ಬೆಂಗಳೂರು: ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಕೇಳಿದ್ದ ಪ್ರಶ್ನೆಗೆ ನನ್ನ ಸ್ನೇಹಿತ ಕೆ.ಅಣ್ಣಾಮಲೈ ಅದ್ಭುತ ಆಫೀಸರ್ ಎಂದಿದ್ದ ಎಸ್ಪಿ ರವಿ ಡಿ.ಚನ್ನಣ್ಣನವರ್ ಅವರ ಉತ್ತರಕ್ಕೆ ಅಣ್ಣಾಮಲೈ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ರವಿ ಡಿ. ಚನ್ನಣ್ಣನವರ್ ಮಾತಿಗೆ ಅಣ್ಣಾಮಲೈ ಫಿದಾ... ಟ್ವೀಟ್ ಮೂಲಕ ಸಂತಸ - Ravi D.Channannavar
ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಕೇಳಿದ್ದ ಪ್ರಶ್ನೆಗೆ ನನ್ನ ಸ್ನೇಹಿತ ಕೆ.ಅಣ್ಣಾಮಲೈ ಅದ್ಭುತ ಆಫೀಸರ್ ಎಂದಿದ್ದ ಎಸ್ಪಿ ರವಿ ಡಿ.ಚನ್ನಣ್ಣನವರ್ ಉತ್ತರಕ್ಕೆ ಅಣ್ಣಾಮಲೈ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತಿಚೆಗೆ ಖಾಸಗಿ ಕಾಲೇಜಿನ ಕಾರ್ಯಕ್ರಮಕ್ಕೆ ತೆರಳಿದ ಎಸ್ಪಿ ರವಿ ಡಿ. ಚನ್ನಣ್ಣನವರ್ ಅವರಿಗೆ ವಿದ್ಯಾರ್ಥಿಯೋರ್ವ ಅಣ್ಣಾಮಲೈ ಹಾಗೂ ರವಿ ಡಿ. ಚನ್ನಣ್ಣನವರ್ ನಿಮ್ಮಿಬ್ಬರಲ್ಲಿ ಯಾರು ಅದ್ಭುತ ಆಫೀಸರ್ ಎಂದು ಪ್ರಶ್ನೆ ಕೇಳಿದ್ದ. ಈ ಪ್ರಶ್ನೆಗೆ ಚೆನ್ನಣ್ಣನವರ್ ಎಂದಿಗೂ ನನ್ನ ಸ್ನೇಹಿತ ಕೆ.ಅಣ್ಣಾಮಲೈ ಅದ್ಭುತ ಆಫೀಸರ್ ಎಂದಿದ್ದರು.
ಸದ್ಯ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾರತ ದೇಶದ ಸಿವಿಲ್ನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಶ್ರೇಷ್ಠರೇ. "ಎಲ್ಲಾ ಸರ್ವಶಕ್ತ ನದಿಗಳು ಕೊನೆಗೆ ಸೇರೋದು ಒಂದೇ ಜಾಗದಲ್ಲಿ" ರವಿ ಡಿ.ಚನ್ನಣ್ಣನವರ್ ಸರ್ ನನ್ನ ಬಗ್ಗೆ ಹೀಗೆ ಹೇಳಿದ್ದು ಖುಷಿ ತಂದಿದೆ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿ, ರವಿ ಡಿ.ಚೆನ್ನಣ್ಣನವರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.