಬಳಿಕ ಮಾತನಾಡಿದ ಗೋಪಾಲಯ್ಯ "ಕ್ಷೇತ್ರದ ಜನ ನನಗೆ ಅತ್ಯಂತ ಹೆಚ್ಚಿನ ಬಹುಮತ ನೀಡುತ್ತಾರೆ ಎಂಬ ಆತ್ಮವಿಶ್ವಾಸ ಇದೆ" ಎಂದು ತಿಳಿಸಿದರು.
09:32 May 10
- ಬೆಂಗಳೂರು: ಮತದಾನಕ್ಕೆ ಆಗಮಿಸಿದ ನಟ ಉಪೇಂದ್ರ
- ಕತ್ರಿಗುಪ್ಪೆಯ BTL ವಿದ್ಯಾವಾಣಿ ಶಾಲೆಯಲ್ಲಿ ಮತಚಲಾಯಿಸಲಿರುವ ಉಪ್ಪಿ
09:27 May 10
- ತುಮಕೂರು:ಅಭಿವೃದ್ಧಿ ಆಗದ ಹಿನ್ನೆಲೆ ಮತದಾನ ಬಹಿಷ್ಕಾರ
- ಮತದಾನ ಮಾಡಲು ನಿರಾಕರಿಸಿದ ಗ್ರಾಮಸ್ಥರು
- ತುರುವೇಕೆರೆ ಕ್ಷೇತ್ರದ ರಾಯಸಂದ್ರದ ಕೊಪ್ಪ ಮತಗಟ್ಟೆ ಸಂಖ್ಯೆ 56 ರಲ್ಲಿ ನಡೆದ ಘಟನೆ
- 500 ಕ್ಕೂ ಹೆಚ್ಚು ಮತಗಳಿರುವ ಕೊಪ್ಪಗ್ರಾಮ. ಅದರಲ್ಲಿ, 300 ಕ್ಕೂ ಹೆಚ್ಚು ಮತದಾರರು ಓಟು ಹಾಕಲು ಹಿಂದೇಟು
- ರಸ್ತೆ, ಸೇರಿದಂತೆ ಇನ್ನಿತರೆ ಕೆಲಸಗಳನ್ನ ಮಾಡಲು ಜನಪ್ರತಿನಿಧಿಗಳು ಹಿಂದೇಟು ಹಾಕಿದ್ದಾರೆಂಬ ಆರೋಪ
- ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೊಶ ಹೊರಹಾಕಿದ ಗ್ರಾಮಸ್ಥರು
09:20 May 10
- ಪತ್ನಿ ಜೊತೆ ಬೆಂಗಳೂರಿನ ಆರ್‌ಆರ್‌ನಗರದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ನಟ ಗಣೇಶ್
09:20 May 10
ಹಕ್ಕು ಚಲಾಯಿಸಿದ ಮದುಮಗಳು
- ಚಿಕ್ಕಮಗಳೂರಿನಲ್ಲಿ ಮತ ಹಾಕಿ ಮಾದರಿಯಾದ ಮದುಮಗಳು
- ಚಿಕ್ಕಮಗಳೂರಿನ ಮತಗಟ್ಟೆ ಸಂಖ್ಯೆ 165 ರಲ್ಲಿ ಮತದಾನ ಮಾಡಿದ ವಧು
09:12 May 10
- ದಾವಣಗೆರೆ: ದಂಪತಿ ಸಮೇತ ಆಗಮಿಸಿ ಓಟು ಹಾಕಿದ ರೇಣುಕಾಚಾರ್ಯ
- ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
- ಹೊನ್ನಾಳಿ ನಗರದ ಹಿರೇಮಠದಲ್ಲಿರುವ ಶ್ರೀ ಚನ್ನಕೇಶವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂ 105 ರಲ್ಲಿ ಮತ ಚಲಾವಣೆ
- ರೇಣುಕಾಚಾರ್ಯಗೆ ಪತ್ನಿ ಸುಮಾ ರೇಣುಕಾಚಾರ್ಯ ಸಾಥ್
09:12 May 10
- ದಾವಣಗೆರೆ: ದಕ್ಷಿಣ ಬಿಜೆಪಿ ಅಭ್ಯರ್ಥಿ ಬಿಜಿ ಅಜಯ್ ಕುಮಾರ್ ಅವರಿಂದ ಮತಚಲಾವಣೆ
- ಕುಟುಂಬ ಸಮೇತರಾಗಿ ಬಂದು ಹಕ್ಕು ಚಲಾಯಿಸಿದ ಅಜಯ್ ಕುಮಾರ್
- ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಬಕ್ಕೇಶ್ವರ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ
09:11 May 10
- ಚಿಕ್ಕೋಡಿ : ಮತ ಚಲಾವಣೆಗೂ ಮೊದಲು ದೇವರ ಮೊರೆ ಹೋದ ಸವದಿ
- ನಾಗನೂರ ಪಿಕೆ ಲಕ್ಷ್ಮಿ ದೇವಸ್ಥನದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ , ನಂತರ ಮತ ಚಲಾವಣೆ
09:11 May 10
ಸಭಾಪತಿ ಬಸವರಾಜ ಹೊರಟ್ಟಿ ಮತದಾನ:
ಲ್ಯಾಮಿಂಗಟನ್ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ ಚಲಾವಣೆ.
