36ನೇ ರಾಷ್ಟ್ರೀಯ ನೆಟ್ಬಾಲ್ ಚಾಂಪಿಯನ್ಶಿಪ್ : ಪ್ರೀಕ್ವಾರ್ಟರ್ ಫೈನಲ್ಗೆ ಕರ್ನಾಟಕ - ಪ್ರೀ ಕ್ವಾಟರ್ ಫೈನಲ್
ಅಸ್ಸೋಂ ತಂಡ ಗೈರು ಆಗಿದ್ದರಿಂದ ಕರ್ನಾಟಕ ತಂಡ ನೇರವಾಗಿ ಪ್ರೀಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ.

ನೆಟ್ಬಾಲ್ ಚಾಂಪಿಯನ್ಶಿಪ್
ಬೆಂಗಳೂರು : ಇಲ್ಲಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ನೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಕರ್ನಾಟಕ ತಂಡ ಬೆಂಗಳೂರಿನಲ್ಲಿ ಆಯೋಜಿಸಿರುವ ಈ ಪಂದ್ಯಾವಳಿಗೆ ದೇಶದ ಸುಮಾರು 29 ರಾಜ್ಯಗಳ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಿವೆ. ಕರ್ನಾಟಕ ತಂಡ ಈಗಾಗಲೇ ಬಿಹಾರ್ ರಾಜ್ಯ ತಂಡದ ವಿರುದ್ಧ ಜಯ ಗಳಿಸಿದ್ದು, ಮುಂದಿನ ಪಂದ್ಯಾವಳಿಯನ್ನು ಅಸ್ಸೋಂ ತಂಡದೊಂದಿಗೆ ರಾಜ್ಯ ತಂಡ ಆಡಬೇಕಿತ್ತು. ಆದರೆ, ಅಸ್ಸೋಂ ತಂಡ ಗೈರು ಆಗಿದ್ದರಿಂದ ಕರ್ನಾಟಕ ತಂಡ ನೇರವಾಗಿ ಪ್ರೀಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.
ನೆಟ್ಬಾಲ್ ಚಾಂಪಿಯನ್ಶಿಪ್
ಮಹಿಳಾ ತಂಡವು ಜಾರ್ಖಂಡ್ ತಂಡದ ವಿರುದ್ಧ ಜಯ ಗಳಿಸಿದ್ದು ಮುಂದಿನ ಪಂದ್ಯಾವಳಿಗಳನ್ನು ಇತರ ತಂಡದೊಂದಿಗೆ ಆಡಲಿದೆ. ಮೊದಲಬಾರಿಗೆ ಬೆಂಗಳೂರಿನಲ್ಲಿ ಪಂದ್ಯಾವಳಿ ಆಯೋಜಿಸಿದ್ದು ನಮಗೆ ಮೊದಲ ಸ್ಥಾನ ಪಡೆಯಲು ಮತ್ತು ಮತ್ತಷ್ಟು ಸ್ಪೂರ್ತಿ ಬಂದಿದೆ ಎಂದು ಮಹಿಳಾ ತಂಡದ ನಾಯಕಿ ನಂದಿನಿ ಅಭಿಪ್ರಾಯಪಟ್ಟರು. ಪಂದ್ಯಾವಳಿಯ ಫೈನಲ್ ಮಾರ್ಚ್ 26ರಂದು ನಡೆಯಲಿದೆ. ಪುರುಷರ ಹಾಗೂ ಮಹಿಳೆಯರ ತಂಡ ಈ ಬಾರಿ ಪ್ರಥಮ ಸ್ಥಾನ ಪಡೆದು ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ.