ಕರ್ನಾಟಕ

karnataka

ETV Bharat / state

1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಕರ್ನಾಟಕ: ಕ್ರಿಯಾ ಯೋಜನೆ ಬಿಡುಗಡೆ - ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ರಾಜ್ಯದ ಆರ್ಥಿಕತೆಯ ಗುರಿ ಸಾಧನೆಯ ಕ್ರಿಯಾ ಯೋಜನೆ ಹಾಗೂ ಉದ್ಯೋಗ ವರದಿಯನ್ನು ಸಿಎಂ ಬೊಮ್ಮಾಯಿ ಅವರು ಮಂಗಳವಾರ ಬಿಡುಗಡೆ ಮಾಡಿದರು.

Chief Minister Basavaraj Bommai
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

By

Published : Mar 8, 2023, 6:49 AM IST

Updated : Mar 8, 2023, 9:10 AM IST

ಬೆಂಗಳೂರು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯವನ್ನು ಒಂದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವಿವಿಧ ವರದಿಗಳು ಹಾಗೂ ಪ್ರಕಟಣೆಗಳು, ಒಂದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಗುರಿ ಸಾಧನೆಯ ಕ್ರಿಯಾ ಯೋಜನೆ ಹಾಗೂ ರಾಜ್ಯದ ಉದ್ಯೋಗ ವರದಿಯನ್ನು ಅವರು ಮಂಗಳವಾರ ರಿಲೀಸ್ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, "ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಅಭಿವೃದ್ಧಿಪಡಿಸಲು ರೂಪಿಸಿದ ಕ್ರಿಯಾಯೋಜನೆಯು ಈ ಗುರಿ ಸಾಧನೆಯತ್ತ ಸರಿಯಾದ ದಿಸೆಯಲ್ಲಿ ಸಾಗಲು ನೆರವಾಗಲಿದೆ‌. ಉದ್ಯೋಗ ಸೃಜನೆ ಹಾಗೂ ಕೌಶಲ್ಯಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಉದ್ಯೋಗ ನೀತಿ ಜಾರಿಗೊಳಿಸಿದೆ."

"ದುಡಿಯುವ ವರ್ಗ ಸಮಾಜದ ಪಿರಮಿಡ್​ನ ತಳಹದಿಯಾಗಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳೆಯರು, ಯುವಕರು ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸರ್ಕಾರ ಹೆಚ್ಚಿನ ಬೆಂಬಲ ನೀಡುತ್ತಿದೆ. ಇದಲ್ಲದೇ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೂ ಹೆಚ್ಚು ಆದ್ಯತೆ ನೀಡಿದೆ" ಎಂದು ತಿಳಿಸಿದರು.

ಟಿ.ವಿ.ಮೋಹನ್‌ ದಾಸ್‌ ಪೈ ಮಾತನಾಡಿ, "ರಾಜ್ಯದಲ್ಲಿ ಉದ್ಯೋಗ ಸೃಜನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜ್ಯದ ಅಭಿವೃದ್ಧಿ ಮಾದರಿಯು ದೇಶದಲ್ಲೇ ಅತ್ಯುತ್ತಮವಾಗಿದೆ" ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಯುವ ಜನೋತ್ಸವ 2023ರಲ್ಲಿ ಪ್ರಪ್ರಥಮ ಬಾರಿಗೆ ಯುವ ಸಮ್ಮೇಳನದ ಚಟುವಟಿಕೆಗಳನ್ನು ಒಳಗೊಂಡ ಕಾಫಿ ಟೇಬಲ್‌ ಪುಸ್ತಕ ಬಿಡುಗಡೆಗೊಳಿಸಲಾಯಿತು.

ನವಭಾರತಕ್ಕೆ ನವ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯಲ್ಲಿ(ಎಸ್​ಐಟಿಕೆ) 8 ತಜ್ಞರನ್ನು ಆಯ್ಕೆ ಮಾಡಲು ಪೋರ್ಟಲ್‌ ಮುಖಾಂತರ ಅರ್ಜಿ ಆಹ್ವಾನಿಸಲು, ಪೋರ್ಟಲ್‌ನ ಉದ್ಘಾಟನೆ ಹಾಗೂ ಎಸ್​ಐಟಿಕೆ ಲಾಂಛನದ ಲೋಕಾರ್ಪಣೆ ನಡೆಯಿತು. ಕರ್ನಾಟಕದ 26 ಅತ್ಯುತ್ತಮ ಆಡಳಿತ ಅಭ್ಯಾಸಗಳಿರುವ ಕೈಪಿಡಿ, ಕರ್ನಾಟಕ ಅಂಕಿಅಂಶಗಳ ನೋಟ 2021-22, ಸಾಂಖ್ಯಿಕ ಮತ್ತು ಆರ್ಥಿಕ ನಿರ್ದೇಶನಾಲಯದ ಸಹಯೋಗದೊಂದಿಗೆ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಎಫ್​ಐಸಿಸಿಐ) ಮೂಲಕ ತಯಾರಿಸಲಾದ ಕರ್ನಾಟಕ ಉದ್ಯೋಗಗಳ ವರದಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ನಿಶಾ ಹೊಳ್ಳ, ಅಜಿತ್‌ ಐಸಾಕ್ ಹಾಗೂ ಇತರರು ಇದ್ದರು.

ಇದನ್ನೂ ಓದಿ:ನಮ್ಮ ಪಕ್ಷದಲ್ಲಿ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ಉಚ್ಛಾಟನೆ ಮಾಡುವ ವ್ಯವಸ್ಥೆ ಇಲ್ಲ: ಸಿ.ಟಿ.ರವಿ

Last Updated : Mar 8, 2023, 9:10 AM IST

ABOUT THE AUTHOR

...view details