ಪುತ್ರ ಹಾಗೂ ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ಬಸವರಾಜ ಹೊರಟ್ಟಿ.
"ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು" - ಮತದಾನದ ನಂತರ ಹುಬ್ಬಳ್ಳಿಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ.
"ಮತದಾರರಿಗೆ ಆಮಿಷ ಒಡ್ಡಲಾಗುತ್ತದೆ ಎಂಬ ಮಾಹಿತಿ ನನ್ನ ಕಿವಿಗೆ ಬಿದ್ದಿದೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ಆಗಬಾರದು, ಒಂದೊಂದು ಮತಕ್ಕೆ ಐದು ಸಾವಿರ ಕೊಟ್ಟಿದ್ದಾರೆಂಬ ಸುದ್ದಿ ಕೇಳಿ ಶಾಕ್ ಆಯ್ತು. ಜನರು ಅಭಿವೃದ್ಧಿ ನೋಡಿ ಮತದಾನ ಮಾಡಬೇಕು, ಇಂತಹ ವ್ಯವಸ್ಥೆ ಬದಲಾಗಬೇಕು" ಎಂದ ಸ್ಪೀಕರ್.
09:01 May 10
ಮತ ಹಾಕಿದ ಕೈ ಅಭ್ಯರ್ಥಿ ಪರಮೇಶ್ವರ್
ತುಮಕೂರು: ಇಲ್ಲಿನ ಸಿದ್ದಾರ್ಥ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 133ರ ಬೂತ್ ನಂ 59ರಲ್ಲಿ ಪತ್ನಿ ಕನ್ನಿಕಾ ಪರಮೇಶ್ವರ್ ಜೊತೆ ಬಂದು ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಮತ ಚಲಾವಣೆ ಮಾಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿ," ಕೊರಟಗೆರೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ಉದ್ದೇಶ ಪೂರ್ವಕವಾಗಿ ನಾನು ಓದಿದ ಊರು, ಶಾಲೆಯಲ್ಲೇ ಮತದಾನ ಮಾಡಿದ್ದೇನೆ. ಇಲ್ಲಿ ನನಗೆ ಭಾವನಾತ್ಮಕ ಸಂಬಂಧ ಇದೆ. ಹಾಗಾಗಿ, ನಾನು ಸ್ಪರ್ಧೆ ಮಾಡುವ ಕೊರಟಗೆರೆ ಕ್ಷೇತ್ರದಲ್ಲಿ ಮತ ವರ್ಗಾವಣೆ ಮಾಡಿಕೊಂಡಿಲ್ಲ. ಸಂತೋಷದಿಂದ ಮತ ಚಲಾವಣೆ ಮಾಡಿದ್ದೇನೆ. ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಷಣ್ಮುಖಪ್ಪ ಗೆಲ್ಲಬೇಕು, ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ" ಎಂದರು.
