ಕರ್ನಾಟಕ

karnataka

ETV Bharat / state

ಪೋಷಕ ಕಲಾವಿದರ ಕಷ್ಟಕ್ಕೆ ಸ್ಪಂದಿಸಿದ ಡಿಸಿಎಂ ಅಶ್ವತ್ಥ​ ನಾರಾಯಣ್ - Sandalwood actors

ಡಿಸಿಎಂ ಅಶ್ವತ್ಥ ನಾರಾಯಣ ಅವರ ಸಲಹೆ ಮೇರೆಗೆ ಕನ್ನಡ ಚಿತ್ರರಂಗದ 40 ಪೋಷಕ ಕಲಾವಿದರಿಗೆ ಅಲಿಯನ್ಸ್ ವಿಶ್ವವಿದ್ಯಾಲಯ ವತಿಯಿಂದ ಆರ್ಥಿಕ ನೆರವು ನೀಡಲಾಗಿದೆ.

ಡಿಸಿಎಂ ಅಶ್ವತ್ಥ್​​ ನಾರಾಯಣ್​
ಡಿಸಿಎಂ ಅಶ್ವತ್ಥ್​​ ನಾರಾಯಣ್​

By

Published : Aug 14, 2020, 7:37 AM IST

ಬೆಂಗಳೂರು: ಕೊರೊನಾಗೆ ಇಡೀ‌ ದೇಶವೇ ನಲುಗಿದೆ. ಇನ್ನು ಲಕ್ಷಾಂತರ ಜನರ ಬದುಕನ್ನ ಕೋವಿಡ್​ ಮಹಾಮಾರಿ ಕಿತ್ತುಕೊಂಡಿದೆ. ಇದರ ಎಫೆಕ್ಟ್ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ತಟ್ಟಿದೆ. ಸೀರಿಯಲ್ ಹಾಗೂ ಸಿನಿಮಾಗಳನ್ನ ನಂಬಿ ಜೀವನ‌ ನಡೆಸುತ್ತಿದ್ದ ನೂರಾರು ಪೋಷಕ ಕಲಾವಿದರು, ಸಿನಿಮಾ ಶೂಟಿಂಗ್ ಇಲ್ಲದೇ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಹಿರಿಯ ನಟಿಯರಾದ ಲಕ್ಷ್ಮಿದೇವಮ್ಮ, ಸುಲೋಚನಾ ರೈ, ಪೋಷಕ ಕಲಾವಿದ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಸದಸ್ಯರಾದ ಬ್ಯಾಂಕ್ ಜನಾರ್ದನ್, ವೆಂಕಟಾಚಲ, ಬಿರಾದಾರ್, ಆಡುಗೋಡಿ ಶ್ರೀನಿವಾಸ್, ಶೈಲಜಾ ಸೋಮಶೇಖರ್, ಭಾಗ್ಯಶ್ರೀ, ಸುರೇಶ್ ದಾವಣಗೆರೆ, ಭವ್ಯಶ್ರೀ, ಭಾಸ್ಕರ್, ಪುಷ್ಪಾ ಸ್ವಾಮಿ, ರಾಧಾ ರಾಮಚಂದ್ರ ಸೇರಿದಂತೆ ಹಲವು ಕಲಾವಿದರು ಕೆಲವು ದಿನಗಳ ಹಿಂದೆ, ಉಪ ಮುಖ್ಯಮಂತ್ರಿ ಡಾ ಸಿ.ಎನ್ ಅಶ್ವತ್ಥ​ ನಾರಾಯಣ್ ಅವ​ರನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ್ದರು.

ಇದೀಗ ಮನವಿಗೆ ಸ್ಪಂದಿಸಿರುವ ಡಿಸಿಎಂ ಅಶ್ವತ್ಥ ನಾರಾಯಣ್, ಕನ್ನಡ ಚಿತ್ರರಂಗದ 40 ಪೋಷಕ ಕಲಾವಿದರಿಗೆ ಅಲಿಯನ್ಸ್ ವಿಶ್ವವಿದ್ಯಾಲಯ ವತಿಯಿಂದ ಆರ್ಥಿಕ ನೆರವು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕ ಕಲಾವಿದರು ಇಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವ​ರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನು 60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿ ಜೀವನ ಸಾಗಿಸಲು ಅನುವು ಮಾಡಿಕೊಡುವಂತೆ, ಇದೇ ವೇಳೆ ಕಲಾವಿದರು ಡಿಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ABOUT THE AUTHOR

...view details