ಬೆಂಗಳೂರು :ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಮಂದಿ ಐಪಿಎಸ್ ಅಧಿಕಾರಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಧರ್ಮೇಂದ್ರ ಕುಮಾರ್ ಮೀನಾ ಸೇರಿದಂತೆ 9 ಮಂದಿ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ.
9 IPS ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರದ ಆದೇಶ - 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ
ಧರ್ಮೇಂದ್ರ ಕುಮಾರ್ ಮೀನಾ ಸೇರಿದಂತೆ 9 ಮಂದಿ ಐಪಿಎಸ್ ಅಧಿಕಾರಿಗಳನ್ನ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪಾಟೀಲ್ ವಿನಾಯಕ ವಸಂತ ರಾವ್, ಬೆಂಗಳೂರು ಉತ್ತರ ವಿಭಾಗಕ್ಕೆ ಧರ್ಮೇಂದ್ರ ಕುಮಾರ್ ಮೀನಾ ಎಫ್ಎಸ್ಎಲ್ ನ ನಿರ್ದೇಶಕರಾಗಿ, ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿಯಾಗಿ ಎಸ್.ಸವಿತಾ, ಆಂಟಿ ನಕ್ಸಲ್ ಫೋರ್ಸ್ ನ ಎಸ್ಪಿಯಾಗಿ ನಿಖಮ್ ಪ್ರಕಾಶ್ ಅಮ್ರಿತ್, ಪೊಲೀಸ್ ತರಬೇತಿ ಶಾಲೆಯ ಪ್ರಿನ್ಸಿಪಾಲ್ ಆಗಿ ಇಲಾಖೆಯ ಕರುಣಾಗರನ್, ಎಐಜಿಪಿ ಹೆಡ್ ಕ್ವಾಟರ್ಸ್ ಆಗಿ ಎಂ ಅಶ್ವಿನಿ, ಮಂಡ್ಯ ಎಸ್ಪಿಯಾಗಿ ಡಾ. ಸುಮನ್ ಡಿ ಪೆನ್ನೆಕರ್, ರಾಯಚೂರು ಎಸ್ಪಿಯಾಗಿ ನಿಖಿಲ್ ಬಿ ಹಾಗೂ ಕಲಬುರಗಿ ಬಿ ಸಬ್ ಡಿವಿಷನ್ನ ಎಸ್ಪಿಯಾಗಿ ಎಂ ಎನ್ ದೀಪನ್ ಅವರನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.