08:53 May 10
- ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ ಅವರಿಂದ ಮತದಾನ
08:53 May 10
- ಬೀದರ್‌ನ ಭಾಲ್ಕಿ ಕ್ಷೇತ್ರದಲ್ಲಿ ಮತ ಚಲಾಯಿಸಿದ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ
08:51 May 10
- ಶಿವಮೊಗ್ಗದಲ್ಲಿ ಮತದಾನ ಮಾಡಿದ ಸಿಎಂ ಯಡಿಯೂರಪ್ಪ
- ಮತದಾನಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿ
08:42 May 10
ಮತದಾನ ಮಾಡಿದ ಸುಧಾ ಮೂರ್ತಿ, ನಾರಾಯಣಮೂರ್ತಿ
ಬೆಂಗಳೂರಿನಲ್ಲಿ ಮತದಾನ ಮಾಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಪತ್ನಿ ಸುಧಾ ಮೂರ್ತಿ
"ಮೊದಲು ನಾವು ಮತದಾನ ಮಾಡಬೇಕು. ಆಗ ಮಾತ್ರ ಇದು ಒಳ್ಳೆಯದು, ಇದು ಒಳ್ಳೆಯದಲ್ಲ ಎಂದು ಹೇಳುವ ಅಧಿಕಾರವಿರುತ್ತದೆ. ಮತದಾನ ಮಾಡದಿದ್ದರೆ ಟೀಕಿಸುವ ಹಕ್ಕು ನಮಗಿಲ್ಲ" ಎಂದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ
"ದಯವಿಟ್ಟು ನಮ್ಮನ್ನು ನೋಡಿ. ನಾವು ವಯಸ್ಸಾದವರು ಆದರೂ 6 ಗಂಟೆಗೆ ಎದ್ದು ಇಲ್ಲಿಗೆ ಬಂದು ಮತ ಚಲಾಯಿದ್ದೇವೆ. ದಯವಿಟ್ಟು ನಮ್ಮಿಂದ ಕಲಿಯಿರಿ. ಮತದಾನ ಪ್ರಜಾಪ್ರಭುತ್ವದ ಪವಿತ್ರ ಭಾಗ"ವೆಂದು ಯುವ ಮತದಾರರಿಗೆ ಸಂದೇಶ ನೀಡಿದ ಸುಧಾ ಮೂರ್ತಿ.
08:33 May 10
- ಚಿಕ್ಕಮಗಳೂರು: ಓಟು ಹಾಕಿದ ಬಾಳೆಹೊನ್ನೂರು ಮಠದ ರಂಭಾಪುರಿ ಶ್ರೀಗಳು
- ಶ್ರೀಗಳು ಮೊದಲು ಮತದಾನ ಮಾಡಲೆಂದು ಕಾದು ನಿಂತ ಸ್ಥಳೀಯರು
- ಎಲ್ಲರೂ ತಪ್ಪದೇ ಮತ ಹಾಕಿ ಎಂದು ಸಂದೇಶ ನೀಡಿದ ಶ್ರೀಗಳು
- ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿರುವ ರಂಭಾಪುರಿ ಮಠ
08:29 May 10
- ಬಾಗಲಕೋಟೆ: ಜಿಲ್ಲೆಯಾದ್ಯಂತ ಬಿರುಸುಗೊಂಡ ಮತದಾನ
- ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತು ಮತ ಹಾಕುತ್ತಿರುವ ಜನತೆ
- ಹಕ್ಕು ಚಲಾಯಿಸಿದ ನಟಿ ಉಮಾಶ್ರೀ
- ರಬಕವಿಯ ಬೂತ್ ನಂಬರ್ 80 ರಲ್ಲಿ ಮತದಾನ ಮಾಡಿದ ಉಮಾಶ್ರೀ
- ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಆರ್ ಪಾಟೀಲ ಬೀಳಗಿ ಅವರಿಂದ ಪಟ್ಟಣದಲ್ಲಿ ಮತದಾನ
