ಕರ್ನಾಟಕ

karnataka

ETV Bharat / state

ನ. 11ರಿಂದ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ಸಾಹಿತಿ ದೊಡ್ಡರಂಗೇಗೌಡ ಅಧ್ಯಕ್ಷತೆ: ಸಿಎಂ ಘೋಷಣೆ - ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನವೆಂಬರ್‌ 11,12,13ರಂದು ನಡೆಯಲಿದೆ. ಸಾಹಿತಿ ಡಾ.ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಸಲಾಗುವುದು. ಅಧ್ಯಕ್ಷತೆ ವಹಿಸಲು ದೊಡ್ಡ ರಂಗೇಗೌಡರು ಸಮ್ಮತಿ ನೀಡಿದ್ದು, ಅದ್ಧೂರಿಯಾಗಿ ನಡೆಸಲಾಗುತ್ತದೆ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಹೇಳಿದ್ದಾರೆ.

Etv Bharatkannada sahitya sammelana to be held in haveri from september 11
Etv Bharatನ. 11ರಿಂದ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಘೋಷಣೆ

By

Published : Aug 26, 2022, 9:45 PM IST

Updated : Aug 26, 2022, 10:51 PM IST

ಬೆಂಗಳೂರು:ಈ ಬಾರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನವೆಂಬರ್‌ 11, 12, 13ರಂದು ನಡೆಯಲಿದೆ. ಈ ಬಗ್ಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್​ನಲ್ಲಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಘೋಷಿಸಿದ್ದಾರೆ. ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ರಾಜ ಪರಿಷತ್ ಮಂದಿರ ಹಾಗೂ ಆವರಣದ ನವೀಕೃತ ಕಟ್ಟಡ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಸಿಎಂ, ನವೆಂಬರ್ 11, 12, 13 ರಂದು ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ರಜೆ ಇರುವ ಸಮಯದಲ್ಲಿ ಸಾಹಿತ್ಯ ಉತ್ಸವ ಮಾಡಲು ತೀರ್ಮಾನ ಮಾಡಿದ್ದೇವೆ. ಅಧ್ಯಕ್ಷತೆ ವಹಿಸಲು ದೊಡ್ಡ ರಂಗೇಗೌಡರು ಸಮ್ಮತಿ ನೀಡಿದ್ದು, ಅದ್ಧೂರಿಯಾಗಿ ನಡೆಸಲಾಗುತ್ತದೆ ಎಂದರು.

ನಾನು ಶಾಲೆಗೆ ಹೋಗುವಾಗ ಹಳೆಗನ್ನಡ ಅರ್ಥವಾಗಲ್ಲ ಎಂದು ಸರಳೀಕರಣ ಸಾರಾಂಶ ಇರುತ್ತಿದ್ದ ಗೈಡ್ ಓದುತ್ತಿದ್ದೆ. ಈಗ ಹಳೆಗನ್ನಡದ ಸರಳೀಕರಣ ಹೊಸಗನ್ನಡವಾಗಿದೆ. ಕನ್ನಡವನ್ನು ಆಳಿದ ಎಲ್ಲ ಸಂಸ್ಥಾನಿಕರು ಕನ್ನಡವನ್ನು ಶ್ರೀಮಂತಗೊಳಿಸಿಕೊಂಡೇ ಬಂದಿದ್ದಾರೆ. ಅದಕ್ಕಾಗಿ ನಮ್ಮದು ಇಷ್ಟು ಶ್ರೀಮಂತ ನಾಡಾಗಿದೆ. ಶ್ರೀಮಂತ ಪರಂಪರೆ ಇದೆ, ಆದರೆ ಭರವಸೆಯ ಭವಿಷ್ಯ ಬರೆಯುವ ಜವಾಬ್ದಾರಿ ನಮ್ಮದಿದೆ. ಹೀಗಾಗಿ ಕಸಾಪ ಜವಾಬ್ದಾರಿ ಬಹಳ ದೊಡ್ಡದಿದೆ ಎಂದರು.

ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ: ಕನ್ನಡದ ಬಗ್ಗೆ ಹಲವು ತೀರ್ಮಾನ ಮಾಡಿದ್ದೇವೆ, ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯನ್ನು ಪದವಿ ಮತ್ತು ವೃತ್ತಿಯ ಶಿಕ್ಷಣದಲ್ಲಿ ಪ್ರಥಮ ಬಾರಿ ಅಳವಡಿಸಿದ್ದೇವೆ. ಮೊದಲ ಸೆಮಿಸ್ಟರ್​​ನಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಬರೆದಿದ್ದಾರೆ ಎನ್ನುವುದು ನಮಗೆ ಸಂತಸದ ವಿಚಾರ, ಬಹಳಷ್ಟು ಕನ್ನಡದ ಕೆಲಸ ಮಾಡುತ್ತಿದ್ದೇವೆ. ನಾಗಾಭರಣ ನೇತೃತ್ವದಲ್ಲಿ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಸಿದ್ಧಪಡಿಸಿ ಕೊಟ್ಟಿದ್ದಾರೆ ಮುಂದಿನ ಅಧಿವೇಶನದಲ್ಲಿ ಇಡಲಿದ್ದೇನೆ. ವಿಧಾನಸಭೆಯಲ್ಲಿ ಪಾಸ್ ಮಾಡಿದರೆ ಅದಕ್ಕೆ ಅರ್ಥ ಬರಲಿದೆ. ಹಾಗಾಗಿ ಇಲ್ಲಿಯೇ ಚರ್ಚೆಗೆ ಅವಕಾಶ ಕಲ್ಪಿಸಿ ಎಂದು ತಿಳಿಸಿದರು.

ಗೋವಾ, ಕಾಸರಗೋಡಿನಲ್ಲಿ ಕನ್ನಡ ಭವನ:ನಾವು ಗಡಿನಾಡ ಕನ್ನಡಿಗರನ್ನು ಮರೆತಿಲ್ಲ. ಗೋವಾ ಕನ್ನಡಿಗರಿಗೆ ಕನ್ನಡ ಭವನ, ಕಾಸರಗೋಡಿನಲ್ಲಿಯೂ ಇದೇ ವರ್ಷ ಕನ್ನಡ ಭವನ ಮಾಡಲಿದ್ದೇವೆ. ಗಡಿ ಭಾಗದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಕನ್ನಡ ಶಾಲೆ ಮುಚ್ಚುವುದಿಲ್ಲ:ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕನ್ನಡ ಶಾಲೆಗಳ ಮುಚ್ಚುವ ಪ್ರಶ್ನೆಯೇ ಇಲ್ಲ. ಆದರೆ ಕೇವಲ ಐದಾರು ಮಕ್ಕಳು ಮಾತ್ರ ಇರುವ ಕನ್ನಡ ಶಾಲೆಗಳನ್ನು ಏನು ಮಾಡಬಹುದು ಎಂದು ಕಸಾಪ ಸಲಹೆ ನೀಡಿದರೆ, ಅದರಂತೆ ಮುಂದುವರೆಯಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಹೈಕಮಾಂಡ್ ಜೊತೆ ಚರ್ಚೆ: ಬಿಎಸ್​ವೈ

Last Updated : Aug 26, 2022, 10:51 PM IST

ABOUT THE AUTHOR

...view details