ಬೆಂಗಳೂರು: ಗಡಿಭಾಗ ಬೆಳಗಾವಿಯಲ್ಲಿ ಮರಾಠಿ ಪುಂಡರ ಉದ್ಧಟತನ ಮೇರೆ ಮೀರಿದೆ. ಕನ್ನಡದ ಶಾಲುಗಳು, ಬಾವುಟಗಳನ್ನು ಹಿಡಿದು ಬಂದವರನ್ನು ಹಲ್ಲೆ ನಡೆಸುವುದಾಗಿ ಸವಾಲು ಹಾಕಿದ್ದಾರೆ.
ಹೀಗಾಗಿ, ಎಂಇಎಸ್ ಕಾರ್ಯಕರ್ತರ ಸವಾಲು ಸ್ವೀಕರಿಸಿದ ಕರ್ನಾಟಕ ರಕ್ಷಣಾ ವೇದಿಕೆ, ನಾಳೆ ಬೆಳಗ್ಗೆ ಮೇಕ್ರಿ ವೃತ್ತದಿಂದ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಗಡಿ ಉಲ್ಲಂಘನೆ ಮಾಡಲಾಗುವುದು ಎಂದು ಕರೆ ನೀಡಿದೆ.
ಈ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಇದು ರಾಜ್ಯದಲ್ಲಿ ಕನ್ನಡ ಹೋರಾಟಗಾರರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಎಂಇಎಸ್ ಪುಂಡರು ಕನ್ನಡದ ಶಾಲು ಹಾಕಿದ್ರೆ, ಬಾವುಟ ಹಾಕಿದ್ರೆ ನಮ್ಮನ್ನು ಒದಿತೀವಿ ಎಂದು ಹೇಳುವ ಮಟ್ಟಕ್ಕೆ ಬಂದಿದ್ದಾರೆ.