- ಬಸವೇಶ್ವರ ನಗರದ ಉರ್ದು ಶಾಲೆಯ ಬೂತ್ ನಂಬರ್ 83 ರಲ್ಲಿ ಮತದಾನ
08:29 May 10
- ಚಾಮರಾಜನಗರ: ಕೊಳ್ಳೇಗಾಲದ ಬಿಜೆಪಿ ಅಭ್ಯರ್ಥಿ ಶಾಸಕ ಎನ್ ಮಹೇಶ್ ಅವರಿಂದ ಮತ ಚಲಾವಣೆ
- ಕೊಳ್ಳೇಗಾಲ ಪಟ್ಟಣದ ಐಎಸ್ಸಿ ಶಾಲೆಯ ಮತಗಟ್ಟೆ ಸಂಖ್ಯೆ 121 ರಲ್ಲಿ ಮತದಾನ
- ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಓಟು ಹಾಕಿದ ಅಭ್ಯರ್ಥಿ
- ಮಹೇಶ್ ಮತದಾನಕ್ಕೆ ಸಾಥ್ ಕೊಟ್ಟ ಪುತ್ರ ಅರ್ಜುನ್
08:28 May 10
- ಕೋಲಾರ: ಕಾಂಗ್ರೆಸ್ ಶಾಸಕ ಕೆ ಆರ್ ರಮೇಶ್ ಕುಮಾರ್ ಅವರಿಂದ ಮತದಾನ
- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ
- ಮತಗಟ್ಟೆ ಸಂಖ್ಯೆ 36 ರಲ್ಲಿ ಹಕ್ಕು ಚಲಾಯಿಸಿದ ಕೈ ಅಭ್ಯರ್ಥಿ
- ಮಾಜಿ ಸಚಿವ ಹಾಗೂ ಮಾಜಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್
08:21 May 10
- ಜಯನಗರದ ಬಿಇಎಸ್ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ನಿರ್ಮಲಾ ಸೀತಾರಾಮನ್
- ತಮ್ಮ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಜೊತೆ ಮತದಾನಕ್ಕೆ ಆಗಮಿಸಿದ ಕೇಂದ್ರ ಸಚಿವೆ
08:18 May 10
ಮತ ಹಾಕಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗ:ತೀರ್ಥಹಳ್ಳಿ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಹಾಗೂ ರಾಜ್ಯ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷದಿಂದ ಹತ್ತನೇ ಬಾರಿಗೆ ಸ್ಪರ್ಧಿಸುತ್ತಿರುವ ಜ್ಞಾನೇಂದ್ರ ಅವರು ತಮ್ಮ ಹುಟ್ಟುರಾದ ಗುಡ್ಡೆಕೊಪ್ಪದಲ್ಲಿ ಮತದಾನ ಮಾಡಿದರು.
08:11 May 10
ಮಾದರಿ ಕುಟುಂಬ:
- ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 50 ಮಂದಿಯಿಂದ ಏಕಕಾಲಕ್ಕೆ ಮತದಾನ
- ಚಿಕ್ಕಬಳ್ಳಾಪುರ ನಗರದ 161 ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಕುಟುಂಬಸ್ಥರು
- ಜ್ಯೂನಿಯರ್ ಕಾಲೇಜು ಆವರಣದಲ್ಲಿರುವ ಮತಗಟ್ಟೆ
- ಒಂದೇ ಬಾರಿ ಮತದಾನ ಮಾಡಿ ಮಾದರಿಯಾದ ಕುಟುಂಬ
- ಕುಟುಂಬ ಸಮೇತ ಬಂದು ಮತ ಚಾಲಾಯಿಸಿದ ಬಾದಾಮ್ ಕುಟುಂಬಸ್ಥರು
08:10 May 10
