ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವೈರಸ್ ನಿಧಾನವಾಗಿ ಇಳಿಮುಖವಾಗುತ್ತಿದೆ. ಇಂದು ಹೊಸದಾಗಿ 1,501 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,97,664ಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿಂದು 1,501 ಮಂದಿಗೆ ಸೋಂಕು: 32 ಸೋಂಕಿತರು ಸಾವು - ಕರ್ನಾಟಕ ಕೋವಿಡ್ ಅಪ್ಡೆಟ್
ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಮತ್ತಷ್ಚು ತಗ್ಗಿವೆ. ಇವತ್ತು ಪತ್ತೆಯಾದ ಸೋಂಕು ಪ್ರಕರಣಗಳ ಮಾಹಿತಿ ಇಲ್ಲಿದೆ
ಕರ್ನಾಟಕ ಕೋವಿಡ್ ಬುಲೆಟಿನ್
ಇಂದು 2,039 ಸೋಂಕಿತರು ಗುಣಮುಖರಾಗಿದ್ದಾರೆ. ಈ ತನಕ 28,38,717 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 22,487 ರಷ್ಟಿವೆ. ಇಂದು 32 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 36,437ಕ್ಕೆ ಏರಿದೆ. ಸಾವಿನ ಶೇಕಡಾವಾರು ಪ್ರಮಾಣ 2.13%ರಷ್ಟಿದೆ.
ಯುಕೆಯಿಂದ ಒಬ್ಬ ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇ 1.46ರಷ್ಟು ದಾಖಲಾಗಿದೆ.