ಬೆಂಗಳೂರು:ಸಿಲಿಕಾನ್ ಸಿಟಿಯ ರಸ್ತೆಗಳ ಪರಿಸ್ಥಿತಿಗೆ ಬೇಸತ್ತಿರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ಗುಂಡಿಗಳಿಗೆ ಪೂಜೆ ವಿಭಿನ್ನ ಹಾಗೂ ವಿಶೇಷ ಪೂಜೆ ಮೂಲಕ ಪ್ರತಿಭಟನೆ ಮಾಡಿದರು.
ಸಿಎಂ, ಮೇಯರ್ ಮತ್ತು ಕಮೀಷನರ್ ಫೋಟೊಗಳನ್ನು ರಸ್ತೆಯ ಗುಂಡಿಗಳಲ್ಲಿಟ್ಟು ವಿಶೇಷ ಪೂಜೆ, ಮಾಡುವ ಮೂಲಕ ಸಿಎಂ ಬಿ ಎಸ್ ಯಡಿಯೂರಪ್ಪ, ಮೇಯರ್ ಗೌತಮ್ ಕುಮಾರ್, ಕಮೀಷನರ್ ಅನಿಲ್ ಕುಮಾರ್ ಅವರಿಗೆ ನೋಡಿ ಸ್ವಾಮಿ, ನಮ್ಮ ಪರಿಸ್ಥಿತಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.ಹೂವಿನಹಾರ ಹಾಕಿ, ತೆಂಗಿನಕಾಯಿ ಒಡೆದು ಪೂಜೆ ಮಾಡಿ ಗುಂಡಿಯಲ್ಲೇ ಪಂಚಾಮೃತ ಅಭಿಷೇಕ ಮಾಡುವ ಮೂಲಕ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನೇರವಾಗಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.