- ಹುಬ್ಬಳ್ಳಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
- ಅಶೋಕ ನಗರದಲ್ಲಿನ ಆಂಜನೇಯ ದೇವಸ್ಥಾನಕ್ಕೆ ಭೇಟಿ
- ಮತದಾನಕ್ಕೆ ತೆರಳುವ ಮೊದಲು ಆಂಜನೇಯನ ದರ್ಶನ ಪಡೆದ ಬೊಮ್ಮಾಯಿ
08:05 May 10
- ಚಾಮರಾಜನಗರದ ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಕೈಕೊಟ್ಟ ಇವಿಎಂ
- ಉಪ್ಪಾರ ಬೀದಿಯ ಮತಗಟ್ಟೆ ಸಂಖ್ಯೆ 69 ರಲ್ಲಿನ ಇವಿಎಂನಲ್ಲಿ ತಾಂತ್ರಿಕ ದೋಷ
- ಮತದಾನ ಅರ್ಧ ಗಂಟೆ ವಿಳಂಬ, ಬಳಿಕ ಸರಿಪಡಿಸುವ ಕಾರ್ಯ ಪೂರ್ಣ
- ಚಾಮರಾಜನಗರದ ಉಳಿದೆಡೆ ಬಿರುಸಿನಿಂದ ಸಾಗುತ್ತಿರುವ ಮತದಾನ
08:05 May 10
ನಟಿ ಅಮೂಲ್ಯ ಮತದಾನ
ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಮತ್ತು ಮನೋಜ್ ಕುಮಾರ್ ಮೀನಾ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರು ಸರ್ಕಾರಿ ಶಾಲೆ ಮತ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ರಾಜರಾಜೇಶ್ವರಿ ನಗರದಲ್ಲಿ ನಟಿ ಅಮೂಲ್ಯ ಮತದಾನ
ಪತಿ ಜಗದೀಶ್ ಹಾಗೂ ಮಾವ ರಾಮಚಂದ್ರಪ್ಪನವರ ಜೊತೆ ಬಂದು ಮತದಾನ ಮಾಡಿದ ಅಮೂಲ್ಯ
08:04 May 10
- ವೋಟರ್ ಐಡಿ ಇದ್ದರೂ ಮತ ಹಾಕದೆ ವಾಪಸ್ ತೆರಳಿದ ದಂಪತಿ
- ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೆಂದು ವಾಪಸ್ ಕಳುಹಿಸಿದ ಸಿಬ್ಬಂದಿ
- ಅಕ್ರೋಶಗೊಂಡು ಹೊರನಡೆದ ದಂಪತಿ
- ಅಯ್ಯಪ್ಪನಗರದ ನಾರಾಯಣ ಸ್ಕೂಲ್ ಮತಗಟ್ಟೆ ಮುಂದೆ ನಡೆದ ಘಟನೆ
07:51 May 10
- ಇವಿಎಂ ಸಮಸ್ಯೆಯಿಂದ ಬೇಸತ್ತ ಮತದಾರರು
- ಮಹಾದೇವಪುರ ಕ್ಷೇತ್ರದ ಅಯ್ಯಪ್ಪನಗರದ ನಾರಾಯಣ್ ಸ್ಕೂಲ್ ಮತಗಟ್ಟೆಯಲ್ಲಿ ನಡೆದ ಘಟನೆ
- ಇವಿಎಂ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನೂರಾರು ಮತದಾರರು
07:26 May 10
ಹುಚ್ಚರಾಯ ಸ್ವಾಮಿ ದೇವಸ್ಥಾನ ಬಿಎಸ್ವೈ ಭೇಟಿ
ಕರ್ನಾಟಕದ ಮಾಜಿ ಸಿಎಂ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರು ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪುತ್ರ ಬಿ ವೈ ವಿಜಯೇಂದ್ರ ಗೆಲುವಿಗಾಗಿ ಪ್ರಾರ್ಥಿಸಿದರು.
