ಕರ್ನಾಟಕ

karnataka

ETV Bharat / state

ಕಣ್ವ ಗ್ರೂಪ್ ಗ್ರಾಹಕರಿಗೆ ವಂಚನೆ ಆರೋಪ: ಉನ್ನತ ಮಟ್ಟದ ತನಿಖೆಗೆ ಪೊಲೀಸರ ನಿರ್ಧಾರ - kanva Group Fraud case

ಕಣ್ವ ಗ್ರೂಪ್ ಗ್ರಾಹಕರಿಗೆ ಕೋಟಿ ಕೋಟಿ ಹಣ ವಂಚನೆ ಮಾಡಿ, ಹಣ ಕೊಡದೇ ಸತಾಯಿಸಿರುವ ಆರೋಪ ದಾಖಲಾಗಿದ್ದು, ನಗರ ಪೊಲೀಸ್ ಆಯುಕ್ತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ಅಥವಾ ಸಿಸಿಬಿಗೆ ಪ್ರಕರಣವನ್ನ ವರ್ಗಾಯಿಸಲು ಚಿಂತಾನೆ ನಡೆಸಿದ್ದಾರೆಂದು ತಿಳಿದು ಬಂದಿದೆ‌.

ಕಣ್ವ ಗ್ರೂಪ್ ಗ್ರಾಹಕರಿಗೆ ವಂಚನೆ

By

Published : Nov 4, 2019, 1:09 PM IST

ಬೆಂಗಳೂರು:ಕಣ್ವ ಕೋ ಆಪರೇಟಿವ್ ಸೊಸೈಟಿ ವಿರುದ್ದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕಣ್ವ ಗ್ರೂಪ್ ಕೂಡ ಐಎಂಎ ಮಾಲೀಕ ಮನ್ಸೂರ್ ಖಾನ್ ವಂಚನೆ ಮಾಡಿದ ರೀತಿನೆ ಕಣ್ವಾ ಗ್ರೂಪ್ ಗ್ರಾಹಕರಿಗೆ ಕೋಟಿ ಕೋಟಿ ಹಣ ವಂಚನೆ ಮಾಡಿ ಗ್ರಾಹಕರಿಗೆ ಹಣ ಕೊಡದೇ ಸತಾಯಿಸಿರುವ ಸಂಬಂಧ ದೂರು ದಾಖಲಾಗಿದೆ. ಹೀಗಾಗಿ, ನಗರ ಪೊಲೀಸ್ ಆಯುಕ್ತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಿಐಡಿಗೆ ಅಥವಾ ಸಿಸಿಬಿಗೆ ಪ್ರಕರಣವನ್ನ ನೀಡಲು ಚಿಂತಾನೆ ನಡೆಸಿದ್ದಾರೆಂದು ತಿಳಿದು ಬಂದಿದೆ‌.

ಜನರಿಗೆ ವಂಚನೆ ಮಾಡಿರುವ ಸಂಬಂಧಿಸಿದ ಆರೋಪಗಳ ಬಗೆಗಿನ ಪ್ರಕರಣಗಳನ್ನ ಸಿಐಡಿ ಹಾಗೆ ಸಿಬಿಐಗೆ ಹಸ್ತಾಂತರಿಸಲಾಗಿದ್ದು, ಉನ್ನತ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಹೀಗಾಗಿ ಕಣ್ವ ಗ್ರೂಪ್ ಕಂಪನಿ ಪ್ರಕರಣವನ್ನ ಉನ್ನತ ಮಟ್ಟದ ತನಿಖೆಗೆ ವಹಿಸಲು ನಿರ್ಧಾರ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಪೊಲೀಸ್​ ಮೂಲಗಳ ಪ್ರಕಾರ ಕಣ್ವ ಗ್ರೂಪ್​​ನಲ್ಲಿ ಕೋಟಿ ಕೊಟಿ ಹಣ ಹೂಡಿಕೆಯಾಗಿದ್ದು, ಹಲವಾರು ಗ್ರಾಹಕರಿಗೆ ವಂಚನೆಯಾಗಿದೆ. ಹೀಗಾಗಿ ನಿತ್ಯ ವಂಚನೆಗೊಳಗಾದವರು ಠಾಣೆ ಕದ ತಟ್ಟಿ ನ್ಯಾಯ ಒದಗಿಸುವಂತೆ ಮನವಿ ಮಾಡ್ತಿದ್ದಾರೆ. ಪೊಲೀಸರು ಕೂಡ ಕಣ್ವ ಕೋ ಆಪರೇಟಿವ್ ಬ್ಯಾಂಕ್ ಮಾಲೀಕ ನಂಜುಂಡಯ್ಯ ಅವರನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸಿ ಕಣ್ವ ಕರ್ಮಕಾಂಡ ಬಯಲಿಗೆಳೆಯಲು ಅಣಿಯಾಗಿದ್ದಾರೆ.

ABOUT THE AUTHOR

...view details