ಬೆಂಗಳೂರು:ರಾಜ್ಯದಲ್ಲಿಂದು 1,11,538 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 539 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,75,067 ಏರಿಕೆಯಾಗಿದೆ.
ರಾಜ್ಯದಲ್ಲಿಂದು 539 ಮಂದಿಗೆ ಕೋವಿಡ್; 17 ಸೋಂಕಿತರು ಸಾವು - ಕರ್ನಾಟಕ ಕೋವಿಡ್ ಅಪ್ಡೆಟ್
ಇಂದು 17 ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 37,780 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 12,565 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.48 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ 3.15 ರಷ್ಟಿದೆ.
ಕೋವಿಡ್ ಟೆಸ್ಟ್
ಇತ್ತ 591 ಮಂದಿ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 29,24,693 ಕ್ಕೆ ಏರಿದೆ. 17 ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 37,780 ತಲುಪಿದೆ. ಸದ್ಯ ಸಕ್ರಿಯ ಪ್ರಕರಣಗಳು 12,565 ರಷ್ಟಿದೆ. ಸೋಂಕಿತರ ಪ್ರಮಾಣ ಶೇ.0.48ರಷ್ಟಿದ್ದರೆ, ಸಾವಿನ ಪ್ರಮಾಣ ಶೇ 3.15ರಷ್ಟಿದೆ.
ವಿಮಾನ ನಿಲ್ದಾಣದಿಂದ 834 ಪ್ರಯಾಣಿಕರು ಆಗಮಿಸಿದ್ದು, ಯುಕೆಯಿಂದ 122 ಪ್ರಯಾಣಿಕರು ಆಗಮಿಸಿ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.