07:23 May 10
- ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯಿಂದ ಮತ ಚಲಾವಣೆ
- ಬ್ಯಾಟರಾಯನಪುರ ವಿಧಾಸಭಾ ಕ್ಷೇತ್ರದ ಥಣಿಸಂದ್ರ ಮತಗಟ್ಟೆ 377 ರಲ್ಲಿ ಮತ ಚಲಾಯಿಸಿದ ಪ್ರತಾಪ್ ರೆಡ್ಡಿ
- ಮತಗಟ್ಟೆಗೆ ಮೊದಲಿಗರಾಗಿ ಬಂದು ಹಕ್ಕು ಚಲಾಯಿಸಿದ ಬೆಂಗಳೂರು ಪೊಲೀಸ್ ಕಮಿಷನರ್
07:22 May 10
ತಾಂತ್ರಿಕ ಕಾರಣದಿಂದ ಮತದಾನ ವಿಳಂಬ
- ಜಯನಗರ ವಿಧಾನಸಭಾ ಕ್ಷೇತ್ರದ ಫ್ರಾಂಕ್ ಸ್ಕೂಲ್ನಲ್ಲಿ ಮಾಕ್ ಪೋಲಿಂಗ್ ಮುಕ್ತಾಯ
- ಮುಂಜಾನೆ 5.48 ಕ್ಕೆ ಆರಂಭವಾಗಿದ್ದ ಅಣುಕು ಮತದಾನ
- ಒಟ್ಟು 15 ಅಭ್ಯರ್ಥಿಗಳಿಗೆ, 1 ನೋಟಾ ಬಟನ್ಗೆ ನೆಡೆದ ಮಾಕ್ ಪೋಲ್
- ಪ್ರಿಸೈಡಿಂಗ್ ಆಫೀಸರ್, ಪೋಲಿಂಗ್ ಆಫೀಸರ್, ಪಕ್ಷದ ಏಜೆಂಟ್ಗಳ ಸಮ್ಮುಖದಲ್ಲಿ ನಡೆದ ಪರೀಕ್ಷೆ
- ತಾಂತ್ರಿಕ ಕಾರಣದಿಂದ ಮತಕಟ್ಟೆ 204 ರಲ್ಲಿ ಆರಂಭವಾಗದ ಮತದಾನ
- ಉಳಿದ ಬೂತ್ಗಳಲ್ಲಿ ಮತದಾನ ಆರಂಭ
- ತಾಂತ್ರಿಕ ಸಮಸ್ಯೆ ಬಗೆಹರಿಸಲು ಮುಂದಾದ ಸೆಕ್ಟರ್, ಅಸಿಸ್ಟೆಂಟ್ ಸೆಕ್ಟರ್ ಅಧಿಕಾರಿಗಳು
07:14 May 10
ಮತದಾನ ಮಾಡಿದ ಸಿದ್ದಲಿಂಗ ಶ್ರೀಗಳು :
- ಮತದಾನದ ಹಕ್ಕು ಚಲಾಯಿಸಿದ ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀಗಳು
- ಸಿದ್ಧಗಂಗಾ ಮಠದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ
07:12 May 10
ಮತದಾನ ಮಾಡುವಂತೆ ಮೋದಿ ಮನವಿ:
ನವದೆಹಲಿ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವಂತೆ ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
07:11 May 10
- ಬೆಂಗಳೂರಿನ ಶಾಂತಿ ನಗರದ ಸೇಂಟ್ ಜೋಸೆಫ್ ಶಾಲೆಯ ಮತಗಟ್ಟೆಗೆ ಆಗಮಿಸಿದ ನಟ ಪ್ರಕಾಶ್ ರಾಜ್
- ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾನ ಮಾಡಲು ಆಗಮನ
07:09 May 10
ಹಾವೇರಿಯಲ್ಲಿ ಮತಕೇಂದ್ರಕ್ಕೆ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ
07:08 May 10
- ಕೆ ಆರ್ ಪುರಂನಲ್ಲಿ ಮತದಾನ ಆರಂಭ
- ಮತದಾನಕ್ಕೆ ಆಗಮಿಸಿದ ಭೈರತಿ ಬಸವರಾಜ್
- ತಮ್ಮ ಕುಟುಂಬ ಹಾಗೂ ಬೆಂಬಗಲಿರ ಜೊತೆ ಮತದಾನಕ್ಕೆ ಆಗಮನ
07:08 May 10
ಸಿಂಗಾರಗೊಂಡ ಮತಗಟ್ಟೆ:
- ಕೋಲಾರದಲ್ಲಿ ಸಿಂಗಾರಗೊಂಡ ಮತಗಟ್ಟೆ
- ಮತದಾರರನ್ನು ಸಳೆಯಲು ಸಾಂಸ್ಕೃತಿಕ ಪರಂಪರೆಯ ಮತಗಟ್ಟೆ ನಿರ್ಮಾಣ
- ಕಠಾರಿಪಾಳ್ಯದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಮನಸೆಳೆದ ಮತಗಟ್ಟೆ
- ಮತಗಟ್ಟೆ ಬಳಿ ಕೋಲಾರ ಜಿಲ್ಲೆಯ ಐತಿಹಾಸಿಕ ಪರಂಪರೆ ಪರಿಚಯಿಸುವಂತಹ ಸ್ಥಳಗಳ ಅಳವಡಿಕೆ
- ಮದುವಣಗಿತ್ತಿಯಂತೆ ಸಿಂಗಾರಗೊಂಡ ಮತಗಟ್ಟೆ ಸಂಖ್ಯೆ168
06:58 May 10
ಮತದಾರರಿಗೆ ಅಮಿತ್ ಶಾ ಮನವಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ ಪ್ರಾರಂಭವಾಗಿದೆ. ರಾಜ್ಯದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿ ತಮ್ಮ ಮತ ಚಲಾಯಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಜೊತೆಗೆ, "ನಿಮ್ಮ ಒಂದು ಮತವು ರಾಜ್ಯವನ್ನು ಎತ್ತರಕ್ಕೆ ಕೊಂಡೊಯ್ಯುವ ಜನಪರ ಮತ್ತು ಪ್ರಗತಿ ಪರ ಸರ್ಕಾರವನ್ನು ಖಚಿತಪಡಿಸುತ್ತದೆ" ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
06:52 May 10
- ಶಿವಮೊಗ್ಗದಲ್ಲಿ ಮತಯಂತ್ರಗಳ ಪರೀಕ್ಷೆ ನಡೆಸಿದ ಅಧಿಕಾರಿಗಳು
- ಎಲ್ಲಾ ಅಭ್ಯರ್ಥಿಗಳ ಮುಂದೆ ಬಟನ್ ಒತ್ತಿ ಪರೀಕ್ಷೆ
- ಮತದಾನ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್
06:45 May 10
ಹಾವೇರಿಯಲ್ಲಿ ಗಮನಸೆಳೆದ ಸಖಿ ಬೂತ್ : ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ 'ಸಖಿ ಬೂತ್' ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಹಾವೇರಿಯಲ್ಲಿ 'ಪಿಂಕ್ ಬೂತ್' ತೆರೆಯಲಾಗಿದೆ.
"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಪ್ರತಿ ಮಹಿಳಾ ಮತದಾರರೂ ಮತದಾನ ಮಾಡಿದರೆ ಪ್ರಜಾಪ್ರಭುತ್ವ ಗೆದ್ದಂತೆ" ಎಂಬ ಘೋಷಣೆಗಳೊಂದಿಗೆ ಮಹಿಳೆಯರ ಗಮನ ಸೆಳೆಯಲಾಗುತ್ತಿದೆ.
06:31 May 10
ಮತದಾನಕ್ಕೆ ಕ್ಷಣಗಣನೆ! ಅಣಕು ಮತದಾನ ಪ್ರಕ್ರಿಯೆ ಆರಂಭ
- ಬೆಂಗಳೂರಿನ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಣಕು ಮತದಾನ ಪ್ರಕ್ರಿಯೆ ಆರಂಭ.
- ಇಲ್ಲಿನ ಕಾರ್ಮೆಲ್ ಶಾಲೆಯಲ್ಲಿ ವಿವಿ ಪ್ಯಾಟ್ ಯಂತ್ರ ಹಾಗೂ ಇವಿಎಂ ಪರಿಶೀಲನೆ ಕಾರ್ಯ.
06:10 May 10
ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ
ಬೆಂಗಳೂರು: ಕರ್ನಾಟಕ ವಿಧಾನಸಭೆಯ 224 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತ ಕ್ಷಣ ಕ್ಷಣದ ಲೈವ್ ಮಾಹಿತಿ ಇಲ್ಲಿದೆ.
2,615 ಅಭ್ಯರ್ಥಿಗಳಿಗೆ ಅಗ್ನಿ ಪರೀಕ್ಷೆ:ಚುನಾವಣೆಯಲ್ಲಿ ಒಟ್ಟು 2,615 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. 2,430 ಪುರುಷರು, 184 ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಒಬ್ಬರು ಇತರೆ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಎಲ್ಲ 224 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ 223 ಹುರಿಯಾಳುಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ಪಕ್ಷದಿಂದ ಒಟ್ಟು 209 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಆಮ್ ಆದ್ಮಿ ಪಾರ್ಟಿಯಿಂದ 209 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಎಸ್ಪಿಯಿಂದ 133 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯಿಂದ 195 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದಿಂದ 110 ಅಭ್ಯರ್ಥಿಗಳು ಹಾಗೂ 254 ಇತರೆ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿದ್ದಾರೆ. 918 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಜ್ಯದ ಮತದಾರರ ಮಾಹಿತಿ: ಒಟ್ಟು 5,30,85,566 ಮತದಾರರಿದ್ದಾರೆ. 2,66,82,156 ಪುರುಷ ಮತದಾರರು ಇದ್ದರೆ, 2,63,98,483 ಮಹಿಳಾ ಮತದಾರರು ಇದ್ದಾರೆ. 4,027 ಇತರೆ ಮತದಾರರು ಇದ್ದಾರೆ. ಈ ಪೈಕಿ ಒಟ್ಟು 11,71,558 ಯುವ ಮತದಾರರು ಇದ್ದಾರೆ. ವಿಶೇಷಚೇತನ ಮತದಾರರ ಸಂಖ್ಯೆ 5,71,281 ಇದೆ. 18,811 ವಿಶೇಷ ಚೇತನರು ಮನೆಯಿಂದ ಮತ ಚಲಾಯಿಸಿದ್ದಾರೆ. ಒಟ್ಟು 12,15,920ರ 80 ವರ್ಷ ಮೇಲ್ಪಟ್ಟ ಮತದಾರರಿದ್ದು, 76,120 ಹಿರಿಯರು ಮನೆಯಿಂದ ಮತಚಲಾವಣೆ ಮಾಡಿದ್ದಾರೆ.
ಒಟ್ಟು ಮತಗಟ್ಟೆಗಳ ಮಾಹಿತಿ: ರಾಜ್ಯಾದ್ಯಂತ ಒಟ್ಟು 58,545 ಮತಗಟ್ಟೆಗಳಿವೆ. 2,258 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 996 ಮಹಿಳೆಯರಿಗಾಗಿ ಪ್ರತ್ಯೇಕ ಸಖಿ ಮತಗಟ್ಟೆಗಳಾಗಿವೆ. ವಿಶೇಷ ಚೇತನರಿಗೆ 239, ಯುವ ಮತದಾರರಿಗೆ 286, ಸ್ಥಳೀಯ ವಿಷಯಾಧಾರಿತ ಒಟ್ಟು 623 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 114 ಬುಡಗಟ್ಟು ಮತದಾರರಿಗೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ವಿಶೇಷ ಚೇತನ ಮತದಾರರಿಗೆ 45,823 ಗಾಲಿಕುರ್ಚಿ, 46,872 ಭೂತಗನ್ನಡಿ, 1,068 ಸಂಜ್ಞಾ ಭಾಷಾಂತಕಾರರು, ಒಟ್ಟು 54,950 ಸಹಾಯಕರನ್ನು ನಿಯೋಜಿಸಲಾಗಿದೆ.
ಎಡಗೈ ತೋರು ಬೆರಳಿಗೆ ಶಾಯಿ: ಈ ಬಾರಿ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗುತ್ತದೆ. ಅಳಿಸಲಾಗದ ಈ ಶಾಯಿಯನ್ನು ಹಚ್ಚಲಾಗುತ್ತದೆ.
ಇವಿಎಂ-ವಿವಿಪ್ಯಾಟ್ ವಿವರ :ಒಟ್ಟು 62,988 ಬ್ಯಾಲೆಟ್ ಯುನಿಟ್ ಹಾಗೂ 58,545 ಕಂಟ್ರೋಲ್ ಯುನಿಟ್ ಗಳನ್ನು ಮತಯಂತ್ರಕ್ಕೆ ಹಂಚಿಕೆ ಮಾಡಲಾಗಿದೆ. 58,545 ವಿವಿ ಪ್ಯಾಟ್‌ಗಳನ್ನು ಹಂಚಲಾಗಿದೆ.